ಮುಂದಿನ ವರ್ಷ ರೆನೊದಿಂದ ಡಬಲ್ ಧಮಾಕಾ

By Nagaraja

ಡಸ್ಟರ್ ಕ್ರೀಡಾ ಬಳಕೆಯ ವಾಹನದ ಮೂಲದ ದೇಶದಲ್ಲಿ ಹೆಚ್ಚಿನ ಜನಪ್ರಿಯತೆ ಸಾಧಿಸಿರುವ ಫ್ರಾನ್ಸ್ ಮೂಲದ ಹೆಸರಾಂತ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ ಇಂಡಿಯಾ, ಮುಂದಿನ ವರ್ಷ ಅಂದರೆ 2015ನೇ ಸಾಲಿನಲ್ಲಿ ಭಾರತದಲ್ಲಿ ಎರಡು ಮಹತ್ವದ ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ಇದು ಮುಂದಿನ ಮೂರು ವರ್ಷಗಳಲ್ಲಿ ದೇಶದ ವಾಹನ ಮಾರುಕಟ್ಟೆಯಲ್ಲಿ ಶೇಕಡಾ ಐದರಷ್ಟು ಮಾರಾಟ ಶೇರನ್ನು ವಶಪಡಿಸಿಕೊಳ್ಳುವ ಸಂಸ್ಥೆಯ ಯೋಜನೆಯ ಭಾಗವಾಗಿರಲಿದೆ.

renault

ಯಾವೆಲ್ಲ ಮಾದರಿ?
ಪ್ರಮುಖವಾಗಿಯೂ ರೆನೊ ಸಂಸ್ಥೆಯು ಬಹು ಬಳಕೆಯ ವಾಹನ (ಎಂಪಿವಿ) ಹಾಗೂ ಎ ಎಂಟ್ರಿ ಲೆವೆಲ್ ವಿಭಾಗದಲ್ಲಿ ಎರಡು ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ವಿಶೇಷವೆಂದರೆ ಇವೆರಡು ಭಾರತೀಯ ವಾಹನ ಮಾರುಕಟ್ಟೆಯ ಹೃದಯ ಭಾಗವೆಂದೇ ಪರಿಗಣಿಸಲ್ಪಟ್ಟಿದೆ. ಅಲ್ಲದೆ ಅತಿ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿದೆ.

ಇದನ್ನೇ ಉಲ್ಲೇಖಿಸಿರುವ ರೆನೊ ಇಂಡಿಯಾದ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸುಮೀತ್ ಶೆನೋಯ್, "ಭಾರತದಲ್ಲಿ ನಮ್ಮ ಸಾನಿಧ್ಯ ಹೆಚ್ಚಿಸಲು ಮಹತ್ತರ ಹೆಜ್ಜೆಗಳಿನ್ನಿಡುತ್ತಿದ್ದು, ಹೆಚ್ಚು ಜನಪ್ರಿಯ ವಿಭಾಗಕ್ಕೆ ಕಾಲಿಡುವ ಮೂಲಕ ತನ್ನ ಸಾನಿದ್ಯವನ್ನು ಇನ್ನಷ್ಟು ಗಟ್ಟಿಪಡಿಸಲಿದೆ" ಎಂದಿದ್ದಾರೆ.

ಅದೇ ಹೊತ್ತಿಗೆ ಡೀಲರ್ ಜಾಲ ಹಾಗೂ ಘಟಕವನ್ನು ಹೆಚ್ಚಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಇವೆಲ್ಲವೂ ಮುಂದಿನ ದಿನಗಳಲ್ಲಿ ಹೆಚ್ಚು ಗುಣಮಟ್ಟದ ಜೊತೆಗೆ ಉತ್ತಮ ಸೇವೆ ಒದಗಿಸಲು ಸಹಕಾರಿಯಾಗಲಿದೆ.

Most Read Articles

Kannada
English summary
Renault India Planning to Introduce 2 New Models In 2015
Story first published: Saturday, December 13, 2014, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X