ಮೂರು ಪಟ್ಟು ರಫ್ತು ಹೆಚ್ಚಳ ಗುರಿಯಿರಿಸಿಕೊಂಡಿರುವ ಟಾಟಾ

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, 2018-19ರ ವೇಳೆಯಾಗುವಾಗ ತನ್ನ ವಾಣಿಜ್ಯ ವಾಹನಗಳ ರಫ್ತು ಪ್ರಮಾಣವನ್ನು ಮೂರು ಪಟ್ಟು ಹೆಚ್ಚಳಗೊಳಿಸುವ ಇರಾದೆಯಲ್ಲಿದೆ.

ರಷ್ಯಾ ಹಾಗೂ ಏಷ್ಯಾದಲ್ಲಿ ಭದ್ರ ತಳಹದಿ ಸ್ಥಾಪಿಸುವುದು ಟಾಟಾ ಗುರಿಯಾಗಿದೆ. ಪ್ರಸ್ತುತ ಆಫ್ರಿಕಾ ಹಾಗೂ ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ತನ್ನ ಸ್ಥಾನ ಹೊಂದಿರುವ ಟಾಟಾ ತನ್ನ ಮಾರಾಟ ಜಾಲವನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಹೊಂದಿದೆ.

Tata prima

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಾಟಾ ವಾಣಿಜ್ಯ ವಾಹನಗಳ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ರವಿ ಪಿಶಾರಡಿ, ಪಸಕ್ತ ಆರ್ಥಿಕ ಸಾಲಿನಲ್ಲಿ 50,000 ಯುನಿಟ್‌ಗಳ ರಫ್ತು ಮಾಡುವ ಯೋಜನೆ ಹೊಂದಿದೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಈ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಳಗೊಳಿಸುವ ಇರಾದೆ ಹೊಂದಿರುವುದಾಗಿ ವಿವರಿಸಿದ್ದಾರೆ.

ಪ್ರೈಮಾ ಶ್ರೇಣಿಯ ಟ್ರಕ್‌ಗಳನ್ನು ಬಿಡುಗಡೆಗೊಳಿಸಿದ್ದ ಟಾಟಾ ರಫ್ತು ಪ್ರಕ್ರಿಯತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿದೆ. ಹಾಗೆಯೇ ಪೂರ್ವ ಯುರೋಪ್, ರಷ್ಯಾ ಮತ್ತು ಏಷ್ಯಾ ರಾಷ್ಟ್ರಗಳಲ್ಲಿ ಹೆಚ್ಚಿನ ಮಾರಾಟ ಸಾಮರ್ಥ್ಯ ಹೊಂದಿರುವುದನ್ನು ಮನಗಂಡಿದೆ.

Most Read Articles

Kannada
English summary
One of India's largest automobile manufacturers, Tata Motors is eyeing increasing its exports three folds by 2018-19, by setting foot in Russia and ASEAN regions.
Story first published: Saturday, November 22, 2014, 11:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X