ದಟ್ಸನ್ ಗೊ ಪ್ಲಸ್ ಎಂಪಿವಿ ಬಿಡುಗಡೆ ಮುಂದಕ್ಕೆ

By Nagaraja

ಈ ಮೊದಲು ಪ್ರಸಕ್ತ ಸಾಲಿನ ದೀಪಾವಳಿ ಹಬ್ಬದ ಆವೃತ್ತಿಯ ವೇಳೆಯಲ್ಲಿ ದಟ್ಸನ್ ಗೊ ಪ್ಲಸ್ ಬಹು ಬಳಕೆಯ ವಾಹನ (ಎಂಪಿವಿ) ಭಾರತ ಮಾರುಕಟ್ಟೆ ಪ್ರವೇಶಿಸುವ ಕುರಿತಂತೆ ವರದಿಗಳು ಹಬ್ಬಿದ್ದವು. ಆದರೆ ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ನಿಸ್ಸಾನ್ ಅಧೀನತೆಯಲ್ಲಿರುವ ದಟ್ಸನ್ ಗೊ ಪ್ಲಸ್ ಎಂಪಿವಿ 2015ನೇ ಸಾಲಿನ ಮೊದಲಾರ್ಧದಲ್ಲಿ ದೇಶದ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಹೋಂಡಾ ಮೊಬಿಲಿಯೊ, ಮಾರುತಿ ಸುಜುಕಿ ಎರ್ಟಿಗಾ ಮತ್ತು ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ರೆನೊ ಲೊಡ್ಜಿ ಮಾದರಿಗಳಿಗೆ ಹೊಸತಾದ ದಟ್ಸನ್ ಗೊ ಎಂಪಿವಿ ಕಾರು ಪ್ರತಿಸ್ಪರ್ಧಿಯಾಗಲಿದೆ.

Datsun Go Plus

ನಿಮ್ಮ ಮಾಹಿತಿಗಾಗಿ ವರ್ಷಾರಂಭದಲ್ಲಷ್ಟೇ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು ಭಾರತ ಮಾರುಕಟ್ಟೆಗೆ ಪರಿಚಯವಾಗಿತ್ತು. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 3.12 ಲಕ್ಷ ರು.ಗಳಿಂಗ 3.70 ಲಕ್ಷ ರು.ಗಳ ವರೆಗಿದೆ.

ಆದರೆ ವಿತರಕ ಜಾಲದ ಕೊರತೆಯಿಂದಾಗಿ ಮಾರಾಟದಲ್ಲಿ ದಟ್ಸನ್ ಗೊ ಹಿನ್ನಡೆ ಅನುಭವಿಸಿತ್ತು. ಇದೇ ಸಮಸ್ಯೆ ದಟ್ಸನ್ ಗೊ ಪ್ಲಸ್ ಎಂಪಿವಿ ಮಾದರಿಗೂ ಎದುರಾಗುವ ಸಂಭವವಿದ್ದು, ಈ ಹಿನ್ನಲೆಯಲ್ಲಿ ಬಿಡುಗಡೆ ಮುಂದೂಡಲಾಗುತ್ತಿದೆ ಎಂಬ ಬಗ್ಗೆಯೂ ವದಂತಿಗಳು ಕೇಳಿ ಬರುತ್ತಿದೆ.

Most Read Articles

Kannada
English summary
Nissan is planning to launch Datsun Go Plus MPV in India by first half of Next Year. 
Story first published: Monday, October 6, 2014, 15:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X