ಗೇಮಿಂಗ್ ಇಷ್ಟಪಡುತ್ತೀರಾ? ನೀವೂ ನಿಸ್ಸಾನ್ ಜಿಟಿ ಅಕಾಡೆಮಿ ಸೇರಿ!

By Nagaraja

ಭಾರತದ ವಾಹನ ಉತ್ಸಾಹಿಗಳು ಹಾಗೂ ಗೇಮಿಂಗ್ ಇಷ್ಟಪಡುವವರಿಗೆ ಬಹುದೊಡ್ಡ ಸುದ್ದಿಯೆಂಬಂತೆ ನಿಸ್ಸಾನ್ ಸಂಸ್ಥೆಯು ದೇಶದಲ್ಲಿ ಜಿಟಿ ಅಕಾಡೆಮಿ ಆರಂಭಿಸಿದೆ. ಪ್ಲೇ ಸ್ಟೇಷನ್ ಸಹಭಾಗಿತ್ವದಲ್ಲಿ ನಿಸ್ಸಾನ್ ಇಂತಹದೊಂದು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಹಿಂದೆ 2008ನೇ ಇಸವಿಯಲ್ಲಿ ಲಾಂಚ್ ಆಗಿದ್ದ ಜಿಟಿ ಅಕಾಡೆಮಿ, ಗ್ರಾಹಕರಿಗೆ ನೈಜ ರೇಸಿಂಗ್‌ನಲ್ಲಿ ಭಾಗವಹಿಸಿದ ಅನುಭವ ನೀಡಲಿದೆ. ಜನಪ್ರಿಯ ಗ್ರ್ಯಾನ್ ಟರಿಸ್ಮೊ 6 ರೇಸಿಂಗ್ ಗೇಮ್‌ನಲ್ಲಿ ಗ್ರಾಹಕರ ಸಾಮರ್ಥ್ಯವನ್ನು ಪರೀಕ್ಷಿಸಲಿದೆ. ದೆಹಲಿ ಆಟೋ ಎಕ್ಸ್ ದಲ್ಲಿ ನಿಸ್ಸಾನ್ ರೇಸಿಂಗ್ ಆಯ್ದ ಪಟ್ಟಿಯಲ್ಲಿ ತೊಡಗಿಸಿಕೊಳ್ಳಲಿದೆ.

ನಿಸ್ಸಾನ್ ಜಿಟಿ ಅಕಾಡೆಮಿ ಭಾರತದಲ್ಲಿ ಆರಂಭ

ಮುಂದಿನ ದಿನಗಳಲ್ಲಿ ಪ್ರಸ್ತುತ ಕಾರ್ಯಕ್ರಮ ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ಹಾಗೂ ಗುರ್ಗಾಂವ್ ನಗರಗಳಿಗೂ ವಿಸ್ತರಿಸಲಿದೆ.

ನಿಸ್ಸಾನ್ ಜಿಟಿ ಅಕಾಡೆಮಿ ಭಾರತದಲ್ಲಿ ಆರಂಭ

ಬಳಿಕ ಟಾಪ್ 14 ಸ್ಪರ್ಧಿಗಳು ದೈಹಿಕ ತರಬೇತಿಯಲ್ಲಿ ಭಾಗವಹಿಸಲಿದ್ದು, ಈ ಪೈಕಿ ಆರು ಮಂದಿಗೆ ಮಾತ್ರ ಯುಕೆಯಲ್ಲಿ ನಡೆಯಲಿರುವ ನಿಸ್ಸಾನ್ ಅಂತರಾಷ್ಟ್ರೀಯ ರೇಸ್ ಕ್ಯಾಂಪ್‌ನಲ್ಲಿ ಭಾಗವಹಿಸುವ ಅವಕಾಶ ದೊರಕಲಿದೆ.

ನಿಸ್ಸಾನ್ ಜಿಟಿ ಅಕಾಡೆಮಿ ಭಾರತದಲ್ಲಿ ಆರಂಭ

ಅಂತಿಮವಾಗಿ ಸಿಲ್ವರ್ ಸ್ಟೋನ್‌ನಲ್ಲಿ ವಿಶ್ವದ 18 ಪ್ರಮುಖ ಚಾಲಕರು 370 ಝಡ್ ಮತ್ತು ಜಿಟಿಆರ್‌ಗಳಂತಹ ನೈಜ ರೇಸ್ ಕಾರುಗಳಲ್ಲಿ ಪರೀಕ್ಷೆಗೆ ಒಳಪಡಲಿದ್ದಾರೆ.

ನಿಸ್ಸಾನ್ ಜಿಟಿ ಅಕಾಡೆಮಿ ಭಾರತದಲ್ಲಿ ಆರಂಭ

ಇಲ್ಲಿನ ಶ್ರೇಷ್ಠ ರೇಸರ್ ನಿಸ್ಸಾನ್ ಚಾಲಕ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ನಿಸ್ಸಾನ್ ರೇಸ್ ತಂಡದಿಂದ ತರಬೇತಿ ಪಡೆಯಲಿದ್ದಾರೆ.

ನಿಸ್ಸಾನ್ ಜಿಟಿ ಅಕಾಡೆಮಿ ಭಾರತದಲ್ಲಿ ಆರಂಭ

ಮಾನ್ಯ ಚಾಲನಾ ಪರವಾನಗಿ ಹೊಂದಿರುವ 18 ವರ್ಷ ಮೇಲ್ಪಟ್ಟ ಭಾರತಿಯರು ಜಿಟಿ ಅಕಾಡೆಮಿಯಲ್ಲಿ ಭಾಗವಹಿಸಬಹುದಾಗಿದೆ. ಆದರೆ ವೃತ್ತಿನಿರತ ರೇಸರುಗಳಿಗೆ ಇದರಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

Most Read Articles

Kannada
English summary
Nissan's unique race driver development program the GT Academy launched in India.
Story first published: Tuesday, February 4, 2014, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X