ಜಾಗತಿಕ ಎಸ್‌ಯುವಿ ನಿರ್ಮಾಣದಲ್ಲಿ ತೊಡಗಿರುವ ಟಾಟಾ

By Nagaraja

ಐಕಾನಿಕ್ ಲ್ಯಾಂಡ್ ರೋವರ್ ಜೊತೆಗೂಡಿರುವ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಜಾಗತಿಕ ಎಸ್‌ಯುವಿ ನಿರ್ಮಾಣದಲ್ಲಿ ತೊಡಗಿದೆ. ಈ ಹಿಂದೆಯೇ ಬ್ರಿಟನ್‌ನ ಐಕಾನಿಕ್ ಬ್ರಾಂಡ್ ಆಗಿರುವ ಜಾಗ್ವಾರ್ ಲ್ಯಾಂಡ್ ರೋವರ್ ಅಧೀನತೆಯನ್ನು ಟಾಟಾ ಪಡೆದುಕೊಂಡಿತ್ತು.

ಲ್ಯಾಂಡ್ ರೋವರ್ ಸಹಭಾಗಿತ್ವದಲ್ಲಿ ಟಾಟಾದಿಂದ ಆಗಮನವಾಗಲಿರುವ ಜಾಗತಿಕ ಎಸ್‌ಯುವಿ 2017ನೇ ಇಸವಿಯಲ್ಲಿ ಅನಾವರಣಗೊಳ್ಳುವ ಸಾಧ್ಯತೆಯಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದ್ದಲ್ಲಿ ಲ್ಯಾಂಡ್ ರೋವರ್ ಎಂಜಿನಿಯರ್ ನೆರವಿನೊಂದಿಗೆ ಇನ್ನೆರಡು ಉತ್ಪನ್ನಗಳನ್ನು ತಯಾರಿಸಲಾಗುವುದು ಎಂದು ಟಾಟಾ ತಿಳಿಸಿದೆ.

 Land Rover

ಒಟ್ಟಿನಲ್ಲಿ ವಾಹನೋದ್ಯಮದಲ್ಲಿ ಹೆಸರು ಗಿಟ್ಟಿಸಿಕೊಂಡಿರುವ ಈ ಎರಡು ಮಹಾನ್ ಸಂಸ್ಥೆಗಳು ಜತೆಗೂಡಿ ಕೆಲಸ ಮಾಡಿದರೆ ಅದರ ಫಲಿತಾಂಶ ಹೇಗಿರಬಹುದು ಎಂಬುದನ್ನು ತಿಳಿದುಕೊಳ್ಳಲು ವಾಹನ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಹೊಸ ಉತ್ಪನ್ನದಲ್ಲಿ ಲ್ಯಾಂಡ್ ರೋವರ್‌ನ ಅಸ್ಥಿತ್ವದಲ್ಲಿರುವ ಫ್ರೀಲ್ಯಾಂಡರ್ ಭಾಗಗಳನ್ನು ಹಂಚಿಕೊಳ್ಳಲಾಗುವುದು. ಅಲ್ಲದೆ ಬ್ರಿಟನ್‌ನ ಈ ಸಂಸ್ಥೆಯು ಟಾಟಾಗೆ ಎಂಜಿನ್ ಕೂಡಾ ನೀಡಲಿದ್ದು, ಹ್ಯಾಂಡ್ಲಿಂಗ್ ಹಾಗೂ ನಿರ್ವಹಣೆ ಸುಧಾರಣೆ ಮಾಡಲು ನೆರವಾಗಲಿದೆ.

Most Read Articles

Kannada
English summary
Land Rover is a British based automobile manufacturer, which is owned by Indian automobile giant Tata Motors. Now both of them have decided to create two new SUVs as global products. Earlier the Indian automobile manufacturer has tried to stay away from the luxury segment.
Story first published: Wednesday, August 27, 2014, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X