ಬೀಜಿಂಗ್ ಆಟೋ ಶೋದಲ್ಲಿ ಬೆಂಝ್ ಕೂಪೆ ಕಾರು

By Nagaraja

ಪ್ರತಿಷ್ಠಿತ 2014 ಬೀಜಿಂಗ್ ಆಟೋ ಶೋದಲ್ಲಿ ಜರ್ಮನಿಯ ಲಗ್ಷುರಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ನೂತನ ಕೂಪೆ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಿದೆ.

ಕೂಪೆ ಹಾಗೂ ಎಸ್‌ಯುವಿ ವಿನ್ಯಾಸವನ್ನು ಒಂದೇ ಮಾದರಿಯಲ್ಲಿ ಪ್ರದರ್ಶಿಸಿರುವುದು ನೂತನ ಬೆಂಝ್ ಕೂಪೆ ಕಾರಿನ ವಿಶೇಷತೆಯಾಗಿದೆ. ಇದು ಬಿಎಂಡಬ್ಲ್ಯು ಎಕ್ಸ್ ಸಾಲಿನಲ್ಲಿ ಗುರುತಿಸಿಕೊಳ್ಳಲಿದ್ದು, 2015ರಲ್ಲಿ ನಿರ್ಮಾಣ ವರ್ಷನ್ ಪಡೆದುಕೊಳ್ಳುವ ಸಾಧ್ಯತೆಯಿದೆ.

Mercedes Benz

ಈ ಮೊದಲು ಬರ್ಲಿನ್‌ನಲ್ಲಿ ನಡೆದ ಡೈಮ್ಲರ್ ವಾರ್ಷಿಕ ಶೇರುದಾರರ ಸಭೆಯಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿದ್ದ ಬೆಂಝ್ ಕಾನ್ಸೆಪ್ಟ್ ಕೂಪೆ ಕಾರು ಕ್ರೀಡಾತ್ಮಕ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದು 4.9 ಮೀಟರ್ ಉದ್ದ, 1.7 ಮೀಟರ್ ಎತ್ತರ, 2 ಮೀಟರ್ ಅಗಲ ಮತ್ತು 22 ಇಂಚು ವೀಲ್ ಪಡೆದುಕೊಂಡಿದೆ. ಅಲ್ಲದೆ ತನ್ನದೇ ಆದ ವಿಶಿಷ್ಟ ಕೂಪೆ, ಎಸ್‌ಯುವಿ ಮಿಶ್ರಣವನ್ನು ಪಡೆದುಕೊಂಡಿದೆ.

ಇದರಲ್ಲಿ 333 ಅಶ್ವಶಕ್ತಿ ಉತ್ಪಾದಿಸಬಲ್ಲ (480 ಎನ್‌ಎಂ ಟಾರ್ಕ್) 3.0 ಲೀಟರ್ ವಿ6 ಎಂಜಿನ್ ಆಳವಡಿಸಲಾಗಿದೆ. ಹಾಗೆಯೇ 9 ಜಿ ಟ್ರಾನಿಕ್ ನೈನ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

Most Read Articles

Kannada
English summary
The latest fad of combining the design of a coupe and an SUV among automakers continues with the new Mercedes-Benz Concept Coupe which made its public debut at the Beijing Auto Show.
Story first published: Tuesday, April 22, 2014, 15:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X