ಮುಂದಿನ ತಿಂಗಳಲ್ಲಿ ಆಲ್ಟೊ ಕೆ10 ಆಟೋ ಗೇರ್ ಶಿಫ್ಟ್ ಮಾದರಿ ಬಿಡುಗಡೆ

By Nagaraja

ಸದಾ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವುದರಲ್ಲಿ ಬದ್ಧವಾಗಿರುವ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಮುಂದಿನ ತಿಂಗಳಲ್ಲಿ ಆಟೋಮ್ಯಾಟಡ್ ಗೇರ್ ಶಿಫ್ಟ್ ತಂತ್ರಜ್ಞಾನ ಹೊಂದಿರುವ ಹೊಸತಾದ ಆಲ್ಟೊ ಕೆ10 ಮಾದರಿಯನ್ನು ಬಿಡುಗಡೆ ಮಾಡಲಿದೆ.

ಈಗಿರುವ ತಲಹದಿಯಲ್ಲಿಯೇ ಒಟ್ಟು 200 ಕೋಟಿ ರು.ಗಳಷ್ಟು ವೆಚ್ಚದಲ್ಲಿ ಹೊಸ ಮಾದರಿಯನ್ನು ಮಾರುತಿ ಹಾಗೂ ಜಪಾನ್ ಮೂಲದ ಅಂಗಸಂಸ್ಥೆಯಾಗಿರುವ ಸುಜುಕಿ ಮೋಟಾರು ಕಾರ್ಪೋರೇಷನ್ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದ್ದಾರೆ. ಫ್ಯೂಚರಿಸ್ಟಿಕ್ ತಂತ್ರಜ್ಞಾನದಲ್ಲಿ ಆಲ್ಟೊ ಕೆ10 ಪರಿಚಯವಾಗಲಿದೆ. ಅಲ್ಲದೆ ಗ್ರಾಹಕರಿಗೆ ಹಣಕ್ಕೆ ತಕ್ಕ ಮೌಲ್ಯ ನೀಡುವುದರಲ್ಲಿ ಸಂಸ್ಥೆಯು ತನ್ನ ಬದ್ಧತೆಯನ್ನು ಪ್ರದರ್ಶಿಸಲಿದೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ (ಮಾರ್ಕೆಟಿಂಗ್ ಮತ್ತು ಸೇಲ್ಸ್) ಆರ್‌ಎಸ್ ಕಲ್ಸಿ, "ಮಾರುತಿ ಆಲ್ಟೊ10 ನಮಗೆಲ್ಲರಿಗೂ ಅತ್ಯಂತ ಮುಖ್ಯವಾದ ಉತ್ಪನ್ನವಾಗಿದೆ. ಈ ವಿಭಾಗದಲ್ಲಿನ ಗ್ರಾಹಕರಿಗೆ ಬಹಳ ಬೇಡಿಕೆಯಿದೆ. ಅನೇಕ ವೈಶಿಷ್ಟ್ಯಗಳನ್ನು ನಾವು ನಿರೀಕ್ಷಿಸುತ್ತಿದ್ದು, ಹಣಕ್ಕೆ ತಕ್ಕ ಮೌಲ್ಯ ನೀಡಲಿದ್ದೇವೆ. ಇವೆಲ್ಲವೂ ನಮ್ಮ ಪಾಲಿಗೆ ಸವಾಲಿನ ವಿಷಯವಾಗಿರಲಿದೆ" ಎಂದಿದ್ದಾರೆ.

ನಿಮ್ಮ ಮಾಹಿತಿಗಾಗಿ, ಸೆಲೆರಿಯೊ ಬಳಿಕ ಆಲ್ಟೊ ಕೆ10, ಆಟೋ ಗೇರ್ ಶಿಫ್ಟ್ ತಂತ್ರಜ್ಞಾನ (ಎಎಸ್‌ಜಿ) ಪಡೆದುಕೂಳ್ಳುತ್ತಿರುವ ಮಾರುತಿಯ ಎರಡನೇ ಮಾದರಿಯಾಗಿದೆ. ಇದಕ್ಕೂ ಮೊದಲು ಬಿಡುಯಾಗಿದ್ದ ಸೆಲೆರಿಯೊ ಆಟೋಮ್ಯಾಟಡ್ ವೆರಿಯಂಟ್‌ಗೆ ದೇಶದ್ಯಾಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.


ಇಂಧನ ಕ್ಷಮತೆಯಲ್ಲಿ ಯಾವುದೇ ರಾಜಿಯಿಲ್ಲದೆ ಗ್ರಾಹಕರಿಗೆ ಗೈಕೆಟಕುವ ದರಗಳಲ್ಲಿ ಆಲ್ಟೊ ಎಎಸ್‌ಜಿ ತಂತ್ರಜ್ಞಾನ ಪರಿಚಯಿಸುತ್ತಿದ್ದೇವೆ. ನಿಸ್ಸಂಶವಾಗಿಯೂ ಇದು ಸ್ಮರ್ಧಾತ್ಮಕ ದರಗಳಲ್ಲಿ ಗ್ರಾಹಕರನ್ನು ತಲುಪಲಿದೆ ಎಂದವರು ತಿಳಿಸಿದರು.

ಮೈಲೇಜ್...
ಮಾರುತಿ ಸುಜುಕಿ ಹೊಸ ಆಲ್ಟೊ ಕೆ10 ಪೆಟ್ರೋಲ್ ವೆರಿಯಂಟ್ ಪ್ರತಿ ಲೀಟರ್‌ಗೆ 24.07 ಕೀ.ಮೀ. ಹಾಗೆಯೇ ಸಿಎನ್‌ಜಿ ಮಾದರಿಯು ಪ್ರತಿ ಕೆ.ಜಿ 32.26 ಕೀ.ಮೀ. ಮೈಲೇಜ್ ನೀಡಲಿದೆ. ಆದರೆ ಇಲ್ಲಿ ಗಮನಾರ್ಹ ಸಂಗತಿಯೆಂದರೆ ಆರು ವೆರಿಯಂಟ್‌ಗಳ ಪೈಕಿ ಟಾಪ್ ಎಂಡ್ ವೆರಿಯಂಟ್‌ನಲ್ಲಿ ಮಾತ್ರ ಆಟೋ ಗೇರ್ ಶಿಫ್ಟ್ ತಂತ್ರಜ್ಞಾನ ಲಭ್ಯವಾಗಲಿದೆ.

alto k10

ಬೆಲೆ
ಇನ್ನು ಬಿಡುಗಡೆ ವೇಳೆಯಷ್ಟೇ ಆಲ್ಟೊ ಕೆ10 ಎಎಸ್‌ಜಿ ವೆರಿಯಂಟ್ ಬೆಲೆ ಘೋಷಣೆಯಾಗಲಿದೆ. ಪ್ರಸ್ತುತ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಲ್ಟೊ ಕೆ10 3.15 ಲಕ್ಷ ರು.ಗಳಿಂದ 3.31 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಈ ಹಿಂದೆ 2010ನೇ ಇಸವಿಯಲ್ಲಿ ಬಿಡುಗಡೆಯಾಗಿದ್ದ ಆಲ್ಟೊ ಕೆ10 ಕಳೆದ ನಾಲ್ಕು ವರ್ಷಗಳಲ್ಲಿ 4.3 ಲಕ್ಷ ಯುನಿಟ್‌ಗಳ ಮಾರಾಟವನ್ನು ಕಂಡಿದೆ. ಒಟ್ಟಾರೆಯಾಗಿ ಆಲ್ಟೊ 800 ಬಿಡುಗಡೆಯಾಗಿ ಕಳೆದ 14 ವರ್ಷಗಳಲ್ಲಿ ಒಟ್ಟು 26 ಲಕ್ಷ ಯುನಿಟ್‌ಗಳ ಮಾರಾಟ ದಾಖಲಿಸಿದೆ.

Most Read Articles

Kannada
English summary
Maruti Suzuki to launch new Alto K10 automated gear shift next month
Story first published: Thursday, October 23, 2014, 10:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X