ಫೋರ್ಡ್ ಕಾರಿಗೂ ಬಂತು ನೋಡಿ ಪಾದಚಾರಿ ಗ್ರಹಣ ಶಕ್ತಿ

By Nagaraja

ಟೆಸ್ಲಾ ಹಾಗೂ ವೋಲ್ವೋ ಸಂಸ್ಥೆಗಳ ಬೆನ್ನಲ್ಲೇ ಅಮೆರಿಕ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್, ಪಾದಚಾರಿ ಗ್ರಹಣ ಶಕ್ತಿಯನ್ನು (Ford pre-collision assist system)ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನದ ಮೂಲಕ ಪಾದಚಾರಿಗಳು ಆಕಸ್ಮತ್ ರಸ್ತೆ ಪ್ರವೇಶಿಸಿದರೆ ಪತ್ತೆ ಹಚ್ಚಲಿದ್ದು, ತಕ್ಷಣ ಸ್ವಯಂಚಾಲಿತವಾಗಿ ಬ್ರೇಕ್ ಅದುಮಲಿದೆ.

ವಿಂಡ್‌ಶೀಲ್ಡ್‌ನಲ್ಲಿ ಲಗತ್ತಿಸಲಾಗಿರುವ ಕ್ಯಾಮೆರಾ ಮತ್ತು ಬಂಪರ್‌ ಸಮೀಪದಲ್ಲಿರುವ ರಾಡಾರ್ ಮೂಲಕ ಈ ತಂತ್ರಜ್ಞಾನವು ಕೆಲಸ ಮಾಡಲಿದೆ. ಈ ಮೂಲಕ ಸಂಭವನೀಯ ಅಪಘಾತವನ್ನು ತಪ್ಪಿಸಬಹುದಾಗಿದೆ.

ford pre collision assist system

ಪ್ರಯೋಜನ ಏನು?
ಸಾಮಾನ್ಯವಾಗಿ ಚಾಲಕರು ಪರಿಸ್ಥಿತಿ ಹೊಂದಿಕೊಳ್ಳುವ ಮುನ್ನವೇ ಅಪಘಾತಗಳು ಸಂಭವಿಸುತ್ತದೆ. ಆದರೆ ಫೋರ್ಡ್‌ನ ಹೊಸ ತಂತ್ರಜ್ಞಾನದ ಮೂಲಕ ಕಾರು ಸ್ವಯಂಚಾಲಿತವಾಗಿ ಕೆಲಸ ಮಾಡಲಿದ್ದು, ತಕ್ಷಣ ಬ್ರೇಕ್ ಅದುಮಲಿದೆ. ಇದರಿಂದ ಸಂಭವನೀಯ ಅಪಘಾತ ತಪ್ಪಿಸಬಹುದಾಗಿದೆ.

ಇನ್ನು ನಗರ ಚಾಲನೆ ಹೆಚ್ಚು ಸುರಕ್ಷಿತ...
ಇದರ ಪ್ರಮುಖ ಪ್ರಯೋಜನ ಏನೆಂದರೆ ಕಿಕ್ಕಿರಿದು ತುಂಬಿರುವ ನಗರ ಪ್ರದೇಶದ ಚಾಲನೆ ಇನ್ನಷ್ಟು ಸುಲಭವಾಗಲಿದ್ದು, ಹೆಚ್ಚು ಸುರಕ್ಷಿತವೆನಿಸಲಿದೆ.

ಜೀವ ರಕ್ಷಕ...
ಫೋರ್ಡ್‌ನ ಹೊಸ ತಂತ್ರಜ್ಞಾನ ಪಾದಚಾರಿಗಳ ಪಾಲಿಗೆ ಜೀವ ರಕ್ಷಕವಾಗಿ ಪರಿಣಮಿಸಲಿದೆ.

ವಿಮರ್ಶಕರ ಅಭಿಮತವೇನು?
ಹಾಗಿದ್ದರೂ ವಿಮರ್ಶಕರ ಪ್ರಕಾರ, ಹೊಸ ತಂತ್ರಜ್ಞಾನದ ಆಳವಡಿಕೆಯಿಂದಾಗಿ ಚಾಲಕರು ಇನ್ನಷ್ಟು ಬೇಜವಾಬ್ದಾರಿಯಿಂದ ವಾಹನ ಚಾಲನೆ ಮಾಡಲಿದ್ದು, ಕೆಟ್ಟ ಚಾಲನೆಯನ್ನು ಪ್ರೋತ್ಸಾಹಿಸಲಿದೆ ಎಂದು ದೂರಿದ್ದಾರೆ.

ಯಾವಾಗ ಎಂಟ್ರಿ?
ಫೋರ್ಡ್ ಸಂಸ್ಥೆಯ ಪ್ರಕಾರ ಈ ಬಹುನಿರೀಕ್ಷಿತ ತಂತ್ರಜ್ಞಾನ 2015ನೇ ಇಸವಿಯಲ್ಲಿ ಪಾದಾರ್ಪಣೆಗೈಯಲಿದೆ. ಇದು ಫೋರ್ಡ್ ಮೊಂಡೆಯೊ ಮಾದರಿಯಲ್ಲಿ ಐಚ್ಛಿಕವಾಗಿ ಲಭ್ಯವಾಗಲಿದೆ.

Most Read Articles

Kannada
English summary
Ford, the American based car manufacturer has developed a new technology, where their cars will brake automatically if pedestrians are detected.
Story first published: Friday, October 24, 2014, 16:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X