ನರೈನ್ ಕಾರ್ತಿಕೇಯನ್‌ ರೇಸ್‌ಗೆ ಟಾಟಾ ಪ್ರಾಯೋಜಕತ್ವ

By Nagaraja

ದೇಶದ ಮೊದಲ ಫಾರ್ಮುಲಾ ಒನ್ ರೇಸ್ ಚಾಲಕರಾಗಿರುವ ನರೈನ್ ಕಾರ್ತಿಕೇಯನ್, ಜಪಾನ್‌ನಲ್ಲಿ ಸಾಗಲಿರುವ 2014 ಸೂಪರ್ ಫಾರ್ಮುಲಾ ಸಿರೀಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಜಗತ್ತಿನ ಅತಿ ವೇಗದ ಸಿಂಗಲ್ ಮೇಕ್ ರೇಸಿಂಗ್ ಚಾಂಪಿಯನ್‌ಶಿಪ್ ಎಂಬ ಬಿರುದಿಗೆ ಪಾತ್ರವಾಗಿರುವ ಸೂಪರ್ ಫಾರ್ಮುಲಾ ರೇಸಿಂಗ್‌ನಲ್ಲಿ ಕಾರ್ತಿಕೇಯನ್ ಅವರ ಪ್ರಧಾನ ಪ್ರಾಯೋಜಕತ್ವವನ್ನು ಟಾಟಾ ಸಂಸ್ಥೆ ನಿರ್ವಹಿಸಲಿದೆ. ಆಟೋ ಜಿಪಿ ಸೀರೀಸ್ ರೇಸ್‌ನಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿರುವ ನರೈನ್ ಕಾರ್ತಿಕೇಯನ್ ಅವರಿಗೆ ಬಹಳ ಹಿಂದಿನಿಂದಲೇ ಟಾಟಾ ಪ್ರಾಯೋಜಕತ್ವ ವಹಿಸುತ್ತಿದೆ.

Narain Karthikeyan

ಅಷ್ಟೇ ಅಲ್ಲದೆ ಈ ಬಾರಿಯ ವಿಶೇಷತೆಯೆಂದರೆ ಸೂಪರ್ ಫಾರ್ಮುಲಾ ರೇಸ್‌ನಲ್ಲಿ ನೂತನ ದಲ್ಲಾರಾ ಎಸ್‌ಎಫ್14 ಚಾಸೀ ಬಳಕೆಯಾಗಲಿದೆ. ಇದು ಎರಡು ಲೀಟರ್ 550 ಬಿಎಚ್‌ಪಿ ಟರ್ಬೊಚಾರ್ಜ್ಡ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ. ಇದು ಈ ಹಿಂದಿನ ವಿ8 ಎಂಜಿನ್‌ಗೆ ಬದಲಿಯಾಗಿರಲಿದೆ.

ಅಂದ ಹಾಗೆ ಟೀಮ್ ಇಂಫುಲ್ ಹೊಶಿನೊ ರೇಸಿಂಗ್ ತಂಡವನ್ನು ಕಾರ್ತಿಕೇಯನ್ ಪ್ರತಿನಿಧಿಸಲಿದ್ದಾರೆ. ಇವರಿಗೆ 2010 ಸೂಪರ್ ಫಾರ್ಮುಲಾ ಚಾಂಪಿಯನ್ ಹಾಗೂ ಸಹ ಚಾಲಕ ಜೋವೋ ಪಾಲೋ ಡಿ ಒಲಿವೇರಾ ಸಾಥ್ ನೀಡಲಿದ್ದಾರೆ.

2014 ಸೂಪರ್ ಫಾರ್ಮುಲಾ ಕ್ಯಾಲೆಂಡರ್
ಎಪ್ರಿಲ್ 13 ಸುಝುಕಾ ಸರ್ಕ್ಯೂಟ್
ಮೇ 18 ಫ್ಯೂಜಿ ಸ್ಪೀಡ್‌ವೇ
ಡಿಬಿಎ ಕೊರಿಯಾ
ಜುಲೈ 13 ಫ್ಯೂಜಿ ಸ್ಪೇಡ್‌ವೇ
ಆಗಸ್ಟ್ 24 ಟ್ವಿನ್ ರಿಂಗ್ ಮೊಟೆಗಿ
ಸೆಪ್ಟೆಂಬರ್ 14 ಆಟೋಪೊಲಿಸ್
ಸೆಪ್ಟೆಂಬರ್ 28 ಸ್ಪೋರ್ಟ್ಸ್‌ಲ್ಯಾಂಡ್ ಸುಗೊ
ನವೆಂಬರ್ 9 ಸುಝುಕ ಸರ್ಕ್ಯೂಟ್

ಸೂಪರ್ ಫಾರ್ಮುಲಾ 2014
ಚಾಸೀ: ದಲ್ಲಾರಾ ಎಸ್‌ಎಪ್14
ಎಂಜಿನ್: 2.0 ಲೀಟರ್ ಟರ್ಬೊ ಜತೆಗೆ ಹೈಬ್ರಿಡ್ ಸಿಸ್ಟಂ
ಪವರ್: 550 ಬಿಎಚ್‍‌ಪಿ
ಭಾರ: 650 ಕೆ.ಜಿ.
ಗೇರ್ ಬಾಕ್ಸ್: ರಿಕಾರ್ಡೊ ಸಿಕ್ಸ್ ಸ್ಪೀಡ್ ಪ್ಯಾಡಲ್
ಶಿಫ್ಟ್
ಬ್ರೇಕ್ಸ್: ಬ್ರೆಂಬೊ
ಚಕ್ರ: ಬ್ರಿಡ್ಜ್‌ಸ್ಟೋನ್

Most Read Articles

Kannada
English summary
Narain Karthikeyan, India's first Formula 1 racing driver, will participate in the 2014 Super Formula series, based in Japan. Super Formula is the world's fastest single-make racing championship. Karthikeyan's main sponsor will be his long time supporter, Tata Group.
Story first published: Tuesday, April 1, 2014, 10:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X