ಬಿಡುಗಡೆಗೂ ಮುನ್ನ ಮಾರುತಿ ಸಿಯಾಝ್ ದಾಖಲೆ ಬುಕ್ಕಿಂಗ್

By Nagaraja

ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಕಾಣಲಿರುವ ಮಾರುತಿ ಸಿಜುಕಿ ಸಿಯಾಝ್ ಸೆಡಾನ್ ಕಾರಿನ ಬುಕ್ಕಿಂಗ್ ಭರಾಟೆ ಬಲು ಜೋರಾಗಿಯೇ ನಡೆಯುತ್ತಿದೆ. ವರದಿಗಳ ಪ್ರಕಾರ ಸಿಯಾಝ್ ಬಿಡುಗಡೆಗೂ ಮುನ್ನವೇ ದಾಖಲೆ ಸಂಖ್ಯೆಯ ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ.

ಹಬ್ಬದ ಆವೃತ್ತಿಯ ಸಂಭ್ರಮದ ವೇಳೆ ಅಂದರೆ ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆ ಭಾಗ್ಯ ಪಡೆಯಲಿರುವ ಮಾರುತಿ ಸಿಯಾಝ್ ಈ ನಡುವೆ 6,000ಗಿಂತಲೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ.

ಎಂಜಿನ್
ಪೆಟ್ರೋಲ್ - 1.4 ಲೀಟರ್ ಕೆ ಸಿರೀಸ್ (92 ಅಶ್ವಶಕ್ತಿ, 130 ಎನ್‌ಎಂ ಟಾರ್ಕ್)
ಡೀಸೆಲ್ - ಫಿಯೆಟ್‌ನಿಂದ ಆಮದು ಮಾಡಲಾದ 1.3 ಲೀಟರ್ ಎಂಜಿನ್ (90 ಅಶ್ವಶಕ್ತಿ, 200 ಎನ್‌ಎಂ ಟಾರ್ಕ್)

Maruti Suzuki Ciaz

ಮೈಲೇಜ್ (ಪ್ರತಿ ಲೀಟರ್‌ಗೆ)
ಪೆಟ್ರೋಲ್ - 20.7 ಕೀ.ಮೀ.
ಡೀಸೆಲ್ - 26.2 ಕೀ.ಮೀ.

ಪ್ರಸಕ್ತ ಸಾಲಿನಲ್ಲಿ ದೇಶದ ಅತಿ ದೊಡ್ಡ ಲಾಂಚ್‌ಗಳಲ್ಲಿ ಒಂದಾಗಲಿರುವ ಸಿಯಾಝ್, ನಿರ್ಮಾಣ ನಿಂತು ಹೋಗಿರುವ ಎಸ್‌ಎಕ್ಸ್4 ಸ್ಥಾನವನ್ನು ತುಂಬಿಕೊಳ್ಳಲಿದೆ. ಅಲ್ಲದೆ 2014 ಹೋಂಡಾ ಸಿಟಿ ಹಾಗೂ ಹ್ಯುಂಡೈ ವರ್ನಾ ಮಾದರಿಗಳಿಗೆ ನೇರ ಪ್ರತಿಸ್ಪರ್ಧೆ ಒಡ್ಡಲಿದೆ.

ಡೀಸೆಲ್ ಹಾಗೂ ಪೆಟ್ರೋಲ್ ಜೊತೆಗೆ ಪೆಟ್ರೋಲ್ ಆಟೋಮ್ಯಾಟಿಕ್ ವೆರಿಯಂಟ್‌ನಲ್ಲೂ ಸಿಯಾಝ್ ಲಭ್ಯವಾಗಲಿದೆ. ಇದರ ಆಟೋಮ್ಯಾಟಿಕ್ ವೆರಿಯಂಟ್ ಭಾರತ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಪ್ರತಿ ಲೀಟರ್‌ಗೆ 19.12 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದ್ದು, ಈ ವಿಭಾಗದ ಅತ್ಯಂತ ಇಂಧನ ದಕ್ಷತೆಯ ಕಾರೆನಿಸಿಕೊಳ್ಳಲಿದೆ.

ಸಿಯಾಝ್ ಮುಂಗಡ ಬುಕ್ಕಿಂಗ್ ಬಯಸವವರು ರು. 21,000 ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ (ಡೀಲರುಗಳನ್ನು ಸಂಪರ್ಕಿಸಿ). ಇನ್ನು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, 16 ಇಂಚಿನ ಅಲಾಯ್ ವೀಲ್, ಟಚ್ ಸ್ಕ್ರೀನ್ ಮನರಂಜನಾ ವ್ಯವಸ್ಥೆ, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಕ್ಲೈಮೇಟ್ ಕಂಟ್ರೋಲ್, ಎಬಿಎಸ್ ಜೊತೆ ಎರಡು ಏರ್ ಬ್ಯಾಗ್, ರಿಯರ್ ಎಸಿ ವೆಂಟ್ಸ್, ಬ್ಲೂಟೂತ್ ಫೋನ್ ಕನೆಕ್ಟಿವಿಟಿ ಮತ್ತು ಫುಶ್ ಬಟನ್ ಸ್ಟಾರ್ಟ್ ಸ್ಟಾಪ್ ಸಿಸ್ಟಂ ಸಹಿತ ಇನ್ನಿತರ ಸೌಲಭ್ಯಗಳು ಮಾರುತಿ ಸಿಯಾಝ್‌ನಲ್ಲಿ ಲಭ್ಯವಿರಲಿದೆ.

Most Read Articles

Kannada
English summary
Maruti Suzuki Ciaz Record Booking Prior To Launch
Story first published: Thursday, September 18, 2014, 11:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X