ರಿಕಾಲ್ ನಿಭಾಯಿಸುವಷ್ಟು ಆರ್ಥಿಕ ಬಲವಿದೆ: ಟಕಟ

By Nagaraja

ಕಳೆದ ಕೆಲವು ದಿನಗಳಲ್ಲಿ ಟಕಟ ಕಾರ್ಪ್ ಸಂಸ್ಥೆಯು ಭಾರಿ ಚರ್ಚೆಯಲ್ಲಿದ್ದು, ಕೆಟ್ಟ ಸುದ್ದಿಗಳಿಗಾಗಿ ಹೆಸರು ಮಾಡಿದೆ. ಬಾಹ್ಯ ಸಂಸ್ಥೆ ಟಕಟ ಪೂರೈಸುತ್ತಿರುವ ಏರ್ ಬ್ಯಾಗ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರ ಹಿನ್ನಲೆಯಲ್ಲಿ ವಿಶ್ವದ ಪ್ರಮುಖ ವಾಹನ ತಯಾರಿಕ ಸಂಸ್ಥೆಗಳು ಭಾರಿ ರಿಕಾಲ್ ಮಾಡುವಂತೆ ಪ್ರೇರಿತವಾಗಿದ್ದವು.

ಇದರಿಂದಾಗಿ ಟಕಟ ಹಿನ್ನಡೆ ಅನುಭವಿಸುವಂತಾಗಿತ್ತು. ಈಗ ಸ್ಪಷ್ಟನೆ ಕೊಟ್ಟಿರುವ ಸಂಸ್ಥೆಯು, ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಆರ್ಥಿಕವಾಗಿ ಬಲವಾಗಿದ್ದೇವೆ ಎಂದಿದೆ.

takata

ಈ ಸಂದರ್ಭದಲ್ಲಿ ಮಾತನಾಡಿರುವ ಟಕಟ ಕಾರ್ಪ್ ಮುಖ್ಯ ಕಾರ್ಯಕಾರಿಣಿ ಅಧಿಕಾರಿ ಶಿಘೆಶಿಯಾ ಟಕಡ, "ಏರ್ ಬ್ಯಾಗ್ ಸಮಸ್ಯೆ ನಿಭಾಯಿಸಲು 774 ಮಿಲಿಯನ್ ಅಮೆರಿಕನ್ ಡಾಲರ್ ಮೀಸಲಿಡಲಾಗಿದ್ದು, ಇನ್ನು ಹೆಚ್ಚು ಅಗತ್ಯವಿದ್ದಲ್ಲಿ ಬಿಡುಗಡೆ ಮಾಡಲಾಗುವುದು" ಎಂದಿದೆ.

ಮಾತು ಮುಂದುವರಿಸಿರುವ ಅವರು, ಟಕಟ ಯಾವುದನ್ನು ಮುಚ್ಚಿಡಲು ಬಯಸುವುದಿಲ್ಲ. ತೊಂದರೆಯನ್ನು ಆದಷ್ಟು ಬೇಗನೇ ಸರಿಪಡಿಸಿ ಕೊಡಲಾಗುವುದು ಎಂದಿದೆ. ಇದುವರೆಗೆ ಏರ್ ಬ್ಯಾಗ್ ಸಮಸ್ಯೆಯಿಂದಾಗಿ ಐವರು ಮೃತಪಟ್ಟಿದ್ದಾರೆ. ಇವರಲ್ಲಿ ನಾಲ್ಕು ಮಂದಿ ಅಮೆರಿಕದಲ್ಲಿ ಹಾಗೂ ಉಳಿದೊಂದು ಮಲೇಷ್ಯಾದಲ್ಲಿ ದಾಖಲಾಗಿದೆ. ಇದರಿಂದಾಗಿ ಟಕಟ ವಿರುದ್ಧ ಕ್ರಿಮಿನಲ್ ಕೇಸು ಸಹ ದಾಖಲಾಗಿದೆ.

Most Read Articles

Kannada
English summary
Takata Corp., one of the biggest reason behind vehicle recalls this year, has said that it has enough funds to deal with almost 21 million vehicle recalls that have been made.
Story first published: Saturday, December 20, 2014, 15:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X