ನಿಸ್ಸಾನ್‌ನಿಂದ ಸ್ವಯಂ-ಸ್ವಚ್ಛಗೊಳಿಸುವ ಕಾರು ಅಭಿವೃದ್ಧಿ

By Nagaraja

ನಿಮ್ಮ ವಾಹನ ಸ್ವಚ್ಛಗೊಳಿಸುವುದು ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆಯೇ? ಚಿಂತೆ ಬಿಡಿ ಇನ್ನು ಮುಂದೆ ಕಾರುಗಳೇ ಸ್ವಯಂ ಆಗಿ ತನ್ನಿಂದ ತಾನೇ ಸ್ವಚ್ಛಗೊಳ್ಳಲಿದೆ. ಇಂತಹದೊಂದು ವಿನೂತನ ತಂತ್ರಗಾರಿಕೆಯನ್ನು ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯು ಅಭಿವೃದ್ಧಿಪಡಿಸಿದೆ.

ನಿಸ್ಸಾನ್ ಅಭಿವೃದ್ಧಿಪಡಿಸಿರುವ ನ್ಯಾನೋ ಪೈಂಟ್ ತಂತ್ರಗಾರಿಕೆಯ ಪ್ರಕಾರ ಕಾರಿನಲ್ಲಿ ಅಂಟಿಕೊಂಡಿರುವ ಧೂಳು ಅಥವಾ ಮಣ್ಣಿನ ಕಣಗಳನ್ನು ಸ್ವಚ್ಛಗೊಳ್ಳಲಿದೆ. ಇದರಲ್ಲಿ ಸೂಪರ್ ಹೈಡ್ರೊಫಾಬಿಕ್ ಮತ್ತು ಒಲಿಯೊಫಾಬಿಕ್‍‌ಗಳೆಂಬ ಪೈಂಟ್ ಬಳಕೆ ಮಾಡಲಾಗಿದೆ.


ನಿಸ್ಸಾನ್ ನೋಟ್ ಮಾದರಿಯಲ್ಲಿ ಈ ನೂತನ ಪೈಂಟ್ ಬಳಕೆ ಮಾಡಲಾಗಿದೆ. ಈ ಮೂಲಕ ವಿಶ್ವದ ಮೊದಲ ಸ್ವಯಂ-ಸ್ವಚ್ಛಗೊಳಿಸುವ ಕಾರೆಂಬ ಕೀರ್ತಿಗೆ ನಿಸ್ಸಾನ್ ನೋಟ್ ಪಾತ್ರವಾಗಲಿದೆ. ಈ ಸಂಬಂಧ ಜಪಾನ್ ವಾಹನ ತಯಾರಿಕ ಸಂಸ್ಥೆ ವೀಡಿಯೋವೊಂದನ್ನು ಸಹ ವಾಹನ ಪ್ರೇಮಿಗಳಿಗಾಗಿ ಹಂಚಿಕೊಂಡಿದೆ.

ಕೆಸರು, ಮಣ್ಣಿನಿಂದ ಕೂಡಿದ ನೈಜ ರಸ್ತೆ ಪರಿಸ್ಥಿತಿಯಲ್ಲೂ ಸ್ವಯಂ ಸ್ವಚ್ಛಗೊಳಿಸುವ ನಿಸ್ಸಾನ್ ನೋಟ್ ಕಾರನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ ಸಂಸ್ಥೆಯು ಯಶಸ್ಸನ್ನು ಕಂಡಿದೆ. ಸಂಸ್ಥೆಯ ಪ್ರಕಾರ ಪೈಂಟ್ ಇನ್ನು ಪ್ರಾಥಮಿಕ ಪರೀಕ್ಷಾ ಹಂತದಲ್ಲಿದ್ದು, ನಿರ್ಮಾಣ ವರ್ಷನ್‌ನಲ್ಲಿ ಕೆಲವೊಂದು ಬದಲಾವಣೆ ಕಂಡುಬರಲಿದೆ.

Nissan note Self Cleaning Car

ಒಟ್ಟಿನಲ್ಲಿ ಕಾರು ತೊಳೆಯುವ ಸಾಹಸವೇ ಬೇಡ ಎಂದು ಅಂದುಕೊಂಡಿದ್ದವರಿಗೆ ಇಂದೊಂದು ದೊಡ್ಡ ನಿರಾಳವಾಗಿ ಪರಿಣಮಿಸಲಿದೆ. ಇದನ್ನೇ ಬೊಟ್ಟು ಮಾಡಿರುವ ನಿಸ್ಸಾನ್, ಗ್ರಾಹಕರ ದೈನಂದಿನ ಸಮಸ್ಯೆಗಳನ್ನು ಅರಿತುಕೊಳ್ಳುವ ಪ್ರಯತ್ನದಲ್ಲಿ ನಿಸ್ಸಾನ್ ತೊಡಗಿದ್ದು, ಇವೆಲ್ಲಕ್ಕೂ ಪರಿಹಾರ ಕಂಡುಹುಡುಕಲಿದ್ದೇವೆ ಎಂದಿದೆ. ಪ್ರಸ್ತುತ ಕೆಳಗಡೆ ಕೊಟ್ಟಿರುವ ವೀಡಿಯೋ ವೀಕ್ಷಿಸಲು ಮರೆಯದಿರಿ...
<center><iframe width="100%" height="450" src="//www.youtube.com/embed/UwoGsCAKsxU" frameborder="0" allowfullscreen></iframe></center>
Most Read Articles

Kannada
English summary
Now Nissan is developing a new technology, where we can forget washing our cars. The new technology will give us peace of mind, as we will not have to take care of anything.
Story first published: Friday, April 25, 2014, 14:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X