ಕಾಯುವಿಕೆ ಅಂತ್ಯ; ಅ. 6ರಂದು ಮಾರುತಿ ಸುಜುಕಿ ಸಿಯಾಝ್ ಬಿಡುಗಡೆ

By Nagaraja

ಅಂತೂ ಇಂತೂ ಕಾಯುವಿಕೆಗೆ ವಿರಾಮ ಬಿದ್ದಿದೆ. ಬಹುನಿರೀಕ್ಷಿತ ಮಾರುತಿ ಸಿಯಾಝ್ ಮಿಡ್ ಸೈಜ್ ಪ್ರೀಮಿಯಂ ಸೆಡಾನ್ ಕಾರು ಭಾರತ ಮಾರುಕಟ್ಟೆಯನ್ನು ಅಕ್ಟೋಬರ್ 6ರಂದು ಪ್ರವೇಶಿಸಲಿದೆ.

ಈ ಬಗ್ಗೆ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 2014 ಅಕ್ಟೋಬರ್ 6ರಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಹೋಟೆಲ್ ತಾಜ್ ವೆಸ್ಟ್ ಈಂಡ್‌ನ ಬಾಲ್ ರೂಂನಲ್ಲಿ ಹೊಸ ಸಿಯಾಝ್ ಲೋಕಾರ್ಪಣೆಯಾಗಲಿದೆ.

Maruti Ciaz

ಇದರೊಂದಿಗೆ ಮಾರುತಿ ಸಿಯಾಝ್ ದೀಪಾವಳಿ ಹಬ್ಬದ ಆವೃತ್ತಿಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಿದೆ. ನಿರ್ಮಾಣ ಸ್ಥಗಿತಗೊಳಿಸಿರುವ ಎಸ್‌ಎಕ್ಸ್4 ಉತ್ತರಾಧಿಯಾಗಿರುವ ಮಾರುತಿ ಸಿಯಾಝ್ ಅನೇಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಜನಪ್ರಿಯ ಹೋಂಡಾ ಸಿಟಿ, ಹ್ಯುಂಡೈ ವರ್ನಾಗಳಂತಹ ಮಾದರಿಗಳಿಗೆ ಪೈಪೋಟಿ ನೀಡಲಿದೆ.

ಈಗಾಗಲೇ ಬುಕ್ಕಿಂಗ್ ಆರಂಭಿಸಿರುವ ಸಿಯಾಝ್‌ಗೆ ಭಾರಿ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವಲ್ಲಿ ಸಂಸ್ಥೆ ಯಶಸ್ವಿಯಾಗಿತ್ತು. ಇದು ತಲಾ ನಾಲ್ಕು ಪೆಟ್ರೋಲ್ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಇದರ ಪೆಟ್ರೋಲ್ ಎಂಜಿನ್ 1.4 ಲೀಟರ್ ಕೆ ಸಿರೀಸ್ (91 ಅಶ್ವಶಕ್ತಿ, 130 ಎನ್‌ಎಂ) ಮತ್ತು 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್‌ನಿಂದ (89 ಅಶ್ವಶಕ್ತಿ, 200 ಎನ್‌ಎಂ ಟಾರ್ಕ್) ನಿಯಂತ್ರಿಸಲ್ಪಡಲಿದೆ. ಇವೆರಡು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ. ಆದರೂ ಕೆಲವು ಆಯ್ದ ಮಾದರಿಗಳಲ್ಲಿ 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರಲಿದೆ.

ಇನ್ನು ಮಾರುತಿ ಸಿಯಾಜ್ 7.5 ಲಕ್ಷ ರು.ಗಳಿಂದ 11.5 ಲಕ್ಷ ರು.ಗಳ ದರ ರೇಂಜ್‌ನಲ್ಲಿ ಆಗಮನವಾಗುವ ನಿರೀಕ್ಷೆಯಿದೆ.

Most Read Articles

Kannada
English summary
Maruti Ciaz Launching On October 6, 2014
Story first published: Tuesday, September 30, 2014, 9:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X