ಮಾರುತಿಯಿಂದ ಎರ್ಟಿಗಾ ಡೀಸೆಲ್ ಆಟೋಮ್ಯಾಟಿಕ್ ಕಾರು

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಂಸ್ಥೆಯು, ಕೇವಲ ಸಣ್ಣ ಕಾರು ಪ್ರಯಾಣಿಕ ವಿಭಾಗದಲ್ಲಿ ಮಾತ್ರವಲ್ಲದೆ ಎರ್ಟಿಗಾ ಮೂಲಕ ಬಹು ಬಳಕೆಯ ವಿಭಾಗದಲ್ಲೂ ತನ್ನ ಅಧಿಪತ್ಯ ಸ್ಥಾಪಿಸಿತ್ತು.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಎರ್ಟಿಗಾ ಪೆಟ್ರೋಲ್, ಡೀಸೆಲ್ ಜೊತೆಗೆ ಸಿಎನ್‌ಜಿ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದೀಗ ಸಂಸ್ಥೆಯು ಎರ್ಟಿಗಾ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

maruti suzuki ertiga

ಮಾರುತಿಯಿಂದ ಬಿಡುಗಡೆಯಾಗಿರುವ ಸೆಲೆರಿಯೊ ಎಎಂಟಿ ಮಾದರಿಗೆ ಅತಿ ಹೆಚ್ಚಿನ ಬೇಡಿಕೆ ಕಂಡುಬಂದಿತ್ತು. ಇದರಿಂದ ಉತ್ಸಾಹಿತಗೊಂಡಿರುವ ಸಂಸ್ಥೆಯು ಎರ್ಟಿಗಾ ಮಾದರಿಯಲ್ಲೂ ಮ್ಯಾಜಿಕ್ ಮಾಡುವ ನಿರೀಕ್ಷೆಯನ್ನು ಹೊಂದಿದೆ.

ಅಷ್ಟೇ ಯಾಕೆ ಮಾರುತಿಯ ಸರ್ವಕಾಲಿಕ ಕಾಂಪಾಕ್ಟ್ ಸೆಡಾನ್ ಕಾರುಗಳಲ್ಲಿ ಒಂದಾಗಿರುವ ಸ್ವಿಫ್ಟ್ ಡಿಜೈರ್ ಎಎಂಟಿ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಮಾರುತಿ ಹೊಂದಿದೆ. ಇವೆಲ್ಲಕ್ಕೂ ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಸ್ಪಷ್ಟವಾದ ಉತ್ತರ ದೊರಕಲಿದೆ.

Most Read Articles

Kannada
English summary
Maruti plans to launch AMT in Swift Dzire and Ertiga diesel cars
Story first published: Saturday, December 27, 2014, 13:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X