ಡೀಸೆಲ್ ಎಂಜಿನ್ ವ್ಯಾಗನಾರ್ ಮುಂದಿನ ವರ್ಷ ಬಿಡುಗಡೆ?

By Nagaraja

ದೇಶದ ಮುಂಚೂಣಿಯ ಸಂಸ್ಥೆಗಳು ಸಣ್ಣ ಕಾರಿಗಳಿಗೂ ಡೀಸೆಲ್ ಎಂಜಿನ್ ಆಳವಡಿಸುವುದರಲ್ಲಿ ತಲ್ಲೀನವಾಗಿದೆ. ಇದೀಗಷ್ಟೇ ಹೋಂಡಾ ಬ್ರಿಯೊ ಹ್ಯಾಚ್‌ಬ್ಯಾಕ್ ಕಾರಿಗೆ ಡೀಸೆಲ್ ಎಂಜಿನ್ ಆಳವಡಿಕೆಯಾಗುವ ಬಗ್ಗೆ ಮಾಹಿತಿ ಕೊಟ್ಟಿದ್ದೆವು.

ಇದಾದ ಬೆನ್ನಲ್ಲೇ ಮಗದೊಂದು ಸುದ್ದಿ ಹರಡಿದ್ದು, ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಆಲ್ಟೊ 800 ಬೆನ್ನಲ್ಲೇ ತನ್ನ ಜನಪ್ರಿಯ ವ್ಯಾಗನಾರ್ ಮಾದರಿಯಲ್ಲೂ ಡೀಸೆಲ್ ಎಂಜಿನ್ ಆಳವಡಿಸುವ ಯೋಜನೆ ಹೊಂದಿದೆ.

Wagon R

800 ಸಿಸಿ ಆಲ್ಟೊದಲ್ಲಿ ಡೀಸೆಲ್ ಎಂಜಿನ್ ಸದ್ಯದಲ್ಲೇ ಬಿಡುಗಡೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಇದಾದ ಬಳಿಕ ವ್ಯಾಗನಾರ್ ಡೀಸೆಲ್ ಎಂಜಿನ್ 2015 ಮಾರ್ಚ್ ಅವಧಿಯ ವೇಳೆಗೆ ಮಾರುಕಟ್ಟೆ ತಲುಪಲಿದೆ.

ದೇಶದ ಕಾರು ಮಾರುಕಟ್ಟೆಯಲ್ಲಿ ಸಣ್ಣ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿರುವುದರಿಂದ ಮಾರುತಿ ನಿಧಾನವಾಗಿ ಪೆಟ್ರೋಲ್ ವಾಹನಗಳಿಂದ ಡೀಸೆಲ್ ಮಾದರಿಗಳತ್ತವೂ ತನ್ನ ಚಿತ್ತ ಹಾಯಿಸಿದೆ. ದೀರ್ಘಾವಧಿಯ ತನಕ ಇದು ಬೇಡಿಕೆ ಕಾಯ್ದುಕೊಳ್ಳಲು ಸಂಸ್ಥೆಗೆ ನೆರವಾಗಲಿದೆ.

ವರದಿಗಳ ಪ್ರಕಾರ, ಮಾರುತಿಯ ಅಂಗಸಂಸ್ಥೆಯಾಗಿರುವ ಸುಜುಕಿ ಮೋಟಾರು ಕಾರ್ಪೋರೇಷನ್ ಪ್ರಮುಖವಾಗಿಯೂ ಸಣ್ಣ ಕಾರುಗಳಿಗಾಗಿ ಟು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುತ್ತಿದೆ. ಇದು ವ್ಯಾಗನಾರ್‌ನಲ್ಲೂ ಬಳಕೆಯಾಗಲಿದ್ದು, ಪ್ರತಿ ಲೀಟರ್‌ಗೆ 25 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

Most Read Articles

Kannada
English summary
Maruti to launch Wagon R Diesel by next year
Story first published: Monday, October 20, 2014, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X