10,000 ಯುನಿಟ್ ಬುಕ್ಕಿಂಗ್ ದಾಟಿದ ಟಾಟಾ ಜೆಸ್ಟ್

By Nagaraja

ಬಿಡುಗಡೆಯಾದ ಒಂದು ತಿಂಗಳೊಳಗೆ 10,000 ಯುನಿಟ್‌ಗಿಂತಲೂ ಹೆಚ್ಚು ಬುಕ್ಕಿಂಗ್ ದಾಖಲಿಸಿಕೊಳ್ಳಲು ಟಾಟಾ ಜೆಸ್ಟ್ ಯಶಸ್ವಿಯಾಗಿದೆ. ಎಲ್ಲ ನೂತನ ತಂತ್ರಜ್ಞಾನವನ್ನು ಹೊಂದಿರುವ ಟಾಟಾ ಜೆಸ್ಟ್ ಗ್ರಾಹಕರನ್ನು ಸೆಳೆಯುವಲ್ಲಿ ಯಶ ಕಂಡಿದೆ.

ಮಾರುತಿಯ ಜನಪ್ರಿಯ ಸ್ವಿಫ್ಟ್ ಡಿಜೈರ್ ಮತ್ತು ಹೋಂಡಾ ಅಮೇಜ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿದ್ದ ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರು ನಾಲ್ಕರಿಂದ ಆರು ವಾರಗಳ ಅವಧಿಯಲ್ಲಿ ಗ್ರಾಹಕರ ಮನ ಗೆಲ್ಲುವಲ್ಲಿ ಸಾಧ್ಯವಾಗಿದೆ.

Tata Zest

2014 ಜುಲೈ 19ರಂದು ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದ್ದ ಟಾಟಾ ಜೆಸ್ಟ್ ಆಗಸ್ಟ್ 12ರಂದು ಬಿಡುಗಡೆ ಕಂಡಿತ್ತು. ಅಲ್ಲದೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಟಾಟಾ, ರೆವೊಟ್ರಾನ್ ವೆರಿಯಂಟ್‌ಗಳಿಗೆ ನಾಲ್ಕರಿಂದ ಆರು ತಿಂಗಳು ಅಂತೆಯೇ ಡೀಸೆಲ್ ಆಟೋಮ್ಯಾಟಿಕ್ ವೆರಿಯಂಟ್‌ಗಳಿಗೆ ಮೂರು ತಿಂಗಳ ಕಾಯುವಿಕೆ ಅವಧಿಯಿರುವುದಾಗಿ ತಿಳಿಸಿದೆ.

ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಿರುವ ಟಾಟಾ ಜೆಸ್ಟ್ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದೆ. ಇದರ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳು 90 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಂತೆಯೇ ಅನುಕ್ರಮವಾಗಿ 140ಎನ್‌ಎಂ ಮತ್ತು 190ಎನ್‌ಎಂ ಟಾರ್ಕ್ ಉತ್ಪಾದಿಸುವಲ್ಲಿ ಸಕ್ಷಮವಾಗಿದೆ.

ಇವೆಲ್ಲಕ್ಕೂ ಮಿಗಿಲಾಗಿ ನಿರ್ಮಾಣ ಗುಣಮಟ್ಟ ಮತ್ತು ಸ್ಪರ್ಧಾತ್ಮಕ ದರಗಳಲ್ಲಿ ಬಿಡುಗೆ ಮಾಡಲು ಸಹಕಾರಿಯಾಗಿರುವುದು ಟಾಟಾ ಜೆಸ್ಟ್ ಯಶಸ್ಸಿಗೆ ಕಾರಣವಾಗಿದೆ. ಇದರ ಪ್ರಾರಂಭಿಕ ದರ 4.64 ಲಕ್ಷ ರು. ಅಂತೆಯೇ ಟಾಪ್ ಡೀಸೆಲ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ದರ 6.99 ಲಕ್ಷ ರು.ಗಳಿಷ್ಟಿದೆ.

Most Read Articles

Kannada
English summary
Tata Zest registers over 10,000 bookings
Story first published: Wednesday, September 3, 2014, 10:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X