ಸುಜುಕಿಯಿಂದ ಗುಜರಾತ್‌ನಲ್ಲಿ ಕಾರು ಘಟಕ

By Nagaraja

ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಸುಜುಕಿ ಮೋಟಾರು ಕಂಪನಿ, ಬರೋಬ್ಬರಿ 488 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 3,050 ಕೋಟಿ ರು.) ಹೂಡಿಕೆ ಮಾಡಿ ಗುಜರಾತ್‌ನಲ್ಲಿ 2017ರ ವೇಳೆಗೆ ನೂತನ ಘಟಕವೊಂದನ್ನು ಆರಂಭಿಸುವ ಮಹತ್ತರ ಯೋಜನೆಯೊಂದಿಗೆ ಮುಂದೆ ಬಂದಿದೆ.

ಇದು ದೇಶದಲ್ಲಿ ಸಂಪೂರ್ಣವಾಗಿ ಸುಜುಕಿ ಅಧೀನತೆಯಲ್ಲಿರುವ ಘಟಕವೆನಿಸಿಕೊಳ್ಳಲಿದೆ. ಇಲ್ಲಿ ಆರಂಭದಲ್ಲಿ ವಾರ್ಷಿಕವಾಗಿ ಒಂದು ಲಕ್ಷ ಕಾರುಗಳನ್ನು ಉತ್ಪಾದಿಸಲಾಗುವುದು. ಇದನ್ನು ಉತ್ಪನ್ನಗಳನ್ನು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಇಂಡಿಯಾಗೆ ವಿತರಿಸಲಾಗುವುದು ಎಂದು ಸುಜುಕಿ ಮೋಟಾರ್ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲತ: 2012ರಲ್ಲೇ ಮೆಹಸನಾದಲ್ಲಿ ಘಟಕವೊಂದನ್ನು ಆರಂಭಿಸಲು ಮಾರುತಿ ಪ್ರಸ್ತಾಪಿಸಿತ್ತು. ಆದರೆ ಇದೀಗ ಈ ಮಹತ್ತರ ಯೋಜನೆಯನ್ನು ಸುಜುಕಿ ಕೈಗೆತ್ತಿಕೊಂಡಿದೆ. ಈ ಗುಜರಾತ್ ಘಟಕದಲ್ಲಿ ನಾಲ್ಕು ಚಕ್ರದ ವಾಹನ ಸೇರಿದಂತೆ ಬಿಡಿಭಾಗಗಳು ನಿರ್ಮಾಣವಾಗಲಿದೆ.

maruti zen
Most Read Articles

Kannada
Story first published: Thursday, January 30, 2014, 12:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X