ಮುಂದಿನ ವರ್ಷಾರಂಭದಲ್ಲಿ ಬೆಂಝ್ ಸಿಎಲ್‌ಎ ಬಿಡುಗಡೆ

By Nagaraja

2014ನೇ ವರ್ಷವನ್ನು ಇಯರ್ ಆಫ್ ಎಕ್ಸ್‌ಲೆನ್ಸ್ ಎಂದು ಘೋಷಿಸುವ ಮೂಲಕ ದೇಶಕ್ಕೆ ಅನೇಕ ಹೊಸ ಮಾದರಿಗಳನ್ನು ಪರಿಚಯಿಸಿರುವ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಮುಂದಿನ ವರ್ಷಾರಂಭದಲ್ಲಿ ಇದೇ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವ ಹುಮ್ಮಸ್ಸಿನಲ್ಲಿದೆ.

ವರದಿಗಳ ಪ್ರಕಾರ ಜರ್ಮನಿಯ ಐಷಾರಾಮಿ ಸಂಸ್ಥೆಯು ಮುಂದಿನ ವರ್ಷರಾಂಭದಲ್ಲಿ ಮಗದೊಂದು ಆಕರ್ಷಕ ಮಾದರಿ ಪರಿಚಯಿಸಲಿದೆ. ಅದುವೇ ಜಿಎಲ್‌ಎ ಕಾಂಪಾಕ್ಟ್ ಸೆಡಾನ್ ಕಾರು. ಇದು ಗ್ರಾಹಕರ ಕೈಗೆಟುವ ದರಗಳಲ್ಲಿ ಆಗಮನವಾಗುವ ನಿರೀಕ್ಷೆಯಿದೆ.

Mercedes India Launching CLA Compact Sedan

ಮರ್ಸಿಡಿಸ್ ಬೆಂಝ್ ಇಂಡಿಯಾ ಸಂಸ್ಥೆಯು 2015 ಜಿಎಲ್‌ಎ ಕಾಂಪಾಕ್ಟ್ ಸೆಡಾನ್ ಮಾದರಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳಲ್ಲಿ ಒದಗಿಸಲಿದೆ. ಇದರ 2.0 ಲೀಟರ್ ಪೆಟ್ರೋಲ್ ಎಂಜಿನ್ 181 ಅಶ್ವಶಕ್ತಿ (299.98 ತಿರುಗುಬಲ) ಉತ್ಪಾದಿಸಲಿದೆ.

ಅಂತೆಯೇ 2.2 ಲೀಟರ್ ಡೀಸೆಲ್ ಎಂಜಿನ್ 135 ಅಶ್ವಶಕ್ತಿ (299.10 ತಿರುಗುಬಲ) ಹೊಂದಿರಲಿದೆ. ಇವೆರಡು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಆದರೆ ಇದರಲ್ಲಿ ಆಲ್ ವೀಲ್ ಕೊರತೆ ಕಾಡಲಿದ್ದು, ಫ್ರಂಟ್ ವೀಲ್ ಮಾತ್ರ ಇರಲಿದೆ.

Mercedes India Launching CLA Compact Sedan

ಬಲ್ಲ ಮೂಲಗಳ ಪ್ರಕಾರು ಮರ್ಸಿಡಿಸ್ ಸಿಎಲ್‌ಇ ಕಾಂಪಾಕ್ಟ್ ಸೆಡಾನ್ ಕಾರು 40ರಿಂದ 50 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ. ಇನ್ನು ದೇಶದಲ್ಲೇ ಸ್ಥಳೀಯವಾಗಿ ಜೋಡಣೆ ಪ್ರಕ್ರಿಯೆ ಕೈಗೊಳ್ಳುವ ಯೋಜನೆ ಹೊಂದಿರುವ ಜರ್ಮನಿಯ ಈ ಐಷಾರಾಮಿ ಸಂಸ್ಥೆಯು ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರಾಟ ಮಾಡುವ ನಿರೀಕ್ಷೆಯಿದೆ.
Most Read Articles

Kannada
English summary
To all most everyone's surprise Mercedes-Benz had launched their CLA45 AMG in India prior to their base model. It was highly untraditional of the manufacturer to provide its performance oriented product prior to the mass seller.
Story first published: Thursday, December 18, 2014, 17:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X