1.1 ಮಿಲಿಯನ್ ಫೋಕ್ಸ್‌ವ್ಯಾಗನ್ ಕಾರುಗಳಿಗೆ ಹಿಂದಕ್ಕೆ ಕರೆ

By Nagaraja

ವಿಶ್ವದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್ ಎಜಿ ಸಂಸ್ಥೆಯು ಜಾಗತಿಕವಾಗಿ 1.1 ಮಿಲಿಯನ್ ಕಾರುಗಳನ್ನು ವಾಪಾಸ್ ಕರೆಯಿಸಿಕೊಳ್ಳಲು ನಿರ್ಧರಿಸಿದೆ.

ಹಿಂದುಗಡೆ ಸಸ್ಪೆಷನ್‌ನಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ವಾಪಾಸ್ ಕರೆಯಿಸಿಕೊಳ್ಳಲಾಗುತ್ತಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

trailing arm suspension

ಯಾವೆಲ್ಲ ದೇಶದಲ್ಲಿ ಎಷ್ಟೆಷ್ಟು ? (ಲಕ್ಷ ಯುನಿಟ್‌ಗಳಲ್ಲಿ)
ಅಮೆರಿಕದಲ್ಲಿ 4,42,265
ಕೆನಡಾ 1,26,000 (2011-2013 ಫೋಕ್ಸ್‌ವ್ಯಾಗನ್ ಜೆಟ್ಟಾ ಹಾಗೂ 2013-2013 ಫೋಕ್ಸ್‌ವ್ಯಾಗನ್ ಬೀಟ್ಲ್ ಸೇರಿದಂತೆ)
ಚೀನಾ 5,81,090 (ಸ್ಥಳೀಯವಾಗಿ ನಿರ್ಮಿಸಲಾದ ಜೆಟ್ಟಾ ವೆರಿಯಂಟ್ ಸ್ಯಾಗಿಟರ್ ಜೊತೆಗೆ ಬೀಟ್ಲ್).

ನೀವ್ಯಾಕೆ ಗಂಭೀರವಾಗಿ ಪರಿಗಣಿಸಬೇಕು?
ಮೇಲೆ ತಿಳಿಸಿದ ತೊಂದರೆಗೆ ಸಿಲುಕಿದ ಕಾರುಗಳು ಬದಿ ಅಥವಾ ಹಿಂದುಗಡೆ ಗುದ್ದಿದ್ದಲ್ಲಿ ಟ್ರೈಲಿಂಗ್ ಆರ್ಮ್ ಸಸ್ಪೆಷನ್ ಬಿರುಕು ಬಿಡುವ ಸಂಭವವಿದ್ದು, ಗಂಭೀರ ಅವಘಡಗಳಿಗೆ ಎಡೆ ಮಾಡಿಕೊಡಲಿದೆ.

ಫೋಕ್ಸ್‌ವ್ಯಾಗನ್ ಪರಿಹಾರ ಏನು ?
ಸಂಸ್ಥೆಯ ಅಂಗೀಕೃತ ಡೀಲರುಗಳ ಮೂಲಕ ತೊಂದರೆಯನ್ನು ಪತ್ತೆ ಹಚ್ಚಿ ಬೇಗನೇ ಪರಿಹಾರ ಕಂಡುಕೊಳ್ಳಲಾಗುವುದು. ಬಿರುಕು ಬಿಟ್ಟ ಸ್ಥಳವನ್ನು ಲೋಹದಿಂದ ಬದಲಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.

ಇದೇನು ಟ್ರೈಲಿಂಗ್ ಆರ್ಮ್ ಸಸ್ಪೆಷನ್ ?
ಸಾಮಾನ್ಯವಾಗಿ ಇದನ್ನು ಮೋಟಾರು ವಾಹನದ ರಿಯರ್ ಆಕ್ಸಲ್‌ನಲ್ಲಿ ಬಳಕೆ ಮಾಡಲಾಗುತ್ತದೆ. ಇದು ಹಿಂದುಗಡೆ ನಯವಾಗಿ ಮೇಲಕ್ಕೆ ಕೆಳಕ್ಕೆ ಸ್ಪ್ರಿಂಗ್‌ನಂತೆ ಕಾರ್ಯಾಚರಿಸಲು ನೆರವಾಗುತ್ತದೆ.

Most Read Articles

Kannada
English summary
Volkswagen Recalls 1.1 Million Cars Globally; Is Your VW Affected?
Story first published: Thursday, October 23, 2014, 14:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X