ನಕಲಿ ಬಿಡಿಭಾಗ ಮಾರಾಟ; ಟಾಟಾ ವ್ಯಾಪಕ ದಾಳಿ

By Nagaraja

ನಕಲಿ ವಾಹನ ಬಿಡಿಭಾಗಗಳ ತಯಾರಿ ಹಾಗೂ ಮಾರಾಟದ ವಿರುದ್ಧ ಖುದ್ದಾಗಿ ಮುಂದೆ ಬಂದಿರುವ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಕರ್ನಾಟಕ ಸೇರಿದಂತೆ ದೇಶದ್ಯಾಂತ ವ್ಯಾಪಕ ದಾಳಿ ನಡೆಸಿದೆ.

ನಕಲಿ ಬಿಡಿಭಾಗ ಖರೀದಿಯಿಂದ ಗ್ರಾಹಕರನ್ನು ಎಚ್ಚರಿಸುವುದು ಟಾಟಾದ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಟಾಟಾ ಜೆನ್ಯೂನ್ ಪಾರ್ಟ್ಸ್ (ಟಿಜಿಪಿ) ಬ್ರಾಂಡ್ ಅಡಿಯಲ್ಲಿ ವ್ಯವಸ್ಥಿತ ಅಭಿಯಾನವನ್ನು ಹಮ್ಮಿಕೊಂಡಿದೆ. ಇದರಂತೆ ದೇಶದ್ಯಾಂತ ವ್ಯಾಪಕ ದಾಳಿ ಕೈಗೊಂಡಿದೆ.

Tata Motors

ಇದುವರೆಗೆ ರಾಜ್ಯದಲ್ಲಿ ಏಳು ಪ್ರದೇಶ ಸೇರಿದಂತೆ ದೇಶದ್ಯಾಂತ 125 ಕಡೆಗಳಲ್ಲಿ ಟಾಟಾ ದಾಳಿ ನಡೆಸಿದೆ. ಪ್ರಮುಖವಾಗಿಯೂ ಐಪಿಆರ್ ಜಾರಿ, ಹಕ್ಕುಸ್ವಾಮ್ಯ ರಕ್ಷಣೆ ಏಜೆನ್ಸಿ, ಟಾಟಾ ಟಿಜಿಪಿ ತಂಡ ಮತ್ತು ಕಾನೂನು ತಂಡ ಜತೆಗೆ ಸ್ಥಳೀಯ ಪೊಲೀಸ್ ನೆರವಿನೊಂದಿಗೆ ದಾಳಿ ನಡೆಸಲಾಗುತ್ತಿದೆ. ಈ ಮೂಲಕ ನಕಲಿ ಉತ್ಪಾದನಾ ಘಟಕ, ಸ್ಥಳ, ಬಿಡಿಭಾಗ, ಪ್ಯಾಕೇಜ್ ಸೆಂಟರ್‌‍ಗಳನ್ನು ಗುರುತಿಸಲಾಗುತ್ತಿದೆ.

ಕರ್ನಾಟಕ ದಾಳಿ ವಿವರ ಇಂತಿದೆ:

ಯಾದಗಿರಿ ಪ್ರದೇಶ: ಶ್ರೀ ಸಂಘಮೇಶ್ವರ ಆಟೋಮೊಬೈಲ್ಸ್, ಆನಂದ್ ಆಟೋಮೊಬೈಲ್ಸ್, ಚೆನ್ನ ಬಸವೇಶ್ವರ ಆಟೋಮೊಬೈಲ್ಸ್.
ಮುಲ್ಬಗಲ್: ಎಂಬಿಎಸ್ ಆಟೋಮೊಬೈಲ್ಸ್, ಸೂಪರ್ ಆಟೋಮೊಬೈಲ್ಸ್.
ಕೋಲಾರ: ಕೋಲಾರ ಕಾರ್ ಆಟೋಮೊಬೈಲ್ಸ್, ಎಸ್‌ಎಸ್ ಆಟೋಮೊಬೈಲ್ಸ್.

ದಾಳಿ ನಡೆಸಿರುವ ತಂಡದ ಪ್ರಕಾರ, ಪ್ರಮುಖವಾಗಿಯೂ ಕ್ಲಚ್, ಏರ್/ಒಯಿಲ್/ಇಂಧನ ಫಿಲ್ಟರ್, ಬೆಲ್ಟ್, ಹೋಸ್, ಬಾಲ್ ಜಾಯಿಂಟ್, ಸೀಲ್ಸ್, ಸಸ್ಪೆಷನ್ ಘಟಕಗಳಾದ ಪ್ಯಾಡ್, ಗೇರ್ ಪಾರ್ಟ್ಸ್‌ಗಳಂತಹ ಘಟಕಗಳನ್ನು ನಕಲಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

Most Read Articles

Kannada
English summary
Tata Motors has taken it upon itself to fight the menace of counterfeit automobile spare parts and has launched a series of systematic, multi-pronged campaign against those selling and manufacturing fake parts under the Tata Genuine Parts (TGP) brand name
Story first published: Wednesday, April 23, 2014, 12:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X