ಸ್ಕೋಡಾ ಸಿಟಿಜೆಟ್ ಕಾನ್ಸೆಪ್ಟ್ ನೋಡಿದ್ರಾ?

By Nagaraja

ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಕೋಡಾ ನೂತನ ಕನ್ವರ್ಟಿಬಲ್ ಸಿಟಿಜೆಟ್ ಅಭಿವೃದ್ಧಿಯಲ್ಲಿ ತಲ್ಲೀನವಾಗಿದೆ. ಇದು ಪ್ರಮುಖವಾಗಿ ಸಿಟಿಗೊ ಕಾಂಪಾಕ್ಟ್ ಕಾರಿನ ತಲಹದಿಯಲ್ಲಿ ರೂಪುಗೊಳ್ಳಲಿದೆ.

ಇದು ವರ್ಥಸ್ಸಿಯಲ್ಲಿ ಮಾತೃಸಂಸ್ಥೆ ಫೋಕ್ಸ್‌ವ್ಯಾಗನ್ ಸನ್ಮುಖದಲ್ಲಿ ಪ್ರದರ್ಶನಗೊಳ್ಳಲಿದೆ. ವರ್ಷಸ್ಸಿ ಜಿಟಿಐ ಅಭಿಮಾನಿಗಳ ಪಾಲಿಗೆ ವಿಶೇಷ ತಾಣವಾಗಿದ್ದು, ಫೋಕ್ಸ್‌ವ್ಯಾಗನ್ ವಿಶೇಷ ಕಾನ್ಸೆಪ್ಟ್ ಕಾರುಗಳು ತಯಾರುಗೊಳ್ಳುತ್ತದೆ. ಇಲ್ಲಿ ಫೋಕ್ಸ್‌ವ್ಯಾಗನ್‌ನ ಎಲ್ಲ ಸಬ್ ಬ್ರಾಂಡ್‌ಗಳು ತನ್ನ ವಿಶೇಷ ಕಾನ್ಸೆಪ್ಟನ್ನು ಪ್ರದರ್ಶಿಸುತ್ತವೆ.

Skoda

ಇದರಂತೆ ಸ್ಕೋಡಾ ನೂತನ ಸ್ಪೋರ್ಟಿ ಕನ್ವರ್ಟಿಬಲ್ ಕಾನ್ಸೆಪ್ಟ್ ಅನ್ನು ತಯಾರಿಸಿದೆ. ಇದು ಎರಡು ಸೀಟುಗಳ ಕನ್ವರ್ಟಿಬಲ್ ಕಾರಾಗಿರಲಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದ್ಯಾವುದೇ ಮೇಲ್ಚಾವಣಿ ಪಡೆದುಕೊಂಡಿಲ್ಲ.

ಇಂಟಿರಿಯರ್ ಬಗ್ಗೆಯೂ ಮಾಹಿತಿ ಲಭ್ಯವಿದ್ದು, ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್ ಪಡೆದುಕೊಳ್ಳಲಿದೆ. ಹಾಗೆಯೇ ಹ್ಯಾಂಡ್‌ಬ್ರೇಕ್ ಹಾಗೂ ಗೇರ್ ನಾಬ್ ಲೆಥರ್ ಹೋದಿಕೆ ಪಡೆದುಕೊಳ್ಳಲಿದೆ. ಅಂದ ಹಾಗೆ ಸ್ಕೋಡಾ ಸಿಟಿಜೆಟ್ 1.0 ಲೀಟರ್ ತ್ರಿ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 75 ಅಶ್ವಶಕ್ತಿ ಉತ್ಪಾದಿಸಲಿದೆ.

ನಿಮ್ಮ ಮಾಹಿತಿಗಾಗಿ ಇದು ಕೇವಲ ಪ್ರದರ್ಶನಕ್ಕಷ್ಟೇ ಸೀಮೀತವಾಗಿದ್ದು, ನಿರ್ಮಾಣ ವರ್ಷನ್ ಪಡೆದುಕೊಳ್ಳುವುದಿಲ್ಲ. ಇದು 2014 ಮೇ 28ರಿಂದ 31ರ ವರೆಗೆ ವರ್ಥಸ್ಸೀಯಲ್ಲಿ ಪ್ರದರ್ಶನ ಕಾಣಲಿದೆ.

Most Read Articles

Kannada
English summary
Skoda have been working on a convertible called the CitiJet, which is based upon the CitiGo compact car. The Czech car manufacturer will showcase their new car at Worthersee.
Story first published: Thursday, April 17, 2014, 11:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X