ಕಾಯುವಿಕೆ ಅಂತ್ಯ; ಹೊಸ ವರ್ಷದಲ್ಲಿ ಬೋಲ್ಟ್ ಎಂಟ್ರಿ

By Nagaraja

2015ನೇ ಸಾಲು ದೇಶದ ವಾಹನೋದ್ಯಮದ ಪಾಲಿಗೆ ಹಲವಾರು ಸ್ಮರಣೀಯ ನಿಮಿಷಗಳಿಂದ ಕೂಡಿರಲಿದೆ. ಯಾಕೆಂದರೆ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಸೇರಿದಂತೆ ಪ್ರಮುಖ ವಾಹನ ತಯಾರಿಕ ಸಂಸ್ಥೆಗಳು ತನ್ನ ಹೊಸ ಆವೃತ್ತಿಗಳೊಂದಿಗೆ ಮುಂದೆ ಬರುತ್ತಿದೆ.

ಹೌದು, ಟಾಟಾ ಸಂಸ್ಥೆಯ ಬಹುನಿರೀಕ್ಷಿತ ಹ್ಯಾಚ್‌ಬ್ಯಾಕ್ ಮಾದರಿಯಾಗಿರುವ ಬೋಲ್ಟ್ ಕಾರು ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಜನವರಿ 20ರಂದು ರಸ್ತೆಗೆ ಪ್ರವೇಶಿಸಲಿದೆ. ಟಾಟಾ ಬೋಲ್ಟ್‌ನ ಹೊಸ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಈಗಾಗಲೇ ಚರ್ಚೆಗೆ ಗ್ರಾಸವಾಗಿದೆ.

tata bolt

ಈಗಾಗಲೇ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಮಾದರಿಯ ಯಶಸ್ಸಿನಿಂದ ಪುಳಕಿತಗೊಂಡಿರುವ ಟಾಟಾ ಸಂಸ್ಥೆಯು ಜನವರಿ 20ರಂದು ಮಗಗೊಂದು ಅಚ್ಚರಿ ಮೂಡಿಸಲಿದೆ. ಈ ಮೂಲಕ ಟ್ಯಾಕ್ಸಿ ಕಾರು ಪಟ್ಟದ ಅಪವಾದವನ್ನು ದೂರ ಮಾಡುವ ನಿರೀಕ್ಷೆಯಲ್ಲಿದೆ.

ಅಷ್ಟೇ ಯಾಕೆ ಬೋಲ್ಟ್ ಮಾರಾಟಕ್ಕೆ ಉತ್ತೇಜನ ನೀಡಿರುವ ಟಾಟಾ ಸಂಸ್ಥೆಯು ಈಗಾಗಲೇ 11,000 ರು.ಗಳಲ್ಲಿ ಮುಂಗಡ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ.

ಟಾಟಾ ಬೋಲ್ಟ್ 1.2 ಲೀಟರ್ ರೆವೊಟ್ರಾನ್ ಟರ್ಬೊ ಪೆಟ್ರೋಲ್ ಎಂಜಿನ್ 140 ಎನ್‌ಎಂ ತಿರುಗುಬಲದಲ್ಲಿ 90 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಇದು ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರುವುದು ವಿಶೇಷವೆನಿಸಿದೆ. ಹಾಗೆಯೇ ಫಿಯೆಟ್‌ನ 1.3 ಲೀಟರ್ ಡೀಸೆಲ್ ಮೋಟಾರು ಎಂಜಿನ್ 190 ಎನ್‌ಎಂ ತಿರುಗುಬಲದಲ್ಲಿ 75 ಪಿಎಸ್ ಪವರ್ ಉತ್ಪಾದಿಸಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ. ಆದರೆ ಎಎಂಟಿ ಅಲಭ್ಯತೆ ಕಾಡಲಿದೆ.

ಹೊಸ ಬೋಲ್ಟ್ ಕಾರಿನಲ್ಲಿರುವ ಹರ್ಮಾನ್ ಮಾಹಿತಿ ಮನರಂಜನಾ ವ್ಯವಸ್ಥೆ, ಸ್ಮಾರ್ಟ್ ಫೋನ್ ಇಂಟೇಗ್ರೇಷನ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಮ್ಯಾಪ್ ಮೈ ಇಂಡಿಯಾ ವೈಶಿಷ್ಟ್ಯಗಳು ಇನ್ನಷ್ಟು ರೋಚಕತೆಗೆ ಕಾರಣವಾಗಲಿದೆ.

ಒಟ್ಟಿನಲ್ಲಿ ನಾಲ್ಕು ಲಕ್ಷ ರು.ಗಳ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಿರುವ ಟಾಟಾ ಬೋಲ್ಟ್, ಈ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸ್ವಿಫ್ಟ್, ಹ್ಯುಂಡೈ ಗ್ರಾಂಡ್ ಐ10 ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

Most Read Articles

Kannada
English summary
Tata Motors will launch its much-awaited Bolt hatchback on January 20th 2015. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X