ಮೋದಿಯ ಗುಜರಾತ್‌ನಿಂದ ಓಡಲಿರುವ ದೇಶದ ಪ್ರಥಮ ಬುಲೆಟ್ ರೈಲು

By Nagaraja

ನಿರೀಕ್ಷೆಯಂತೆಯೇ ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಮಂಡಿಸಿರುವ 2014-15ನೇ ಸಾಲಿನ ರೈಲ್ವೆ ಬಜೆಟ್‌ನಲ್ಲಿ ದೇಶದ ಪ್ರಪ್ರಥಮ ಬುಲೆಟ್ ರೈಲನ್ನು ಘೋಷಿಸಲಾಗಿದೆ. ವಿಶೇಷವೆಂದರೆ ದೇಶದ ಮೊದಲ ಬುಲೆಟ್ ರೈಲು ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್‌ನ ಅಹಮಾದಾಬಾದ್‌ನಿಂದ ಮುಂಬೈ ವರೆಗೆ ಓಡಾಡಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕೂಡಾ ಆಗಿರುವ ಸದಾನಂದ ಗೌಡ, 'ಆದಷ್ಟು ಬೇಗ ಬುಲೆಟ್ ರೈಲು ಓಡಿಸುವುದು ಪ್ರತಿಯೊಬ್ಬ ಭಾರತೀಯರ ಹಾರೈಕೆಯಾಗಿತ್ತು" ಎಂದು ಸಂಸತ್‌ನ ವಿಶೇಷ ಬಜೆಟ್ ಅಧಿವೇಶನದಲ್ಲಿ ಬಜೆಟ್ ಮಂಡಿಸುತ್ತಾ ತಿಳಿಸಿದರು.

 Bullet Train

ಅಂದ ಹಾಗೆ ಹೈ ಸ್ಪೀಡ್ ರೈಲು ಗಂಟೆಗೆ 320 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಎರಡು ನಗರಗಳ ನಡುವಣ ದೂರವನ್ನು ಕೇವಲ ಎರಡು ಗಂಟೆಗಳಲ್ಲೇ ಕ್ರಮಿಸಲಿದೆ. ಅದೇ ರೀತಿ ಬುಲೆಟ್ ರೈಲು ಯೋಜನೆಯ ಮೂಲಸೌಕರ್ಯ ವೃದ್ಧಿಗಾಗಿ 100 ಕೋಟಿ ರು.ಗಳ ಹೂಡಿಕೆಯನ್ನು ಪ್ರಸ್ತಾಪಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆಯೇ ಪ್ರಮುಖ ನಗರಗಳಿಗೆ ವಜ್ರ ಚತುಷ್ಪಥ ಜಾಲದಂತೆ ಮುಂಬೈ, ದೆಹಲಿ, ಕೋಲ್ಕತ್ತಾ ಹಾಗೂ ಚೆನ್ನೈ ಮಹಾನಗರಗಳಿಗೆ ಬುಲೆಟ್ ರೈಲು ಸಂಪರ್ಕಿಸುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ಮುಂಬೈ-ಅಹಮಾದಾಬಾದ್ ಬುಲೆಟ್ ರೈಲು ಯೋಜನೆಯನ್ನು ಜಪಾನ್ ಅಂತರಾಷ್ಟ್ರೀಯ ಒಕ್ಕೂಟ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ. ಇದೇ ವೇಳೆ ದೆಹಲಿಯಿಂದ ನಾಲ್ಕು ಸೆಮಿ ಬುಲೆಟ್ ರೈಲುಗಳನ್ನು ಓಡಿಸುವ ಬಗ್ಗೆಯೂ ಸದಾನಂದ ಗೌಡ ಘೋಷಣೆ ಮಾಡಿದ್ದಾರೆ.

Most Read Articles

Kannada
Read more on auto news ಬಜೆಟ್
Story first published: Tuesday, July 8, 2014, 15:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X