ಕೇರಳದಲ್ಲಿ ಖಾಸಗಿ ಬಸ್ಸುಗಳ ಲೈಸನ್ಸ್ ರದ್ದು?

By Nagaraja

ಯಾವುದೇ ಪೂರ್ವಸೂಚನೆಯಿಲ್ಲದೆ ತಮ್ಮ ನಿಗದಿತ ಯಾತ್ರೆಯನ್ನು ರದ್ದುಗೊಳಿಸುವ ಖಾಸಗಿ ಬಸ್ಸುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಕೇರಳ ಮೋಟಾರು ವಾಹನಗಳ ವಿಭಾಗ (ಎಂವಿಡಿ), ಇಂತಹ ಬಸ್ಸುಗಳ ಪರವಾನಗಿ ರದ್ದುಗೊಳಿಸುವ ಮೂಲಕ ಬಿಸಿ ಮುಟ್ಟಿಸುತ್ತಿವೆ.

ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿ ತೀವ್ರ ಶೋಧನೆ ಜಾರಿಯಲ್ಲಿದೆ. ವರದಿಗಳ ಪ್ರಕಾರ ರಾತ್ರಿ ವೇಳೆಯಲ್ಲಿ ಬಸ್ಸಿನಲ್ಲಿ ಸಂಚರಿಸುವ ಯಾತ್ರಿಕರ ಸಂಖ್ಯೆ ಕಡಿಮೆಯಾಗಿರುತ್ತದೆ. ಈ ನಡುವೆ ಯಾವುದೇ ಮುನ್ಸೂಚನೆ ನೀಡದ ಖಾಸಗಿ ಬಸ್ಸುಗಳು ಏಕಾಏಕಿ ಟ್ರಿಪ್ ರದ್ದುಗೊಳಿಸುತ್ತಿದೆ.

Private Bus

ಈ ಸಂಬಂಧ ಯಾತ್ರಿಕರಿಂದಲೂ ಅಳಲು ಕೇಳಿಬಂದಿದೆ. ಇದರಿಂದಾಗಿ ಯಾತ್ರಿಕರು ಗಂಟೆಗಟ್ಟಲೆ ಕಾಲ ಬಸ್ ನಿಲ್ದಾಣದಲ್ಲೇ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದ್ದು, ಮಹಿಳಾ ಪ್ರಯಾಣಿಕರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ.

ಬಸ್ ನಿರ್ವಾಹಕರು ನೀಡುವ ಸಮಾಜಾಯಿಸಿ ಪ್ರಕಾರ, ಪ್ರಯಾಣಿಕರ ಸಂಖ್ಯೆ ವಿರಳವಾಗಿದ್ದರಿಂದ ಆರ್ಥಿಕ ನಷ್ಟವುಂಟಾಗುತ್ತಿದೆ. ಅಲ್ಲದೆ ಇನ್ನಿತರ ಪರಿಸ್ಥಿತಿಯಲ್ಲಿ ನಿರ್ವಾಹಕರ ಕೊರತೆ ಕಾಡುತ್ತಿದೆ ಎಂದಿದ್ದಾರೆ.

ಸದ್ಯ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಅಧಿಕಾರಿಗಳು, ಮೊದಲ ಬಾರಿಗೆ ರು. 5000 ವರೆಗೂ ದಂಡ ವಿಧಿಸಲಾಗುತ್ತಿದ್ದು, ಮತ್ತದೇ ತಪ್ಪನ್ನು ಪುನರಾವರ್ತಿಸಿದ್ದಲ್ಲಿ ಪರವಾನಗಿ ರದ್ದು ಮಾಡಲಾಗುತ್ತಿದೆ.

Most Read Articles

Kannada
Read more on auto news ಬಸ್
English summary
The Motor Vehicles Department (MVD) in Kerala's Kozhikode district have started cracking down on private bus operators who have been cancelling buses on certain routes without prior notice.
Story first published: Thursday, April 24, 2014, 11:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X