ಟೊಯೊಟಾದಿಂದ ಎಟಿಯೋಸ್ ಮೋಟಾರು ರೇಸಿಂಗ್

By Nagaraja

ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರು ಸಂಸ್ಥೆಯು ಎರಡನೇ ಆವೃತ್ತಿಯ ಎಟಿಯೋಸ್ ಮೋಟಾರು ರೇಸಿಂಗ್ (ಇಎಂಆರ್) ಆಯೋಜನೆ ಮಾಡಲಿದೆ.

ಕಳೆದ ವರ್ಷದ ಯಶಸ್ವಿ ಆಯೋಜನೆಯ ಬಳಿಕ ಪುಳಕಿತಗೊಂಡಿರುವ ಸಂಸ್ಥೆಯು ಜುಲೈ 19 ಹಾಗೂ 20ರಂದು ಎರಡನೇ ಆವೃತ್ತಿಯ ಎಟಿಯೋಸ್ ಮೋಟಾರು ರೇಸಿಂಗ್ ಟ್ರೋಫಿ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ.

Toyota

ಈ ಬಾರಿಯ ಸ್ಪರ್ಧೆಯು ಕೋಯಂಬತ್ತೂರಿನ ಕರಿ ಮೋಟಾರು ಸ್ಪೀಡ್‌ವೇದಲ್ಲಿ ಸಾಗಲಿದೆ. ಇದು ನಾಲ್ಕನೇ ಹಾಗೂ ಐದನೇ ಸುತ್ತಿನ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಶಿಪ್ ನಡೆಯುವ ಅದೇ ಸಂದರ್ಭದಲ್ಲಿ ಆಯೋಜನೆಯಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರು ಸಂಸ್ಥೆಯ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ನಿರ್ದೇಶಕ ಹಾಗೂ ಹಿರಿಯ ಉಪಾಧ್ಯಕ್ಷರಾಗಿರುವ ಎನ್. ರಾಜಾ, '2012ರಲ್ಲಿ ಟೊಯೊಟಾ ಎಟಿಯೋಸ್ ಮೋಟಾರು ರೇಸಿಂಗ್ ಆರಂಭವಾಗಿತ್ತು. ಈ ಮೂಲಕ ತಲಮಟ್ಟದಿಂದಲೇ ಮೋಟಾರುಸ್ಪೋರ್ಟ್ಸ್ ಕ್ರೀಡೆಯನ್ನು ಪ್ರೋತ್ಸಾಹಿಸುವ ಯೋಜನೆ ಹೊಂದಿದ್ದೇವೆ' ಎಂದಿದ್ದಾರೆ.

ಇದು ಯುವ ಪ್ರತಿಭಾವಂತ ರೇಸರುಗಳಿಗೆ ತಮ್ಮ ರೇಸಿಂಗ್ ಕೌಶಲ್ಯಗಳನ್ನು ವೃದ್ಧಿಸಲು ಉತ್ತಮ ವೇದಿಕೆ ಒದಗಿಸಲಿದೆ. ಅಲ್ಲದೆ ಭವಿಷ್ಯದಲ್ಲಿ ಇನ್ನು ಹೆಚ್ಚಿನ ಸ್ಪರ್ಧಾತ್ಮಕ ಕೂಟಗಳಲ್ಲಿ ಭಾಗವಹಿಸಲು ತರಬೇತಿಯನ್ನು ನೀಡಲಿದೆ.

Most Read Articles

Kannada
English summary
Toyota Kirloskar Motor has announced that it will be hosting the second edition of its Etios Motor Racing(EMR) Trophy. They are going ahead with the competition, owing to success it witnessed last year.
Story first published: Friday, July 18, 2014, 17:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X