ನಂ. 1 ಮಾರುತಿಯನ್ನೇ ಹಿಂದಿಕ್ಕಿದ ನಿಸ್ಸಾನ್

By Nagaraja

ದೇಶದ ಪ್ರಯಾಣಿಕ ಕಾರು ತಯಾರಕ ಸಂಸ್ಥೆಗಳಲ್ಲಿ ಮಾರುತಿ ಸುಜುಕಿ ನಂ.1 ಆಗಿರಬಹುದು. ಆದರೆ ಎಲ್ಲ ವಿಭಾಗದಲ್ಲೂ ಪರಸ್ಥಿತಿ ಸಮಾನವಾಗಿಲ್ಲ. ಯಾಕೆಂದರೆ ಮಾರುತಿ ಪ್ರತಿಸ್ಪರ್ಧಿಗಳು ಈಗಾಗಲೇ ಎಚ್ಚೆತ್ತುಕೊಂಡಿವೆ. ಇದೀಗ ಮಾರುತಿ ಸುಜುಕಿ ಸಂಸ್ಥೆಯನ್ನು ಹಿಂದಿಕ್ಕಿರುವ ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯು, ಎರಡನೇ ಅತಿದೊಡ್ಡ ರಫ್ತುದಾರ ಎನಿಸಿಕೊಂಡಿದೆ. ಇಲ್ಲಿ ಅಗ್ರಸ್ಥಾನವನ್ನು ಹ್ಯುಂಡೈ ಮೋಟಾರು ಇಂಡಿಯಾ ಕಾಯ್ದುಕೊಂಡಿದೆ.

ವರದಿಗಳ ಪ್ರಕಾರ ಕಳೆದ ಆರ್ಥಿಕ ಸಾಲಿನಲ್ಲಿ ಮಾರುತಿಯಿಂದ ರಫ್ತಾಗುತ್ತಿದ್ದ ಎಸ್ಟಾರ್, ಆಲ್ಟೊ ಹಾಗೂ ಡಿಜೈರ್ ಆವೃತ್ತಿಗಿಂತಲೂ ಹೆಚ್ಚಿನ ಬೇಡಿಕೆಯನ್ನು ವಿದೇಶದಲ್ಲಿ ನಿಸ್ಸಾನ್ ಮೈಕ್ರಾ ಹಾಗೂ ಸನ್ನಿ ಮಾದರಿಗಳು ಕಾಯ್ದುಕೊಂಡಿದೆ.

Nissan

1.16 ಲಕ್ಷ ಕಾರುಗಳನ್ನು ರಫ್ತು ಮಾಡಿರುವ ನಿಸ್ಸಾನ್ ಇಂಡಿಯಾ ಶೇಕಡಾ 18ರಷ್ಟು ಏರಿಕೆ ಸಾಧಿಸಿದೆ. ಈ ನಡುವೆ ಮಾರುತಿಯ ರಫ್ತು ಪ್ರಕ್ರಿಯೆ ಶೇಕಡಾ 16ರಷ್ಟು ಕುಸಿತ ಕಂಡು 1.01 ಲಕ್ಷಕ್ಕೆ ತಲುಪಿದೆ.

ಸದ್ಯ ವಿದೇಶಗಳಿಗೆ ರಫ್ತು ಕಾರ್ಯವನ್ನು ಇನ್ನಷ್ಟು ಹೆಚ್ಚಿಸುವ ಇರಾದೆಯಲ್ಲಿರುವ ನಿಸ್ಸಾನ್, ಆಫ್ರಿಕಾ ಹಾಗೂ ಯರೋಪ್ ಮಾರುಕಟ್ಟೆಗಳಿಗೆ ಕಾರು ಬಿಡಿಭಾಗಗಳನ್ನು ರವಾನಿಸಲಿದೆ. ಇಲ್ಲಿ ವಿಶೇಷವೆಂದರೆ ನಿಸ್ಸಾನ್‌ನ ಚೆನ್ನೈನಲ್ಲಿ ತಯಾರಿಯಾಗುತ್ತಿರುವ ಶೇಕಡಾ 85ರಷ್ಟು ಕಾರುಗಳು ವಿದೇಶಕ್ಕೆ ರಫ್ತಾಗುತ್ತಿದೆ.

ಒಟ್ಟಿನಲ್ಲಿ ದಟ್ಸನ್ ಉತ್ಪಾದನೆಯೊಂದಿಗೆ ನಿಸ್ಸಾನ್ ರಫ್ತು ಇನ್ನಷ್ಟು ಹೆಚ್ಚಳಗೊಳುವ ನಿರೀಕ್ಷೆಯಿದೆ. ಇನ್ನೊಂದೆಡೆ ಮಾರುತಿ ತನ್ನ ಯುರೋಪ್ ರಫ್ತು ಪ್ರಕ್ರಿಯೆ ಈಗಾಗಲೇ ಸ್ಥಗಿತಗೊಳಿಸಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ಮಧ್ಯ ಪೂರ್ವ, ಆಫ್ರಿಕಾ ಮತ್ತು ದಕ್ಷಿಣ ಪೂರ್ವ ಏಷಿಯಾ ಮಾರುಕಟ್ಟೆಯನ್ನು ಮಾತ್ರ ನೋಡಲಿದೆ.

ಇದೇ ಸಂದರ್ಭದಲ್ಲಿ ಅಗ್ರಸ್ಥಾನದಲ್ಲಿರುವ ಹ್ಯುಂಡೈ ಮೋಟಾರು ಇಂಡಿಯಾ, ಕಳೆದ ಆರ್ಥಿಕ ಸಾಲಿನಲ್ಲಿ 2.33 ಯುನಿಟ್ ರಫ್ತು ಮಾಡಿಕೊಂಡಿದೆ. ಇದು ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಇಯಾನ್, ಸ್ಯಾಂಟ್ರೊ, ಐ10, ಗ್ರಾಂಡ್ ಐ10, ಅಸೆಂಟ್ (ವರ್ನಾ) ಮತ್ತು ಐ20 ಮಾದರಿಗಳನ್ನು 120ಕ್ಕೂ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿದೆ.

Most Read Articles

Kannada
English summary
Maruti Suzuki has lost its coveted title of being the second largest exporter of automobiles in India to Nissan motors India. Hyundai Motor India continues to be largest car exporter out of India, a decade after it grabbed the number one spot from Maruti Suzuki.
Story first published: Thursday, April 24, 2014, 11:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X