ಪೆಟ್ರೋಲ್ ಹಾಕಿಸಿಕೊಳ್ಳಬೇಕೇ? ಪಿಯುಸಿ ಸರ್ಟಿಫಿಕೇಟ್ ತನ್ನಿ

By Nagaraja

ವಾಯು ಮಾಲಿನ್ಯ ತಡೆಗಟ್ಟುವ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ದೆಹಲಿ ಸರಕಾರ, ಇನ್ನು ಮುಂದೆ ಪೆಟ್ರೋಲ್ ಅಥವಾ ಡೀಸೆಲ್ ಹಾಕುವ ಮುನ್ನ ಪಿಯುಸಿ ಸರ್ಟಿಫಿಕೇಟನ್ನು ಕಡ್ಡಾಯಗೊಳಿಸಲಿದೆ.

ಗೊಂದಲವುಂಟಾಯಿತೇ? ಅದೇ, ಇನ್ನು ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಹಾಕುವ ಮುನ್ನ ಮಾಲಿನ್ಯ ನಿಯಂತ್ರಣ ಇಲಾಖೆಯ (ಪಿಯುಸಿ) ಸರ್ಟಿಫಿಕೇಟ್ ಹಾಜರುಪಡಿಸಬೇಕಾಗುತ್ತದೆ.

PUC Certificate

ಇದೀಗ ಪೆಟ್ರೋಲ್ ಬಂಕ್‌ಗಳಿಗೆ ತೆರಳುವ ಗ್ರಾಹಕರು ಗಿಟ್ಟಿಸಿಕೊಳ್ಳುವ ಮಾಲಿನ್ಯ ನಿಯಂತ್ರಣ ಇಲಾಖೆಯ ಪ್ರಮಾಣ ಪತ್ರವು ಹೆಸರಿಗಷ್ಟೇ ಸೀಮಿತವಾಗಿದೆ. ಈ ಸಂಬಂಧ ತಜ್ಞರು ಸಲ್ಲಿಸಿದ್ದ ವರದಿಯ ಮೆರೆಗೆ ಪಿಯುಸಿ ಸರ್ಟಿಫಿಕೇಟ್ ಕಡ್ಡಾಯಗೊಳಿಸಲು ದೆಹಲಿಯಲ್ಲಿ ಸೇರಿದ ಪ್ರಧಾನ ಕಾರ್ಯದರ್ಶಿ ಎಸ್‌.ಕೆ. ಶ್ರೀವಾಸ್ತವ್ ಹಾಗೂ ಉನ್ನತಾಧಿಕಾರಿಗಳ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ವಾಯು ಮಾಲಿನ್ಯ ದಿನಂದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ವಾಹನದಿಂದ ಹೊರಸೂಸುವ ಹೊಗೆ ಅತಿ ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದನ್ನು ತಡೆಯುವ ಪ್ರಾಥಮಿಕ ಕ್ರಮದ ಭಾಗವಾಗಿ ಇಂತಹದೊಂದು ನಿರ್ಧಾರ ಕೈಗೊಳ್ಳಲಾಗಿದೆ.

Most Read Articles

Kannada
English summary
We often take our vehicles to petrol pumps and get our 'Pollution Under Control' certificate. Currently the certificate has very less value and is merely done as a formality by most. It was introduced to regulate the pollution caused by vehicles.
Story first published: Saturday, August 23, 2014, 13:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X