69,555ರಷ್ಟು ಡೀಸೆಲ್ ಕಾರುಗಳನ್ನು ಹಿಂಪಡೆದ ಮಾರುತಿ

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಸ್ವಿಫ್ಟ್, ಡಿಜೈರ್ ಮತ್ತು ರಿಟ್ಜ್ ಸೇರಿದಂತೆ 69,555 ಯುನಿಟ್‌ಗಳಷ್ಟು ಡೀಸೆಲ್ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ.

ವೈರಿಂಗ್ ಸಲಕರಣೆಯಲ್ಲಿ ತೊಂದರೆ ಕಂಡುಬಂದಿರುವ ಹಿನ್ನಲೆಯಲ್ಲಿ ಮಾರುತಿ ಇಂತಹದೊಂದು ನಿರ್ಧಾರಕ್ಕೆ ಮುಂದಾಗಿದೆ.

Maruti Suzuki

ರಿಕಾಲ್ ವಿವರ ಇಂತಿದೆ (ಯುನಿಟ್‌ಗಳಲ್ಲಿ)
ಹಳೆಯ ಡಿಜೈರ್ - 55,938
ಹಳೆಯ ಸ್ವಿಫ್ಟ್ - 12,486
ರಿಟ್ಜ್ - 1,131

2010 ಮಾರ್ಚ್ 8ರಿಂದ 2013 ಆಗಸ್ಟನ್ 11ರ ವರೆಗಿನ ಅವಧಿಯಲ್ಲಿ ನಿರ್ಮಾಣವಾಗಿರುವ ಮೇಲೆ ತಿಳಿಸಿದ ಮಾದರಿಗಳನ್ನು ಹಿಂಪಡೆಯಲು ಮಾರುತಿ ನಿರ್ಧರಿಸಿದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಸಂಸ್ಥೆಯು ವೈರಿಂಗ್ ಸಲಕರಣೆಯಲ್ಲಿ ತೊಂದರೆ ಇರುವುದರ ಬಗ್ಗೆ ದೂರು ದಾಖಲಾಗಿದ್ದು, ಇದರಿಂದಾಗಿ ನಿರ್ದಿಷ್ಟ ಮಾದರಿಗಳನ್ನು ಹಿಂಪಡೆದು ಸಂಪೂರ್ಣ ಉಚಿತವಾಗಿ ದೋಷ ನಿವಾರಿಸಿ ಕೊಡಲಾಗುವುದು ಎಂದಿದೆ.

ಅಷ್ಟಕ್ಕೂ ಮೇಲೆ ತಿಳಿಸಿದಂತೆಯೇ ನಿಮ್ಮ ಮಾರುತಿ ಕಾರು ಇದರಲ್ಲಿ ಒಳಪಟ್ಟಿದೆಯೇ ಎಂಬದನ್ನು ತಿಳಿದುಕೊಳ್ಳಲು ಮಾರುತಿ ಅಧಿಕೃತ ವೆಬ್‌ಸೈಟ್‌ಗೆ (ಇಲ್ಲಿದೆ ಲಿಂಕ್) ಭೇಟಿ ಕೊಟ್ಟು ನಿಮ್ಮ ಚಾಸೀ ನಂಬರ್ ಹಾಕಿ ಪರಿಶೀಲಿಸಿ ನೋಡಿ. ವಿ. ಸೂ: ಎಎ3 ಅಥವಾ ಎಂಬಿಎಚ್ ಬಳಿಕ 14 ಅಂಕಿಗಳ ನಂಬರ್ ದಾಖಲಿಸಬೇಕು.

Most Read Articles

Kannada
English summary
Maruti Suzuki, India's largest carmaker in terms of sales, has recalled 69,555 diesel cars to rectify a problem with their wiring harnesses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X