ಸ್ಥಳೀಯವಾಗಿ ವಾಹನ ಜೋಡಣೆ ಮಾಡಲಿರುವ ವೋಲ್ವೋ

By Nagaraja

ಬೆಳೆಯುತ್ತಿರುವ ಭಾರತ ಮಾರುಕಟ್ಟೆಯ ಸಾಮರ್ಥ್ಯವನ್ನು ಅರಿತಿರುವ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ವೋಲ್ವೋ ಇನ್ನು ಮುಂದೆ ದೇಶದಲ್ಲೇ ಸ್ಥಳೀಯವಾಗಿ ವಾಹನಗಳ ಜೋಡಣೆ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಗಳಾದ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಹಾಗೂ ಆಡಿ ಸಂಸ್ಥೆಗಳು ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುತ್ತಿದೆ. ಇದರಂತೆ ಇಂತಹ ಪ್ರಖ್ಯಾತ ಸಂಸ್ಥೆಗಳ ವಿರುದ್ಧ ಪ್ರತಿಸ್ಪರ್ಧೆ ಒಡ್ಡಲು ಸ್ಥಳೀಯವಾಗಿ ವಾಹನಗಳ ನಿರ್ಮಾಣದ ಮಹತ್ವ ಅರಿತುಕೊಂಡಿರುವ ವೋಲ್ವೋ ಈ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಲಿದೆ.

Volvo

ವಿದೇಶದಿಂದ ವಾಹನಗಳನ್ನು ನೇರವಾಗಿ ಆಮದು ಮಾಡುವಾಗ ವಿಧಿಸಲಾಗುವ ದೊಡ್ಡ ಪ್ರಮಾಣದ ತೆರಿಗೆ ಹೊರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಇಂತಹದೊಂದು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ದೇಶದಲ್ಲಿ ಸ್ಥಳೀಯ ವಾಹನ ಘಟಕ ತೆರೆಯುವ ಮೂಲಕ ಗ್ರಾಹಕರಿಗೆ ಹೆಚ್ಚು ಸ್ಮರ್ಧಾತ್ಮಕ ದರಗಳಲ್ಲಿ ತಮ್ಮ ಉತ್ಪನ್ನಗಳನ್ನು ಪರಿಚಯಿಸಲು ವೋಲ್ವೋಗೆ ಸಾಧ್ಯವಾಗಲಿದೆ.

ಕಂಪ್ಲೀಟ್ ಬಿಲ್ಟ್ ಯುನಿಟ್ ಸಿದ್ಧಾಂತ ಮುಖಾಂತರ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಈ ಸ್ವೀಡನ್ ಸಂಸ್ಥೆಯ ಮೇಲೆ ಹೆಚ್ಚಿನ ತೆರಿಗೆ ಹೊರೆ ಬೀಳುತ್ತಿದೆ. ಹಾಗಾಗಿ ಕಂಪ್ಲೀಟ್ ನೌಕ್ಡ್ ಡೌನ್ ಸಿದ್ಧಾಂತ ಅನುಸರಿಸುವ ಮೂಲಕ ಬೆಲೆ ಕಡಿಮೆಯಾಗುವುದಲ್ಲದೆ ಗ್ರಾಹಕರ ಕೈಕೆಟುಗಲಿದೆ.

ಭಾರತದಲ್ಲಿ ಎಕ್ಸ್‌ಸಿ60, ಎಕ್ಸ್‌ಸಿ90, ಎಸ್60, ಎಸ್80 ಮತ್ತು ವಿ40 ಕ್ರಾಸ್ ಮಾದರಿಗಳನ್ನು ವೋಲ್ವೋ ಮಾರಾಟ ಮಾಡುತ್ತಿವೆ. ಈ ಎಲ್ಲ ವಾಹನಗಳು ಸಿಬಿಯು ಸಿದ್ಧಾಂತ ಮುಖಾಂತರವೇ ಸೇಲ್ ಆಗುತ್ತಿದೆ.

Most Read Articles

Kannada
English summary
Volvo India now plans to introduce a new local facility to make their vehicles more affordable.
Story first published: Thursday, June 12, 2014, 12:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X