ಭಾರತಕ್ಕೆ ಬರುತ್ತಾ ನಿಸ್ಸಾನ್ ಟೆರನೊ ಆಲ್ ವೀಲ್ ಡ್ರೈವ್?

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ರೆನೊ ಡಸ್ಟರ್‌ ತದ್ರೂಪವಾಗಿರುವ ನಿಸ್ಸಾನ್ ಟೆರನೊ ಕೆಲವೊಂದು ಪ್ರೀಮಿಯಂ ವಿಶಿಷ್ಟತೆಗಳೊಂದಿಗೆ ದೇಶದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು.

ಇದೀಗ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಡಸ್ಟರ್ ಫೋರ್ ವೀಲ್ ಡ್ರೈವ್ ಮಾದರಿಯನ್ನು ಪರಿಚಯಿಸಿರುವ ಬೆನ್ನಲ್ಲೇ ಇದಕ್ಕೆ ಸಮಾನವಾಗಿ ನಿಸ್ಸಾನ್ ಟೆರನೊ ಆಲ್ ವೀಲ್ ಡ್ರೈವ್ ಭಾರತಕ್ಕೆ ಬರುವುದೇ ಎಂಬುದು ಕುತೂಹಲಕಾರಿ ವಿಷಯವಾಗಿ ಪರಿಣಮಿಸಿದೆ.


ಭಾರತದಲ್ಲಿ ಮೈಕ್ರಾ ಆಕ್ಟಿವ್, ಮೈಕ್ರಾ ಹ್ಯಾಚ್‌ಬ್ಯಾಕ್, ಸನ್ನಿ ಸೆಡಾನ್, ಇವಾಲಿಯಾ ಎಂಪಿವಿಗಳಂತಹ ಮಾದರಿಗಳನ್ನು ಪರಿಚಯಿಸಿರುವ ಜಪಾನ್ ಮೂಲದ ನಿಸ್ಸಾನ್, ಟೆರನೊ ಮೂಲಕ ಇನ್ನಷ್ಟು ಪ್ರೀಮಿಯಂ ಗ್ರಾಹಕರನ್ನು ಆಕರ್ಷಿಸಿತ್ತು.

ವರದಿಗಳ ಪ್ರಕಾರ ರೆನೊ ಅದೇ ಹಾದಿಯನ್ನು ಅನುಸರಿಸಲಿರುವ ನಿಸ್ಸಾನ್, ಟೆರನೊದಲ್ಲಿ ಆಟೋ, ಟು ವೀಲ್ ಡ್ರೈವ್ ಜೊತೆಗೆ ಆಲ್ ವೀಲ್ ಡ್ರೈವ್ ಆಯ್ಕೆಯನ್ನು ನೀಡಲಿದೆ. ಈ ನಿಟ್ಟಿನಲ್ಲಿ ಐ-ಡ್ರೈವ್ ಟೆಕ್ ವ್ಯವಸ್ಥೆಯನ್ನು ಜೋಡಣೆ ಮಾಡಲಾಗುತ್ತಿದ್ದು, ಚಾಲನೆ ವೇಳೆ ಮೋಡ್ ಬದಲಾವಣೆಯಾಗಲಿದೆ.

 Nissan Terrano

ಟಾಪ್ ಎಂಡ್ ಟೆರನೊ ವೆರಿಯಂಟ್‌ನಲ್ಲಿ ಮಾತ್ರ ಫೋರ್ ವೀಲ್ ಸಿಸ್ಟಂ ಲಭ್ಯವಿರಲಿದೆ. ಇದು 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದ್ದು, 109 ಅಶ್ವಶಕ್ತಿ (248 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಟ್ರಾನ್ಸ್‌ಮಿಷನ್ ಸಹ ಇರಲಿದೆ.

ಅಂದ ಹಾಗೆ ನಿಸ್ಸಾನ್ ಆಲ್ ವೀಲ್ ಡ್ರೈವ್ ಟೆರನೊದಲ್ಲಿ ಎಎಸ್‌ಆರ್, ಎಎಸ್‌ಪಿ, ಎಲೆಕ್ಟ್ರಾನಿಕ್ ಟಾರ್ಕ್ ಕಂಟ್ರೋಲ್ ಮತ್ತು ಹಿಲ್ ಅಸಿಸ್ಟ್ ಸೌಲಭ್ಯಗಳಿರಲಿದೆ. ಆಲ್ ವೀಲ್ ಡ್ರೈವ್‌ನಲ್ಲಿ ಈ ಎಲ್ಲ ವೈಶಿಷ್ಟ್ಯಗಳು ಅತಿ ನಿರ್ಣಾಯಕವೆನಿಸಲಿದೆ. ಖರೀದಿಗಾರರನ್ನು ಹೆಚ್ಚೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ಮತ್ತಷ್ಟು ವಿಶಿಷ್ಟತೆಗಳನ್ನು ಗ್ರಾಹಕರನ್ನು ನಿರೀಕ್ಷೆ ಮಾಡಬಹುದಾಗಿದೆ.

ಒಂದು ವೇಳೆ ಟೆರೆನೊ ಆಲ್ ವೀಲ್ ಡ್ರೈವ್ ಆಗಮನವಾದ್ದಲ್ಲಿ ಮಾರುಕಟ್ಟೆಯಲ್ಲಿ ಏಕಮಾತ್ರ ಪ್ರತಿಸ್ಪರ್ಧಿ ಡಸ್ಟರ್ ಎಡಬ್ಲ್ಯುಡಿ ಆಗಿದೆ. ನಿಕಟ ಭವಿಷ್ಯದಲ್ಲೇ ಪೋರ್ಡ್ ಸಹ ತನ್ನ ಜನಪ್ರಿಯ ಇಕೊಸ್ಪೋರ್ಟ್‌ನಲ್ಲಿ ಇದಕ್ಕೆ ಸಮಾನವಾದ ತಂತ್ರಜ್ಞಾನವನ್ನು ಆಳವಡಿಸುವ ಸಾಧ್ಯತೆಯಿದೆ.

Most Read Articles

Kannada
English summary
Renault India has recently launched its Duster AWD variant. So it might occur that Nissan too offers an AWD system in their Terrano compact SUV, with drive modes that can be switched on the go.
Story first published: Wednesday, October 29, 2014, 17:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X