ಹೊಸ ಮೋಟಾರು ಮಸೂದೆ; ರಸ್ತೆ ನಿಯಮ ಉಲ್ಲಂಘಿಸಿದರೆ ಭಾರಿ ದಂಡ, ಜೈಲುವಾಸ

By Nagaraja

ಕೇಂದ್ರ ಸರಕಾರ ಪ್ರಸ್ತಾಪಿಸಿರುವ ಹೊಸ ರಸ್ತೆ ಸುರಕ್ಷತೆ ಮತ್ತು ಸಾರಿಗೆ ಮಸೂದೆಯಲ್ಲಿ ಅನೇಕ ರಸ್ತೆ ಉಲ್ಲಂಘನಾ ಪ್ರಕರಣಗಳಿಗೆ ಗಂಭೀರವಾದ ಶಿಕ್ಷೆಯನ್ನು ಉಲ್ಲೇಖಿಸಲಾಗಿದೆ. ಇದರಂತೆ ರಸ್ತೆಯಲ್ಲಿ ನಡೆಯುವ ಅಪಘಾತದಲ್ಲಿ ಮಕ್ಕಳ ಸಾವಿಗೆ ಕಾರಣರಾದ್ದಲ್ಲಿ ಅಂತರವರಿಗೆ ಮೂರು ಲಕ್ಷ ರು. ದಂಡ ಹಾಗೂ ಏಳು ವರ್ಷಗಳ ವರೆಗಿನ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು

ಅದೇ ರೀತಿ ಕಾರು ಕಳಪೆ ತಯಾರಕ ವಿನ್ಯಾಸ ಹೊಂದಿದ್ದಲ್ಲಿ ಗರಿಷ್ಠ 5 ರು. ಲಕ್ಷ ವರೆಗೂ ದಂಡ ವಿಧಿಸಲಾಗುವುದು. ಇವೆಲ್ಲದರ ಜೊತೆಗೆ ಅಜಾಗರೂಕತೆಯ ಚಾಲನೆ ಹಾಗೂ ಪಾನಮತ್ತರಾಗಿ ವಾಹನ ಚಾಲನೆ ಮಾಡುವುದರ ಮೇಲೂ ಕಠಿಣ ದಂಡ ಪ್ರಸ್ತಾಪಿಸಲಾಗಿದೆ.

New Motor Bill

ರಸ್ತೆ ಸಂಚಾರ ಮತ್ತು ಹೆದ್ದಾರಿ ಸಚಿವಾಲಯವು ಉದ್ದೇಶಿತ ಹೊಸ ಮೋಟಾರು ಮಸೂದೆಯ ಪ್ರಕಾರ ಸುರಕ್ಷಿತ ಮಾನದಂಡಗಳ ವಾಹನಗಳ ಬಳಕೆ ಮಾಡದಿದ್ದಲ್ಲಿ ಒಂದು ಲಕ್ಷ ರು. ವರೆಗೆ ದಂಡ ಹಾಗೂ ಆರರಿಂದ ಒಂದು ವರ್ಷದ ವರೆಗೆ ಜೈಲುವಾಸವನ್ನು ಶಿಫಾರಾಸು ಮಾಡಲಾಗಿದೆ.

ಅಂತೆಯೇ ಮೊದಲ ಬಾರಿಗೆ ಪಾನಮತ್ತರಾಗಿ ವಾಹನ ಚಲಾಯಿಸಿದ್ದಲ್ಲಿ 25,000 ರು. ಅಥವಾ 3 ತಿಂಗಳ ವರೆಗೆ ಜೈಲುವಾಸ ಜೊತೆಗೆ ಆರು ತಿಂಗಳ ವರೆಗೆ ಲೈಸನ್ಸ್ ರದ್ದುಗೊಳಿಸಲಾಗುವುದು. ಎರಡನೇ ಬಾರಿಗೂ ಇದನ್ನು ಆವರ್ತಿಸಿದ್ದಲ್ಲಿ 50,000 ರು. ದಂಡ ಅಥವಾ ಒಂದು ವರ್ಷದ ವರೆಗೆ ಜೈಲುವಾಸ ಅನುಭವಿಸಬೇಕಾಗುತ್ತದೆ. ಇನ್ನು ಮೂರನೇ ಬಾರಿಗೆ ಮತ್ತದೇ ತಪ್ಪು ಮಾಡಿದ್ದಲ್ಲಿ ಶಾಶ್ವತ ಚಾಲನಾ ರದ್ದು ಮಾಡುವದರೊಂದಿಗೆ 30 ದಿನಗಳ ವರೆಗೆ ವಾಹನ ಹಿಡಿದಿಟ್ಟುಕೊಳ್ಳಲಾಗುವುದು.

ಇನ್ನು ಶಾಲಾ ಮಕ್ಕಳನ್ನು ಕೊಂಡೊಯ್ಯುವ ಬಸ್ ಚಾಲಕರು ಪಾನಮತ್ತರಾಗಿ ವಾಹನ ಚಾಲನೆ ಮಾಡಿದ್ದಲ್ಲಿ ರು. 50,000 ದಂಡದೊಂದಿಗೆ ಮೂರು ವರ್ಷಗಳ ವರೆಗೆ ಜೈಲುವಾಸ ಅನುಭವಿಸಬೇಕಾದಿತು. 18ರಿಂದ 25 ವರ್ಷದ ವರೆಗಿನ ಯುವಕರು ಇಂತಹ ಪ್ರಕರಣದಲ್ಲಿ ಭಾಗಿಯಾದಲ್ಲಿ ತತ್‌ಕ್ಷಣದಿಂದಲೇ ಪರವಾನನಿ ರದ್ದು ಮಾಡಲಾಗುವುದು.

ಅದೇ ರೀತಿ ಮೂರು ಬಾರಿ ಸಿಗ್ನಲ್ ಜಂಪ್ ಮಾಡಿದ್ದಲ್ಲಿ ರು. 15,000 ವರೆಗೆ ದಂಡ ವಿಧಿಸಲಾಗುವುದು ಅಥವಾ ಒಂದು ತಿಂಗಳ ವರೆಗೆ ಚಾಲನಾ ರದ್ದು ಮಾಡುವುದರೊಂದಿಗೆ ಕಡ್ಡಾಯವಾಗಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಬೇಕಾದಿತು.

ಸದ್ಯ ಹೊಸ ಮಸೂದೆ ಬಗ್ಗೆ ಸಾರ್ವಜನಿಕರು ಹಾಗೂ ಹೂಡಿಕೆದಾರರದಿಂದ ಸಲಹೆ ಸೂಚನೆಗಳನ್ನು ಬಯಸಿರುವ ಸರಕಾರವು ಮಸೂದೆಯನ್ನು ಅಂತಿಮಗೊಳಿಸಲಿದೆ. ಅಲ್ಲದೆ ಮುಂಬರುವ ಲೋಕಸಭಾ ಚಳಿಗಾಲದ ಅಧಿವೇಶದಲ್ಲಿ ಹೊಸ ಮಸೂದೆ ಮಂಡಿಸುವ ಸಾಧ್ಯತೆಗಳಿದೆ.

Most Read Articles

Kannada
English summary
Seeking to come down heavily on traffic offenders, government today proposed steep penalties of up to Rs 3 lakh along with a minimum 7-year imprisonment for death of a child in certain circumstances, besides huge fines for driving violations.
Story first published: Monday, September 15, 2014, 14:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X