ಮಾರುತಿ ಸುಜುಕಿ ವ್ಯಾಗನಾರ್ ಕ್ರೆಸ್ಟ್ ಸೀಮಿತ ಆವೃತ್ತಿ ಬಿಡುಗಡೆ

By Nagaraja

ಕಳೆದ ದಿನವಷ್ಟೇ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಸ್ವಿಫ್ಟ್ ಸಿಲ್ವರ್ ಪ್ಲಸ್ ಮ್ತತು ಡಿಜೈರ್ ರಿಗಲಿಯಾ ಮಾದರಿಗಳನ್ನು ಪರಿಚಯಿಸಿರುವ ಬಗ್ಗೆ ಮಾಹಿತ ಕೊಟ್ಟಿದ್ದೆವು [].

ಇದರ ಬೆನ್ನಲ್ಲೇ ದೇಶದ ನಂ.1 ಕಾರು ಸಂಸ್ಥೆಯಾಗಿರುವ ಮಾರುತಿ, ತನ್ನ ಮಗದೊಂದು ಜನಪ್ರಿಯ ಆವೃತ್ತಿಯಾಗಿರುವ ವ್ಯಾಗನಾರ್ ಕ್ರೆಸ್ಟ್ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

Maruti Suzuki

ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೀಪಾವಳಿ ಹಬ್ಬದ ಆವೃತ್ತಿ ಇನ್ನೇನು ಆರಂಭವಾಗಲಿರುವಂತೆಯೇ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ವಾಹನ ಸಂಸ್ಥೆಗಳು ತಲ್ಲೀನವಾಗಿದೆ. ಇದರಂತೆ ಮಾರುತಿ ಸಂಸ್ಥೆಯು ವ್ಯಾಗನಾರ್ ಸೀಮಿತ ಆವೃತ್ತಿಯನ್ನು ಪರಿಚಯಿಸುತ್ತಿದೆ. ಇದು ಹೊಸ ಗ್ರಿಲ್ ಮತ್ತು ಕಾರಿನ ಒಳಗಡೆ ಕೆಲವೊಂದು ಮಾರ್ಪಾಡುಗಳನ್ನು ಪಡೆದುಕೊಳ್ಳಲಿದೆ.

ಈಗಿರುವ ವ್ಯಾಗನಾರ್ ವೆರಿಯಂಟ್‌ಗಳ ಜೊತೆಗೆ ಕ್ರೆಸ್ಟ್ ವಿಶೇಷ ಮಾದರಿಯನ್ನು ಮಾರುತಿ ಪರಿಚಯಿಸುತ್ತಿದೆ. ಈ ಮೂಲಕ ಅತಿ ಹೆಚ್ಚು ಮಾರಾಟವಾಗುತ್ತಿರುವ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ಕ್ರೆಸ್ಟ್, ಗ್ರಾಹಕರಿಗೆ ಹಣಕ್ಕೆ ತಕ್ಕ ಮೌಲ್ಯ ನೀಡಲಿದೆ.

ಮುಂದುಗಡೆ ಹೊಸ ಗ್ರಿಲ್, ಫ್ರಂಟ್ ಬಂಪರ್ ಮತ್ತು ಬಾಡಿ ಗ್ರಾಫಿಕ್ಸ್ ಲಭ್ಯವಿರಲಿದೆ. ಅದೇ ರೀತಿ ಡಬಲ್ ಡಿನ್ ಆಡಿಯೋ ಸಿಸ್ಟಂ, ಬ್ಲೂಟೂತ್, ಹೊಸ ಸೀಟು ಕವರ್ ಮತ್ತು ಸ್ಟೀರಿಗ್ ವೀಲ್ ಕವರ್ ಸೌಲಭ್ಯ ಇರಲಿದೆ.

ಇದಲ್ಲದೆ ಗ್ರಾಹಕರು ಹೆಚ್ಚುವರಿಯಾಗಿ ಹೊಸ ಫ್ಲೋರ್ ಮ್ಯಾಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾನ್ ಜೊತೆ ಡಿಜಿಟಲ್ ಡಿಸ್‌ಪ್ಲೇಸ ಕೀಲೆಸ್ ಸೆಂಟ್ರಲ್ ಲಾಕಿಂಗ್, ಮಡ್ ಫ್ಲಾಪ್ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಇವೆಲ್ಲವೂ 32.5 ಸಾವಿರ ರು.ಗಳಷ್ಟು ದುಬಾರಿಯಾಗಲಿದ್ದು, ಹೆಚ್ಚವರಿ 22.5 ರು.ಗಳ ಪ್ಯಾಕೇಜ್ ಖರೀದಿಸುವುದರೊಂದಿಗೆ ಗ್ರಾಹಕರು ಹತ್ತು ಸಾವಿರ ಉಳಿತಾಯ ಮಾಡಬಹುದಾಗಿದೆ.

ಅಂದ ಹಾಗೆ ಮಾರುತಿ ವ್ಯಾಗನಾರ್ 1.0 ಲೀಟರ್ 3 ಸಿಲಿಂಡರ್ ಕೆ10 ಎಂಜಿನ್‌ನಿಂದ ನಿಯಂತ್ರಿಸ್ಪಡುತ್ತಿದ್ದು, 68 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಪ್ರತಿ ಲೀಟರ್‌ಗೆ 20.5 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಅಂತೆಯೇ ಇದರ ಸಿಎನ್‌ಜಿ ವೆರಿಯಂಟ್ 26.6 ಕೀ.ಮೀ. ಹಾಗೂ ಎಲ್‌ಪಿಜಿ 14.6 ಕೀ.ಮೀ. ಮೈಲೇಜ್ ನೀಡಲಿದೆ.

Most Read Articles

Kannada
English summary
Maruti Suzuki has launched a new limited edition model in its popular hatchback WagonR. Called the WagonR Krest, it gets a host of additional features like a new front grille, slightly redone front bumper and a set of body graphics. 
Story first published: Tuesday, September 23, 2014, 11:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X