ಪೋರ್ಷೆ ಕೆಯಾನ್ ಪ್ಲಾಟಿನಂ ಡೀಸೆಲ್ ಲಾಂಚ್

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಪೋರ್ಷೆ, ಭಾರತದಲ್ಲಿ ನಿಧಾನವಾಗಿಯಾದರೂ ಪರಿಣಾಮಕಾರಿ ಬೆಳವಣಿಗೆ ಸಾಧಿಸುತ್ತಿದೆ. ಇತ್ತೀಚೆಗಷ್ಟೇ ಒಂದು ಕೋಟಿ ರುಪಾಯಿಗಳಷ್ಟು (ಎಕ್ಸ್ ಶೋ ರೂಂ ದೆಹಲಿ) ಬೆಲೆ ಬಾಳುವ ಮಾಕನ್ ಎಸ್‌ಯುವಿ ಮಾದರಿಯನ್ನು ಪರಿಚಯಿಸಿದ್ದ ಪೋರ್ಷೆ, ಮಗದೊಂದು ಅತ್ಯಾಕರ್ಷಕ ಕೆಯಾನ್ ಪ್ಲಾಟಿನಂ ಡೀಸೆಲ್ ಎಡಿಷನ್ ಎಸ್‌ಯುವಿ ಬಿಡುಗಡೆಗೊಳಿಸಿದೆ.

ಪೋರ್ಷೆಯಿಂದ ಬಿಡುಗಡೆಯಾಗಿರುವ ಹೊಸ ಕೆಯಾನ್ ಪ್ಲಾಟಿನಂ ಎಡಿಷನ್ ಡೀಸೆಲ್ ಕ್ರೀಡಾ ಬಳಕೆ ವಾಹನದ ದೆಹಲಿ ಎಕ್ಸ್ ಶೋ ರೂಂ ದರ 86.50 ಲಕ್ಷ ರು.ಗಳಾಗಿವೆ.

Porsche Cayenne

ಈ ವಿಶೇಷ ಡೀಸೆಲ್ ಆವೃತ್ತಿಯು 3.0 ಲೀಟರ್ ವಿ6 ಟರ್ಬೊಚಾರ್ಜ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಗರಿಷ್ಠ 245 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಂತೆಯೇ ಸ್ಟಾಂಡರ್ಡ್ ಆಗಿ ಅನೇಕ ವೈಶಿಷ್ಟ್ಯಗಳು ಲಭ್ಯವಾಗಲಿದೆ.

ಕ್ರೀಡೆಯಿಂದ ಸ್ಪೂರ್ತಿ ಪಡೆದ ಸ್ಟೀರಿಂಗ್ ವೀಲ್ ಜೊತೆ ಪೆಡಲ್ ಶಿಫ್ಟರುಗಳನ್ನು ಹೊಸ ಪೋರ್ಷೆ ವಿಶೇಷ ಆವೃತ್ತಿಯ ಕೆಯಾನ್ ಹೊಂದಿರಲಿದೆ. ಇದು ಪೋರ್ಷೆ ಕಮ್ಯೂನಿಕೇಷನ್ ಮ್ಯಾನೇಜ್‌ಮೆಂಟ್ ಅನ್ನುವ ಜಿಪಿಎಸ್ ನೇವಿಗೇಷ್ ಪಡೆದುಕೊಳ್ಳಲಿದೆ. ಅಷ್ಟೇ ಅಲ್ಲದೆ 19 ಇಂಚಿನ ಅಲಾಯ್ ವೀಲ್ ಕೂಡಾ ಇರಲಿದೆ.

ಅಂದ ಹಾಗೆ ಕೆಯಾನ್ ಪ್ಲಾಟಿನಂ ಎಡಿಷನ್ ಡೀಸೆಲ್ ಆವೃತ್ತಿಯು ವಿಶೇಷವಾದ ಕ್ಯಾರರಾ ವೈಟ್ ಮೆಟ್ಯಾಲಿಕ್ ಬಣ್ಣವನ್ನು ಹೊಂದಿರಲಿದೆ. ಗ್ರಾಹಕರಿಗೆ ಗ್ರೇ ಮೆಟ್ಯಾಲಿಕ್, ಜೆಟ್ ಬ್ಲ್ಯಾಕ್ ಮೆಟ್ಯಾಲಿಕ್ ಮತ್ತು ಮಹೊಗನಿ ಮೆಟ್ಯಾಲಿಕ್ ಆಯ್ದುಕೊಳ್ಳುವ ಆಯ್ಕೆಯಿರಲಿದೆ.

Most Read Articles

Kannada
English summary
German luxury car manufacturer, Porsche is slowly yet significantly growing its presence in India. They have recently launched their Macan SUV in India with a price tag of INR 1,00,00,000 ex-showroom, Delhi. They have introduced something special in India today.
Story first published: Friday, August 22, 2014, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X