ಮಾರುಕಟ್ಟೆ ಸಿಯಾಝ್ ಬಿಡುಗಡೆ ಇನ್ನು ಹತ್ತಿರ

By Nagaraja

ಕಾರು ಗ್ರಾಹಕರು ಅತಿ ಹೆಚ್ಚು ನಿರೀಕ್ಷೆಯನ್ನಿಟ್ಟುಕೊಂಡಿರುವ ಬಹುನಿರೀಕ್ಷಿತ ಮಾರುತಿ ಸಿಯಾಝ್ ಸೆಡಾನ್ ಕಾರು ಯಾವುದೇ ಕ್ಷಣ ಬೇಕಾದರೂ ಮಾರುಕಟ್ಟೆ ಪ್ರವೇಶಿಸಬಹುದು.

ಈ ಬಗ್ಗೆ ಪೂರಕ ವರದಿಗಳು ಬಂದಿದ್ದು, ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಇವೆಲ್ಲಕ್ಕೂ ಕಂಪನಿಯಿಂದ ಸ್ಪಷ್ಟ ಮಾಹಿತಿಗಳು ಬಂದಿಲ್ಲ.

Maruti Suzuki

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿದ್ದ ಮಾರುತಿ ಸಿಯಾಝ್ ಈಗಾಗಲೇ ಹಲವಾರು ಬಾರಿ ರಸ್ತೆ ಪರೀಕ್ಷೆ ವೇಳೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿವೆ. ಇದೀಗ ಅಂತಿಮ ಹಂತದಲ್ಲಿರುವ ಮುಂಬರುವ ಹಬ್ಬದ ಆವೃತ್ತಿಯ ವೇಳೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ.

ಪೆಟ್ರೋಲ್ ಸಹಿತ ಡೀಸೆಲ್ ಸಿಯಾಝ್ ಲಭ್ಯವಿರಲಿದೆ. ಇದು 1.6 ಲೀಟರ್ ಪೆಟ್ರೋಲ್ ಹಾಗೆಯೇ 1.3 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಇವೆರಡು ಅನುಕ್ರಮವಾಗಿ 103 ಹಾಗೂ 88 ಅಶ್ವಶಕ್ತಿ ಉತ್ಪಾದಿಸಲಿದೆ.

ಮಾರುತಿ ಸಿಯಾಝ್ ತನ್ನದೇ ಆದ ವಿಶಿಷ್ಟ ಹಾಗೂ ಆಧುನಿಕ ವಿನ್ಯಾಸ ಹೊಂದಿರಲಿದೆ. ಇದರಲ್ಲಿ ಪ್ರೀಮಿಯಂ ನೋಟಕ್ಕೆ ಆದ್ಯತೆ ಕೊಡಲಾಗಿದೆ. ಪ್ರಮುಖವಾಗಿಯೂ ಎಸ್‌ಎಕ್ಸ್4 ಬದಲಿ ಕಾರಾಗಲಿರುವ ಸಿಯಾಝ್ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಳ್ಳುವ ನಿರೀಕ್ಷೆಯಿದೆ.

ಅಂತೆಯೇ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹೋಂಡಾ ಸಿಟಿ, ಹ್ಯುಂಡೈ ವರ್ನಾ, ಸ್ಕೋಡಾ ರಾಪಿಡ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಮಾದರಿಗಳಿಗೆ ಹೊಸ ಸಿಯಾಝ್ ಪ್ರತಿಸ್ಪರ್ಧಿಯೆನಿಸಲಿದೆ. ಇದು ಅಂದಾಜು 7ರಿಂದ 9 ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆಗಿಳಿಯುವ ಸಾಧ್ಯತೆಯಿದೆ.

Most Read Articles

Kannada
English summary
The most successful four wheeler in India is Japanese automobile giant Maruti Suzuki. At the recent 2014 Auto Expo held in New Delhi they revealed a few of its products that they would be launching in India. The Japanese automobile giant had showcased concept vehicles for Asia specifically.
Story first published: Tuesday, August 19, 2014, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X