2017ರಲ್ಲಿ ದೇಶದ ಕಾರುಗಳಿಗೂ ಕ್ರಾಶ್ ಟೆಸ್ಟ್ ಕಡ್ಡಾಯ

By Nagaraja

ಮುಂದಿನ ವರ್ಷದಿಂದಲೇ ವಾಹನ ಅಪಘಾತ ಪರೀಕ್ಷೆ ಅಥವಾ ಕ್ರಾಶ್ ಟೆಸ್ಟ್ ಕಡ್ಡಾಯಗೊಳಿಸುವುದರ ಬಗ್ಗೆ ಪ್ರಸ್ತಾವನೆಗಳು ಬಂದಿದ್ದವು. ಆದರೆ ಈ ಬಗೆಗಿನ ಊಹಾಪೋಹಗಳಿಗೆ ತೆರೆ ಎಳೆದಿರುವ ಕೇಂದ್ರ ಬೃಹತ್ ಕೈಗಾರಿಕೋದ್ಯಮ ರಾಜ್ಯ ಸಚಿವ ಜಿಎಂ ಸಿದ್ದೇಶ್ವರ, 2017ನೇ ಇಸವಿಯ ಅಕ್ಟೋಬರ್ 1ರಿಂದ ವಾಹನಗಳಿಗೆ ಕ್ರಾಶ್ ಟೆಸ್ಟ್ ಕಡ್ಡಾಯಗೊಳಿಸಲಾಗುವುದು ಎಂದಿದ್ದಾರೆ.

ಲೋಕಾಸಭೆಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಕ್ರಾಶ್ ಟೆಸ್ಟ್‌‍ಗೆ ಬೇಕಾಗಿರುವ ಮೂಲ ಸೌಕರ್ಯವು 2015 ಡಿಸೆಂಬರ್ ವೇಳೆಯಾಗುವಾಗ ತಯಾರಾಗಲಿದೆ ಎಂದು ತಿಳಿಸಿದ್ದಾರೆ.

crash test

ಹಾಗೆಯೇ ಈಗಿರುವ ವಾಹನಗಳಿಗೆ 2019 ಅಕ್ಟೋಬರ್ 1ರ ವೇಳೆಯಾಗುವಾಗ ಕ್ರಾಶ್ ಟೆಸ್ಟ್ ದರ್ಜೆಯನ್ನು (AIS 098 ಮತ್ತು AIS 099) ಕಡ್ಡಾಯಗೊಳಿಸಲಾಗುವುದು.

ಇದೇ ಸಂದರ್ಭದಲ್ಲಿ ಗ್ಲೋಬಲ್ ಎನ್‌ಸಿಎಪಿ (ಗ್ಲೋಬಲ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ) ಮಾದರಿಯಲ್ಲೇ ಕೆಲವೊಂದು ಕ್ರಾಶ್ ಟೆಸ್ಟ್ ಸ್ಟಾರ್ ರೇಟಿಂಗ್ ಅನುಸರಿಸುವ ಇರಾದೆಯನ್ನು ಸಚಿವಾಲಯ ಹೊಂದಿದೆ.

Most Read Articles

Kannada
English summary
Vehicle crash test mandatory from the 1st of October 2017, informed GM Siddeshwara, the Ministry of State in the Ministry of Heavy Industries.
Story first published: Friday, December 26, 2014, 12:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X