ಮುಂದಿನ ವರ್ಷದಲ್ಲಿ ಹೊಸ ಇನ್ನೋವಾ ಅನಾವರಣ

By Nagaraja

ಜಗತ್ತಿನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟೊಯೊಟಾ ಸಂಸ್ಥೆಯು ಮುಂದಿನ ವರ್ಷ ಎಲ್ಲ ಹೊಸತನದಿಂದ ಕೂಡಿರುವ ಇನ್ನೋವಾ ಬಹು ಬಳಕೆಯ (ಎಂಪಿವಿ) ವಾಹನವನ್ನು ಅನಾವರಣಗೊಳಿಸಲಿದೆ.

ಪ್ರಸಕ್ತ ಸಾಲಿನಲ್ಲೇ ಎಟಿಯೋಸ್ ಕ್ರಾಸ್ ಬಿಡುಗಡೆ ಮೂಲಕ ಕ್ರಾಸೋವರ್ ವಿಭಾಗಕ್ಕೆ ಕಾಲಿಟ್ಟಿರುವ ಟೊಯೊಟಾ, ಇತ್ತೀಚೆಗಷ್ಟೇ 2014 ಕರೊಲ್ಲಾ ಆಲ್ಟೀಸ್ ಬಿಡುಗಡೆಗೊಳಿಸಿತ್ತು. ಇದಾದ ಬೆನ್ನಲ್ಲೇ ಮುಂದಿನ ವರ್ಷ ಇನ್ನೋವಾ ಮಾದರಿಯ ಅನಾವರಣಕ್ಕೆ ಸಜ್ಜಾಗಿ ನಿಂತಿದೆ.

Toyota

ಪರಿಷ್ಕೃತ ಇನ್ನೋವಾ ಜೊತೆ 2015 ಕ್ಯಾಮ್ರಿ ಸಹ ಆಗಮನವಾಗಲಿದೆ. ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಇನ್ನೋವಾ, 2016ರಲ್ಲಿ ಬಿಡುಗಡೆ ಕಾಣಲಿದೆ. ಇನ್ನೋವಾ ಬಿಡಿಭಾಗಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಮೂಲಕ ಸ್ಮರ್ಧಾತ್ಮಕ ಬೆಲೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗಮನ ಕೇಂದ್ರಿಕರಿಸಿದೆ.

ಅದೇ ಹೊತ್ತಿಗೆ ಟೊಯೊಟಾ ಇನ್ನೋವಾ ಆಟೋಮ್ಯಾಟಿಕ್ ವೆರಿಯಂಟ್‌ನಲ್ಲೂ ಆಗಮನವಾಗಲಿದೆ. ಇದು ಪ್ರಮುಖವಾಗಿಯೂ ಮಾರುತಿ ಸುಜುಕಿ ಎರ್ಟಿಗಾ, ಹೋಂಡಾ ಮೊಬಿಲಿಯೊ, ನಿಸ್ಸಾನ್ ಇವಾಲಿಯಾ ಮತ್ತು ಷೆವರ್ಲೆ ಎಂಜಾಯ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಇದು 9.50ರಿಂದ 14.50 ಲಕ್ಷ ರು.ಗಳ ನಡುವೆ ಆಗಮನವಾಗುವ ಸಾಧ್ಯತೆಯಿದೆ.

Most Read Articles

Kannada
English summary
Toyota has recently launched its 2014 Corolla Altis in India. The Japanese automobile manufacturer has also introduced its Etios Cross, which is doing well in India. They have several products in India in different segments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X