ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ವೋಲ್ವೋ ಬಜೆಟ್ ಬಸ್

By Nagaraja

ಕಳೆದ ಕೆಲವು ತಿಂಗಳುಗಳಲ್ಲಿ ಘಟಿಸಿರುವ ಬಸ್ ದುರಂತ ಪ್ರಕರಣಗಳು ವೋಲ್ವೋ ವಾಹನ ತಯಾರಕ ಸಂಸ್ಥೆಯ ಪ್ರತಿಷ್ಠಿಗೆ ಮಸಿ ಬಳಿದಂತಾಗಿತ್ತು. ಈ ಭಯಾನಕ ದೃಶ್ಯಗಳು ಮಾಸುವ ಮುನ್ನವೇ, ಮಗದೊಂದು ಆಸಕ್ತಿದಾಯಕ ವರದಿ ಹೊರಬಂದಿದ್ದು, ಸ್ವೀಡನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ಭಾರತಕ್ಕೆ ನೂತನ ಬಸ್ ಪರಿಚಯಿಸಲಿದೆ.

ತನ್ನ ಅಂಗಸಂಸ್ಥೆ ಜಪಾನ್‌ ಮೂಲದ ಯುಡಿ (ಅಲ್ಟಿಮೇಟ್ ಡಿಪೆಂಡೆಬಿಲಿಟಿ) ಜತೆ ಕೈಜೋಡಿಸಲಿರುವ ಐಷಾರಾಮಿ ಬಸ್ ತಯಾರಕ ಸಂಸ್ಥೆಯಾಗಿರುವ ಲೋಲ್ವೋ, ದೇಶಕ್ಕೆ ಮೌಲ್ಯ ಆಧಾರಿತ ಬಸ್ಸುಗಳನ್ನು ಪರಿಚಯಿಸಲಿದೆ.

Volvo

ಇಲ್ಲಿ ಗಮನಾರ್ಹ ಅಂಶವೆಂದರೆ ವೋಲ್ವೋ ನೂತನ ಬಸ್ ಉತ್ಪಾದನಾ ಘಟಕವು ಬೆಂಗಳೂರು ಹೊರವಲಯ ಕೋಲಾರದಲ್ಲಿ ಸ್ಥಿತಗೊಂಡಿರಲಿದೆ. ಇದಕ್ಕಾಗಿ ಸ್ಥಳೀಯ ಸಂಸ್ಥೆ ಎಸ್‌ಎಂ ಕನ್ನಪ್ಪ ಆಟೋಮೊಬೈಲ್ಸ್ ಜತೆ ಪಾಲುದಾರಿಕೆ ಹೊಂದಿದ್ದು, ಯುಡಿ ಬ್ರಾಂಡ್ ಬಸ್ಸುಗಳನ್ನು ಉತ್ಪಾದಿಸಲಿದೆ.

ವರದಿಗಳ ಪ್ರಕಾರ ವೋಲ್ವೋ ಯುಡಿ ಬಜೆಟ್ ಬಸ್ಸುಗಳ ನಿರ್ಮಾಣ ಸದ್ಯದಲ್ಲೇ ಆರಂಭವಾಗಲಿದ್ದು, ವರ್ಷಾಂತ್ಯದಲ್ಲಿ ವಿತರಣೆ ಆರಂಭಿಸುವ ಯೋಜನೆ ಹೊಂದಿದೆ.

ಈ ಬಜೆಟ್ ಬಸ್ಸುಗಳ ಮಾರಾಟ ಹಾಗೂ ಸರ್ವೀಸ್ ಜವಾಬ್ದಾರಿಯನ್ನು ವೋಲ್ವೋ ಹೊಂದಿರಲಿದೆ. ಇದು ಐಷಾರಾಮಿ ಸೆಗ್ಮೆಂಟ್ ಕೆಲಗಡೆ ಗುರುತಿಸಿಕೊಳ್ಳಲಿದ್ದು, 45 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇಲ್ಲಿ ತಯಾರಾಗಲಿರುವ ಬಜೆಟ್ ಬಸ್ಸುಗಳನ್ನು ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೂ ರಫ್ತು ಮಾಡುವ ಯೋಜನೆಯನ್ನು ವೋಲ್ವೋ ಹೊಂದಿದೆ.

Most Read Articles

Kannada
English summary
Volvo, the leading high-end luxury bus manufacturer in India, is ready to enter the value segment with its sub-brand UD. UD (Ultimate Dependability) Trucks is a Japanese commercial vehicle manufacturer that's owned by the Volvo Group.
Story first published: Thursday, March 20, 2014, 14:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X