ಭಾರತಕ್ಕೆ ಸಿಯಾಟ್ ಬಜೆಟ್ ಕಾರು ಪರಿಚಯಿಸಲಿರುವ ಫೋಕ್ಸ್‌ವ್ಯಾಗನ್

By Nagaraja

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಬಜೆಟ್ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು, ತನ್ನ ಅಂಗಸಂಸ್ಥೆಯಾಗಿರುವ ಸಿಯಾಟ್ (Sociedad Espanola de Automoviles de Turismo) ಕಾರು ಬ್ರಾಂಡ್ ಅನ್ನು ದೇಶಕ್ಕೆ ಪರಿಚಯಿಸುವ ಯೋಜನೆ ಹೊಂದಿದೆ.

ಸದ್ಯ ಎಂಟ್ರಿ ಲೆವೆಲ್ ಕಾರು ವಿಭಾಗದಲ್ಲಿ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಸಂಸ್ಥೆಗಳು ಅಧಿಪತ್ಯ ಸ್ಥಾಪಿಸಿದೆ. ಈ ನಡುವೆ ಮುಂದಿನ ನಾಲ್ಕು ವರ್ಷದೊಳಗೆ ಅತ್ಯುತ್ತಮ ಎಂಟ್ರಿ ಲೆವೆಲ್ ಕಾರುಗಳನ್ನು ಪರಿಚಯಿಸಿರುವುದು ವಿಶ್ವದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್ ಗುರಿಯಾಗಿದೆ.

SEAT brand

ಇದರೊಂದಿಗೆ ಸಿಯಾಟ್ ಭಾರತಕ್ಕೆ ಎಂಟ್ರಿ ಕೊಡುತ್ತಿರುವ ಫೋಕ್ಸ್‌ವ್ಯಾಗನ್ ಎಜಿ ಅಧೀನತೆಯಲ್ಲಿರುವ ಎಂಟನೇ ಬ್ರಾಂಡ್ ಎನಿಸಿಕೊಳ್ಳುತ್ತಿದೆ. ಈಗಾಗಲೇ ಫೋಕ್ಸ್‌ವ್ಯಾಗನ್, ಸ್ಕೋಡಾ, ಆಡಿ, ಪೋರ್ಷೆ, ಬೆಂಟ್ಲಿ, ಬುಗಾಟಿ ಮತ್ತು ಲಂಬೋರ್ಗಿನಿ ಬ್ರಾಂಡ್‌ಗಳು ದೇಶದಲ್ಲಿ ಮಾರಾಟದಲ್ಲಿದೆ.

ಮೂರರಿಂದ ಐದು ವರ್ಷಗಳ ವರೆಗಿನ ದರ ರೇಂಜ್‌ನಲ್ಲಿ ಹೊಸ ಕಾರುಗಳನ್ನು ಬಿಡುಗಡೆ ಮಾಡುವುದು ಸಂಸ್ಥೆಯ ಇರಾದೆಯಾಗಿದೆ. ಸಿಯಾಟ್ ಸದ್ಯ ಐಬಿಝಾ, ಲಿಯಾನ್, ಎಂಐಐ ಅಲ್ಟಿಯಾ ಹ್ಯಾಚ್‌ಬ್ಯಾಕ್ ಕಾರುಗಳನ್ನು ಹೊಂದಿದೆ. ಇವೆಲ್ಲವೂ ಫೋಕ್ಸ್‌ವ್ಯಾಗನ್ ತಲಹದಿಯಲ್ಲಿಯೇ ನಿರ್ಮಾಣವಾಗಿದೆ.

ಅದೇ ಹೊತ್ತಿಗೆ ಸ್ಪರ್ಧಾತ್ಮಕ ದರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತದಲ್ಲಿ ನಿರ್ಮಾಣ ಘಟಕ ಸ್ಥಾಪಿಸುವ ಬೃಹತ್ ಯೋಜನೆಯನ್ನು ಸಂಸ್ಥೆ ಹೊಂದಿದೆ.

Most Read Articles

Kannada
English summary
Volkswagen plans to bring Spanish car brand SEAT to India.
Story first published: Tuesday, September 30, 2014, 12:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X