ಟಾಟಾ ಬೋಲ್ಟ್ ಆನ್ಲೈನ್ ಬುಕ್ಕಿಂಗ್ ಮಾಡಿ

By Nagaraja

ಇಂದಿನ ಬಿಡುವಿಲ್ಲದ ಜೀವನದಲ್ಲಿ ಸಮಯವನ್ನು ಹುಡುಕುವುದು ಕಷ್ಟ. ಹಾಗಿರುವಾಗ ಹೊಸ ಕಾರು ಹುಡುಕುವವರು ಪದೇ ಪದೇ ಡೀಲರುಗಳ ಬಳಿ ತೆರಳಿ ವಿವರವನ್ನು ತಿಳಿದುಕೊಳ್ಳುವುದು ಕಷ್ಟದ ಮಾತು.

ಇದಕ್ಕಾಗಿಯೇ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಇನ್ನಷ್ಟೇ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ.

ಆಸಕ್ತ ಗ್ರಾಹಕರು ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರನ್ನು ಆನ್‌ಲೈನ್ ಮೂಖಾಂತರ ಬುಕ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಮುಂಗಡವಾಗಿ 11,000 ರು. ಪಾವತಿಸಬೇಕಾಗಿದೆ.

bookonline.tatamotors.com

tata bolt

ಕೇವಲ ಬೋಲ್ಟ್ ಮಾತ್ರವಲ್ಲದೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟಾಟಾ ಜೆಸ್ಟ್ ಮಾದರಿಗೂ ಇಂತಹದೊಂದು ಅವಕಾಶವನ್ನು ಟಾಟಾ ಮಾಡಿಕೊಟ್ಟಿದೆ.

ಟಾಟಾದ ಹೊಸ ಹೊರಿಝೊನೆಕ್ಸ್ಟ್ ಥಿಯರಿಯಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಮಾದರಿ ಬೋಲ್ಟ್ ಆಗಿದೆ. ಇದು ಪೆಟ್ರೋಲ್ ಜೊತೆಗೆ ಡೀಸೆಲ್ ಮಾದರಿಗಳಲ್ಲಿ ಲಭ್ಯವಿರುತ್ತದೆ.

ಟಾಟಾ ಬೋಲ್ಟ್ ಪೆಟ್ರೋಲ್ ಎಂಜಿನ್ 1.2 ಲೀಟರ್ ಟರ್ಬೊ ಚಾರ್ಜ್ಡ್ ಮಲ್ಟಿ ಪಾಯಿಂಟ್ ಫ್ಲೂಯಲ್ ಇಂಜೆಕ್ಷನ್ (ಎಂಪಿಎಫ್‌ಐ) ರೆವೊಟ್ರಾನ್ 1.2 ಟಿ ಎಂಜಿನ್ 90 ಪಿಎಸ್ ಪವರ್ (140 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಕಾರು ಸ್ಪೋರ್ಟ್ಸ್, ಸಿಟಿ ಹಾಗೂ ಇಕೊ ಮೋಡ್‌ಗಳನ್ನು ಹೊಂದಿರುತ್ತದೆ.

ಅದೇ ರೀತಿ ಡೀಸೆಲ್ ವೆರಿಯಂಟ್ 75 ಪಿಎಸ್ ಪವರ್ ಉತ್ಪಾದಿಸಲಿದ್ದು 190 ಎನ್‌ಎಂ ಟಾರ್ಕ್ (ತಿರುಗುಬಲ) ಹೊಂದಿರಲಿದೆ. ಇದರಲ್ಲಿ ಬಾಷ್ ನಾವೀನ್ಯತೆಯ 9ನೇ ಪೀಳಿಗೆಯ ಎಬಿಎಸ್ ಹಾಗೂ ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ (ಸಿಎಸ್‌ಸಿ) ಆಳವಡಿಸಲಾಗಿದೆ.

ಅಷ್ಟೇ ಅಲ್ಲದೆ ಹರ್ಮಾನ್ ಜೊತೆ ಪಾಲುದಾರಿಕೆ ಹೊಂದಿರುವ ಟಾಟಾ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ ಅಭಿವೃದ್ಧಿಪಡಿಸಿದೆ. ಅಂತೆಯೇ ಮ್ಯಾಪ್ ಮೈ ಇಂಡಿಯಾದ ಮುಂದಿನ ಜನಾಂಗದ ನೇವಿಗೇಷನ್ ಸಿಸ್ಟಂ ಆಳವಡಿಕೆಯಾಗಲಿದೆ.

Most Read Articles

Kannada
English summary
Tata Motors, today announced the opening of online bookings for its much-awaited sporty hatchback, the all-new Bolt, from its passenger vehicle stable. After the success of Zest, Bolt is the second brand new vehicle in line under the company’s HORIZONEXT umbrella.
Story first published: Monday, December 22, 2014, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X