2015ರಲ್ಲಿ ಸ್ಕೋಡಾ ಫ್ಯಾಬಿಯಾ ಭಾರತದಲ್ಲಿ ಮರು ಬಿಡುಗಡೆ

ಜಗತ್ತಿನ ಹೆಸರಾಂತ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿರುವ ಸ್ಕೋಡಾ, 2014ನೇ ಸಾಲಿನ ಎರಡನೇಯಾರ್ಧದಲ್ಲಿ ಜಾಗತಿಕ ಮಾರುಕಟ್ಟೆಗೆ ನೂತನ ಫ್ಯಾಬಿಯಾ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಲಿದೆ. ಇದು 2015 ಫ್ಯಾಬಿಯಾ ಮಾದರಿ ಎಂದೆನಿಸಿಕೊಳ್ಳಲಿದೆ.

ಪ್ರಸ್ತುತ ವರದಿಗಳ ಪ್ರಕಾರ ಜೆಕ್ ಗಣರಾಜ್ಯದ ಈ ಸಂಸ್ಥೆಯು ಭಾರತದಲ್ಲೂ ಸ್ಕೋಡಾ ಫ್ಯಾಬಿಯಾ ಮರು ಲಾಂಚ್ ಮಾಡುವ ಯೋಜನೆ ಹೊಂದಿದೆ. ಅಂದ ಹಾಗೆ 2015 ಫ್ಯಾಬಿಯಾ, ಫೋಕ್ಸ್‌ವ್ಯಾಗನ್ ಎಂಕ್ಯೂಬಿ ಫ್ಯಾಟ್‌ಫಾರ್ಮ್ ಹಂಚಿಕೊಳ್ಳುವ ಸಾಧ್ಯತೆಯಿದೆ. ಇದನ್ನೇ ಫೋಕ್ಸ್‌ವ್ಯಾಗನ್ ಪೊಲೊ ಆವೃತ್ತಿಗೂ ಬಳಕೆ ಮಾಡಲಾಗಿತ್ತು.


ಆದರೆ ಸದ್ಯಕ್ಕಂತೂ ಫ್ಯಾಬಿಯಾ ಪ್ರವೇಶ ನಡೆಯುವುದಿಲ್ಲ. ವರದಿಗಳ ಪ್ರಕಾರ 2015ರ ಮಧ್ಯಂತರ ಅವಧಿಯಲ್ಲಿ ದೇಶಕ್ಕೆ ಎಂಟ್ರಿ ಕೊಟ್ಟಲ್ಲಿ ಅಚ್ಚರಿಪಡಬೇಕಾಗಿಲ್ಲ. ಈ ವೇಳೆ ಖಂಡಿತವಾಗಿಯೂ ಫ್ಯಾಬಿಯಾ ನೋಟದಲ್ಲಿ ಬದಲಾವಣೆ ಕಂಡುಬರಲಿದೆ.

ಇದರಲ್ಲಿ ಪರಿಷ್ಕೃತ ಫ್ರಂಟ್ ಗ್ರಿಲ್, ಹೆಡ್‌ಲ್ಯಾಂಪ್ ಜತೆಗೆ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್‌ಗಳು ಕಂಡುಬರಲಿದೆ. ಇನ್ನು ಕಾರಿನೊಳಗೂ ಹೆಚ್ಚಿನ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದೆ.

Skoda Fabia

ಮಾತೃಸಂಸ್ಥೆ ಫೋಕ್ಸ್‌ವ್ಯಾಗನ್ ಜೊತೆ ತಲಹದಿ ಹಂಚಿಕೊಳ್ಳುವುದರಿಂದಲೇ ಹೊಸ ಫ್ಯಾಬಿಯಾ ಹೆಚ್ಚು ಉದ್ದಗಲತೆಯನ್ನು ಪಡೆದುಕೊಳ್ಳಲಿದೆ. ಇದು ಸವಾರರಿಗೆ ಹೆಚ್ಚು ಲೆಗ್ ಜತೆ ಹೆಡ್ ರೂಂ ಪಡೆದುಕೊಳ್ಳಲು ನೆರವಾಗಲಿದೆ. ಹಾಗೆಯೇ 1.0 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಜತೆಗೆ ಟರ್ಬೊಚಾರ್ಜರ್ ಮತ್ತು ಹೆಚ್ಚು ಶಕ್ತಿಶಾಲಿ 1.4 ಲೀಟರ್ ಟರ್ಬೊಚಾರ್ಜ್ಡ್ 3 ಸಿಲಿಂಡರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ.

ಸದ್ಯ ಭಾರತದಲ್ಲಿ ಫ್ಯಾಬಿಯಾ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದು, ಬಾಕಿ ಉಳಿದಿರುವ ಸ್ಟೋಕ್ ಮಾತ್ರ ಖಾಲಿ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಸ್ಮರ್ಧಾತ್ಮಕ ದರಗಳಲ್ಲಿ ಪರಿಚಯವಾದ್ದಲ್ಲಿ ಭಾರತದಲ್ಲಿ ಸ್ಕೋಡಾ ಅದೃಷ್ಟವನ್ನೇ ಫ್ಯಾಬಿಯಾ ಬದಲಾಯಿಸಲಿದೆ ಎಂಬುದರಲ್ಲಿ ಯಾವುದೇ ಸಂಶಯ ಪಡಬೇಕಾಗಿಲ್ಲ.

Most Read Articles

Kannada
English summary
Skoda will be launching a new Fabia hatchback for international markets during the latter part of 2014. This will be dubbed as their 2015 Fabia model. We have a strong feeling that the Czech manufacturer could offer this model in India.
Story first published: Monday, May 5, 2014, 15:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X