ಭಾರತಕ್ಕೆ ಎಂಟ್ರಿ ಕೊಡಲಿರುವ ಟೆಸ್ಲಾ ಎಲೆಕ್ಟ್ರಿಕ್ ಕಾರು

By Nagaraja

ಕಳೆದೊಂದು ದಶಕದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನೆಯಲ್ಲಿ ಹೆಚ್ಚು ಹೆಸರು ಮಾಡಿರುವ ಅಮೆರಿಕ ಮೂಲದ ವಿದ್ಯುತ್ ಚಾಲಿತ ವಾಹನ ನಿರ್ಮಾಣ ಸಂಸ್ಥೆಯಾಗಿರುವ ಟೆಸ್ಲಾ ಮೋಟಾರ್ಸ್, ತನ್ನ ಐಕಾನಿಕ್ ಮಾದರಿಗಳನ್ನು ಭಾರತಕ್ಕೂ ಪರಿಚಯಿಸುವ ಯೋಜನೆ ಹೊಂದಿದೆ.

ನಿಮ್ಮ ಮಾಹಿತಿಗಾಗಿ, 2003ನೇ ಅಸ್ತಿತ್ವಕ್ಕೆ ಬಂದಿರುವ ಅಮೆರಿಕ ಮೂಲದ ಟೆಸ್ಲಾ ಮೋಟಾರ್ಸ್, ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯನ್ನು ಗಂಭೀರವನ್ನು ಪರಿಣಮಿಸಿದೆ. ಟೆಸ್ಲಾ ಮೋಟಾರ್ಸ್ ಸ್ಥಾಪನೆಯಲ್ಲಿ ಎಲನ್ ಮಸ್ಕ್, ಮಾರ್ಟಿನ್ ಎಬರ್‌ಹಾರ್ಡ್, ಮಾರ್ಕ್ ಟಾರ್ಪೆನಿಂಗ್. ಜೆಬಿ ಸ್ಟ್ರಾಬೆಲ್ ಮತ್ತು ಇಯಾನ್ ರೈಟ್ ಮುಖ್ಯ ಪಾತ್ರ ವಹಿಸಿದ್ದರು.


ಸಂಪೂರ್ಣ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ನಿರ್ಮಾಣ ಮಾಡಿದ ಮೊದಲ ಸಂಸ್ಥೆಯೆಂಬ ಹೆಗ್ಗಳಿಕೆಯು ಟೆಸ್ಲಾಗೆ ಸಲ್ಲುತ್ತದೆ. ಹೌದು, ಟೆಸ್ಲಾ ರೋಡ್‌ಸ್ಟರ್ ಸಂಸ್ಥೆಯ ಭಾಗ್ಯ ರೇಖೆಯನ್ನೇ ಬದಲಾಯಿಸಿತ್ತು. ಅಲ್ಲದೆ ಸಂಪೂರ್ಣ ಎಲೆಕ್ಟ್ರಿಕ್ ಲಗ್ಷುರಿ ಸೆಡಾನ್ ಮಾಡೆಲ್ ಎಸ್ ಜೊತೆಗೆ ಎರಡು ಎಲೆಕ್ಟ್ರಿಕ್ ವಾಹನಗಳ (ಮಾಡೆಲ್ ಎಕ್ಸ್ ಮತ್ತು ಮಾಡೆಲ್ 3) ಅಭಿವೃದ್ಧಿಯಲ್ಲಿ ಸಂಸ್ಥೆ ತೊಡಗಿದೆ.

ಅಂದ ಹಾಗೆ ಭಾರತದಲ್ಲಿ ಟೆಸ್ಲಾ ಮಾಡೆಲ್ 3 ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಟೆಸ್ಲಾ ಹೊಂದಿದೆ. ಇದು ಗ್ರಾಹಕರಿಗೆ ಕೈಗೆಟುಕುವ ಐಷಾರಾಮಿ ಸೆಡಾನ್ ಕಾರಾಗಿರಲಿದೆ. ಇದರ ಬೆಲೆ 20ರಿಂದ 25 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಹಾಗಿದ್ದರೂ ಆಮದು ಶುಲ್ಕವನ್ನು ಹೇರುವುದೇ ಟೆಸ್ಲಾ ಭಾರತ ಹಾದಿಗೆ ಕಂಟಕವಾಗಿ ಪರಿಣಮಿಸಿದೆ.

Tesla Motors

ಈಗಿನ ಪರಿಸ್ಥಿತಿಯಲ್ಲಿ ಭಾರತದಲ್ಲಿ ಗರಿಷ್ಠ ಆಮದು ಶುಲ್ಕ ಹೇರಲಾಗುತ್ತದೆ. ಸದ್ಯ ಭಾರತದಲ್ಲಿ ವಾಹನಗಳ ಆಮದಿಗೆ ಶೇಕಡಾ 100ರಷ್ಟು ಆಮದು ಶುಲ್ಕ ವಿಧಿಸಲಾಗುತ್ತದೆ. ಹಾಗಾಗಿ ಟೆಸ್ಲಾ ಭಾರತ ಪ್ರವೇಶ ಕಠಿಣವೆನಿಸಿದೆ.

ಈ ಹಿನ್ನೆಲೆಯಲ್ಲಿ ಏಷ್ಯಾ ಕಾರ್ಯಾಚರಣೆಗಾಗಿ ಕಾರು ಜೋಡಣೆ ಘಟಕ ತೆರೆಯುವ ಉದ್ದೇಶ ಹೊಂದಿದೆ. ಟೆಸ್ಲಾ ಇಂತಹದೊಂದು ಹೆಜ್ಜೆ ಮುಂದಿಡಬೇಕಾದರೆ ಭಾರತ ಸರಕಾರದಿಂದಲೂ ಪೂರಕವಾದ ನಿಲುವು ವ್ಯಕ್ತವಾಗಬೇಕು. ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಗಳಿಗೆ ಸರಕಾರ ಸಬ್ಸಿಡಿ ನೀಡಿದ್ದಲ್ಲಿ ಮಾತ್ರ ಟೆಸ್ಲಾ ಕನಸು ನನಸಾಗಲಿದೆ.

ಸಮಕಾಲೀನ ಪರಿಸ್ಥಿತಿಯಲ್ಲಿ ಏಷ್ಯಾ ರಾಷ್ಟ್ರಗಳ ಪೈಕಿ ಚೀನಾ ಹಾಗೂ ಜಪಾನ್‌ನಲ್ಲಿ ಮಾತ್ರ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಲಭ್ಯವಿದೆ. ಈ ಎರಡು ರಾಷ್ಟ್ರಗಳಲ್ಲಿ ಅನುಕ್ರಮವಾಗಿ 5,000 ಹಾಗೂ 2,000 ಯುನಿಟ್‌ಗಳ ಮಾರಾಟ ಗಿಟ್ಟಿಸಿಕೊಂಡಿದೆ.

Most Read Articles

Kannada
English summary
India is a fast growing automobile market, premium manufacturers are launching several products in the market. Tesla Motors is exploring the option of introducing their product in India.
Story first published: Thursday, November 20, 2014, 14:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X