ಮತ್ತಷ್ಟು ದುಬಾರಿಯಾದ ರೆನೊ ಡಸ್ಟರ್

By Nagaraja

ಫ್ರಾನ್ಸ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ರೆನೊ ಇಂಡಿಯಾದ ಜನಪ್ರಿಯ ಡಸ್ಟರ್ ಆವೃತ್ತಿಯು ಈಗಲೂ ಮಾರುಕಟ್ಟೆಯಲ್ಲಿ ಗಮನಾರ್ಹ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದೆ. ಹಾಗಿರಬೇಕೆಂದರೆ ಈ ಎಸ್‌ಯುವಿ ಕಾರಿನ ದರ ಏರಿಕೆ ಮಾಡಲು ಸಂಸ್ಥೆಯು ನಿರ್ಧರಿಸಿದೆ.

ಮೂಲಸಾಮಾಗ್ರಿ ಬೆಲೆಯೇರಿಕೆಯಿಂದಾಗಿ ದರ ಏರಿಕೆಗೊಳಿಸುತ್ತಿರುವಾಗಿ ಸ್ಪಷ್ಟನೆ ಕೊಟ್ಟಿರುವ ರೆನೊ ಸಂಸ್ಥೆಯು, ಮೂರು ಮಾದರಿಗಳಿಗೆ ಶೇಕಡಾ ಮೂರರಷ್ಟು ದರ ಏರಿಕೆ ಮಾಡಲು ನಿರ್ಧರಿಸಿದೆ.

Renault Duster

ಡಸ್ಟರ್ ಹೊರತಾಗಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಸ್ಕಾಲಾ ಹಾಗೂ ಪಲ್ಸ್ ಮಾದರಿಗಳಿಗೂ ಬೆಲೆಯೇರಿಕೆ ಅನ್ವಯವಾಗಲಿದೆ. ಪ್ರಸ್ತುತ ದರ ನೀತಿಯು ತಕ್ಷಣದಿಂದಲೇ ಜಾರಿಗೆ ಬರಲಿದೆ.

ಅಬಕಾರಿ ಸುಂಕ ಕಡಿತ ಮುಂದುವರಿದಿರುವ ನಡುವೆಯೂ ರೆನೊ ದರ ಏರಿಕೆಗೊಳಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಅಂದ ಹಾಗೆ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಡಸ್ಟರ್ ಮಾರಾಟದಲ್ಲಿದೆ.

Most Read Articles

Kannada
English summary
Renault India will be hiking prices of its compact SUV Duster. The French manufacturer will also be increasing cost by one percent of three vehicles
Story first published: Saturday, July 5, 2014, 11:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X