ಹೊಸ ಕಾರು ನಿರ್ಮಿಸಲಿರುವ ಭಾರತೀಯ ವಿದ್ಯಾರ್ಥಿಗಳು

By Nagaraja

ಇತ್ತೀಚೆಗಷ್ಟೇ ನಡೆದ ಸುಪ್ರ ಸೇ ಇಂಡಿಯಾ ಸ್ಟುಡೆಂಟ್ ಫಾರ್ಮುಲಾ 2014 ಸ್ಪರ್ಧೆಯಲ್ಲಿ ಚೆನ್ನೈ ಮೂಲದ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಚೆನ್ನೈನಲ್ಲಿ ನಡೆದ ಈ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಮದ್ರಾಸ್ ಮೋಟಾರು ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಎನ್‌ಐಟಿಆರ್ ರೋಡ್ ರನ್ನರ್ ತಂಡವು ವಿಶೇಷವಾದ ಕಾರನ್ನು ವಿನ್ಯಾಸಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

Tech Students Build A Car

100ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ವಿನೂತನ ಕಾರು ಕಾನ್ಸೆಪ್ಟ್ ರಚಿಸುವಲ್ಲಿ ರೋಡ್ ರನ್ನರ್ಸ್ ಯಶಸ್ವಿಯಾಗಿತ್ತು.

ಅಮೆರಿಕದಿಂದ ಆಮದು ಮಾಡಲಾಗಿದ್ದ ಯಮಹಾ ಮೋಟಾರುಸೈಕಲ್ ಎಂಜಿನ್‌ನಿಂದ ಕಾರನ್ನು ಅಭಿವೃದ್ಧಿಪಡಿಸಲಾಗಿತ್ತು. ಇದು ಆರ್6, 600ಸಿಸಿ ಇನ್‌ಲೈನ್ ಫೋರ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿತ್ತು. ಇದು 120 ಬಿಎಚ್‌ಪಿ (66 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇದು ಏಳು ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ಅಂತೆಯೇ ಗಂಟೆಗೆ ಗರಿಷ್ಠ 160 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ರಿಯಲ್ ಟೈಮ್ ಡಾಟಾ ಮತ್ತು ಜಿಪಿಎಸ್ ವ್ಯವಸ್ಥೆ ಆಳವಡಿಸಲಾಗಿತ್ತಲ್ಲದೆ ಹಗುರ ಭಾರದ ಫೈಬರ್ ಗ್ಲಾಸ್ ಬಳಕೆ ಮಾಡಲಾಗಿದೆ.

ವರದಿಗಳ ಪ್ರಕಾರ ಈ ಕಾನ್ಸೆಪ್ಟ್ ಕಾರನ್ನು ನನಸಾಗಿಸಲು 7.5 ಲಕ್ಷ ರು.ಗಳಷ್ಟು ವೆಚ್ಚ ತಗುಲಲಿದೆ. ಇದು ಪ್ರಾಯೋಗಿಕವೆನಿಸಿದ್ದರೆ ಮುಂದಿನ ದಿನಗಳಲ್ಲಿ ಈ ಸಿಹಿ ಸುದ್ದಿಯನ್ನು ಆಲಿಸಿದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.

Most Read Articles

Kannada
English summary
During the Supra Sae India Student Formula 2014 that was recently held in Chennai, students from the National Institute of Technology (NIT), Rourkela bagged the runner up award for building a car designed by them.
Story first published: Wednesday, September 10, 2014, 15:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X