ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್ ಬಿಡುಗಡೆ

By Nagaraja

ಆಲ್ಟೊ ಕೆ10 ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಇನ್ನೇನು ಕೆಲವೇ ದಿನಗಳಲ್ಲಿ ರಸ್ತೆ ಪ್ರವೇಶಿಸಲಿರುವಂತೆಯೇ ಮಗದೊಂದು ಆಕರ್ಷಕ ಕಾರಿನ ಬಿಡುಗಡೆಗೆ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ತಯಾರಿ ನಡೆಸುತ್ತಿದೆ.

ಹೌದು, ದೇಶದ ರಸ್ತೆಯಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ಮಾರುತಿ ಸುಜುಕಿ ಸ್ವಿಫ್ಟ್ ಹೊಸ ರೂಪ ಪಡೆದುಕೊಳ್ಳಲಿದೆ. ಹಲವಾರು ಬದಲಾವಣೆಗಳೊಂದಿಗೆ ಪರಿಷ್ಕೃತ ಸ್ವಿಫ್ಟ್ ನಿಕಟ ಭವಿಷ್ಯದಲ್ಲೇ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ ಎರಡನೇ ತಲೆಮಾರಿನ ಸ್ವಿಫ್ಟ್ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದ್ದು, ಮುಂದಿನ ನಾಲ್ಕೈದು ವಾರಗಳಲ್ಲೇ ಪ್ರದರ್ಶನ ಮಳಿಗೆಯನ್ನು ತಲುಪಲಿದೆ. ನಿಮ್ಮ ಮಾಹಿತಿಗಾಗಿ, ಸ್ವಿಫ್ಟ್ ಬೆನ್ನಲ್ಲೇ ಎರಡನೇ ಜನಾಗಂದ ಸ್ವಿಫ್ಟ್ ಡಿಜೈರ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್ ಬಿಡುಗಡೆ

ಕಾರಿನ ಹೊರಗಡೆ ಹೊಸ ಬಂಪರ್, ದೊಡ್ಡದಾದ ಏರ್ ಡ್ಯಾಮ್, ಪರಿಷ್ಕೃತ ಫಾಲ್ ಲ್ಯಾಂಪ್ ಮುಂತಾದ ಸೌಲಭ್ಯಗಳು ಇರಲಿದೆ. ಅದೇ ರೀತಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಇನ್ನಷ್ಟು ಆಕರ್ಷಕವಾಗಿಸಲಿದೆ. ಹೊಸ ಡಿಜೈರ್ ಸಹ ಇದಕ್ಕೆ ಸಮಾನವಾದ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್ ಬಿಡುಗಡೆ

ಉನ್ನತ ಸ್ವಿಫ್ಟ್ ಹಾಗೂ ಡಿಜೈರ್ ಮಾದರಿಗಳು ಹೊಸತಾದ ಅಲಾಯ್ ವೀಲ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಪಡೆದುಕೊಳ್ಳಲಿದೆ. ಅದೇ ಹೊತ್ತಿಗೆ ಸಾಮಾನ್ಯ ಮಾದರಿಗಲು ಹೊಸ ಡಿಸೈನ್ ವೀಲ್ ಕ್ಯಾಪ್ ಪಡೆಯಲಿದೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್ ಬಿಡುಗಡೆ

ಇದರೊಂದಿಗೆ ಹೊಸ ಬಣ್ಣಗಳ ಆಯ್ಕೆಯನ್ನು ನೀವು ಅನುಭವಿಸಬಹುದಾಗಿದೆ. ಇನ್ನು ಕಾರಿನೊಳಗೆ ವಿದ್ಯುನ್ಮಾನವಾಗಿ ಬಾಗಿಸಬಹುದಾದ ವಿಂಗ್ ಮಿರರ್, ಪುಶ್ ಬಟನ್ ಸ್ಟಾರ್ಟ್ ಜೊತೆ ಸ್ಮಾರ್ಟ್ ಕೀ ಆಸೆಸ್, ಹೊಸತಾದ ಹೋದಿಕೆ ಮತ್ತು ಆರು ಸ್ಪೀಕರುಗಳ ಸೌಂಡ್ ಸಿಸ್ಟಂ ಪಡೆಯಲಿದೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್ ಬಿಡುಗಡೆ

ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನಲ್ಲಿ ಕಪ್ಪು ವರ್ಣದ ಒಳಮೈ ಮುಂದುವರಿಯಲಿದ್ದು, ಡಿಜೈರ್ ಕಾರು ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ಪಡೆಯಲಿದೆ. ಮಗದೊಂದು ಆಕರ್ಷಣೆಯೆಂದರೆ ಮಿಡ್ ಸೈಜ್ ಡಿಜೈರ್ ಸಹ ಎಬಿಎಸ್ ಪಡೆದುಕೊಳ್ಳಲಿದೆ.

ಅತಿ ಶೀಘ್ರದಲ್ಲೇ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್ ಬಿಡುಗಡೆ

ತಾಂತ್ರಿಕವಾಗಿ ಎಂಜಿನ್ ಮಾನದಂಡಗಳಲ್ಲಿ ಬದಲಾವಣೆಗಳು ಕಂಡುಬರುವುದಿಲ್ಲ. ಹಾಗಿದ್ದರೂ ಉತ್ತಮ ಇಂಧನ ಕ್ಷಮತೆಗಾಗಿ 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಮತ್ತು 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಟ್ಯೂನ್ ಮಾಡುವ ಸಾಧ್ಯತೆಯಿದೆ.

Most Read Articles

Kannada
English summary
Dealers have commenced bookings for the 2014 Swift for a token amount of INR 25,000.
Story first published: Tuesday, October 28, 2014, 12:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X