ವೋಲ್ವೋದಿಂದ ಹೊಸ ಶ್ರೇಣಿಯ ಟ್ರಕ್‌ಗಳು ಬಿಡುಗಡೆ

By Nagaraja

ಪ್ರಯಾಣಿಕ ಸೇರಿದಂತೆ ವಾಣಿಜ್ಯ ವಿಭಾಗದಲ್ಲೂ ತನ್ನದೇ ಆದ ಮಾರುಕಟ್ಟೆ ಸಾನಿಧ್ಯ ಹೊಂದಿರುವ ವೋಲ್ವೋ ಸಂಸ್ಥೆಯು ಮೂರು ನೂತನ ಟ್ರಕ್‌ಗಳನ್ನು ದೇಶಕ್ಕೆ ಪರಿಚಯಿಸಿದೆ.

ಸಂಸ್ಥೆಯ ಫ್ಯಾಗ್‌ಶಿಪ್ ಮಾದರಿಯಾಗಿರುವ ಸಂಪೂರ್ಣ ಹೊಸತನದ ವೋಲ್ವೋ ಎಫ್‌ಎಚ್, ಎಫ್‌ಎಂ ಮತ್ತು ಎಫ್‌ಎಂಎಕ್ಸ್ ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಇದು ಗಣಿಗಾರಿಕೆಯನ್ನು ಇನ್ನಷ್ಟು ಸುಲಭಗೊಳಿಸಲಿದೆ.

ಈ ಎಲ್ಲ ಟ್ರಕ್‌ಗಳ ಒಟ್ಟಾರೆ ವಿನ್ಯಾಸವು ಹಿಂದಿನ ಮಾದರಿಗಿಂತಲೂ ಅತ್ಯುತ್ತಮವಾಗಿದ್ದು, ಹೆಚ್ಚುವರಿ ಭಾರವನ್ನು ಹೊತ್ತೊಯ್ಯಲು ಸಹಕಾರಿಯಾಗಲಿದೆ. ನಿಮ್ಮ ಮಾಹಿತಿಗಾಗಿ ವೋಲ್ವೋ ಎಫ್‌ಎಚ್ ಮಾದರಿಯು ಯುರೋಪ್‌ನಲ್ಲಿ ಈಗಾಗಲೇ 'ಅಂತರಾಷ್ಟ್ರೀಯ ವರ್ಷದ ಟ್ರಕ್' ಎಂಬ ಪ್ರಶಸ್ತಿಗೂ ಅರ್ಹವಾಗಿದೆ.

ವೋಲ್ವೋದಿಂದ ಹೊಸ ಶ್ರೇಣಿಯ ಟ್ರಕ್‌ಗಳು ಬಿಡುಗಡೆ

ಇದೇ ಸಂದರ್ಭದಲ್ಲಿ ಪರಿಷ್ಕೃತ ವೋಲ್ವೋ ಡೈನಾ‌ಫ್ಲೀಟ್ ವೋಲ್ವೋ ಟ್ರಾನ್ಸ್‌ಪೋರ್ಟ್ ಮಾಹಿತಿ ಮನರಂಜನಾ ವ್ಯವಸ್ಥೆಯನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ರಿಯಲ್ ಟೈಮ್, ವಾಹನ ಇರುವ ಜಾಗ, ವಾಹನ ಎಕಾನಮಿ, ಚಾಲಕ ಸಮಯ, ಸರ್ವಿಸ್ ಇಂಟರ್ವಲ್ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ. (ಮೊದಲ ಬಾರಿಗೆ 1994ರಲ್ಲಿ ಪರಿಚಯವಾಗಿತ್ತು.)

ವೋಲ್ವೋದಿಂದ ಹೊಸ ಶ್ರೇಣಿಯ ಟ್ರಕ್‌ಗಳು ಬಿಡುಗಡೆ

ವೋಲ್ವೋ ಪರಿಚಯಿಸಿರುವ ಟ್ರಕ್‌ಗಳು ಈಗ ದೇಶದಲ್ಲಿರುವ ವಾಣಿಜ್ಯ ವಾಹನಗಿಂತಲೂ ತಾಂತ್ರಿಕವಾಗಿ ಅತಿ ಹೆಚ್ಚು ಮುಂದುವರಿದಿದೆ. ಇದು ಹೆಚ್ಚುವರಿ ಶೇಕಡಾ 33ರಷ್ಟು ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ವೋಲ್ವೋದಿಂದ ಹೊಸ ಶ್ರೇಣಿಯ ಟ್ರಕ್‌ಗಳು ಬಿಡುಗಡೆ

ಇದರಲ್ಲಿ 440 ಅಶ್ವಶಕ್ತಿ ಉತ್ಪಾದಿಸುವ ಶಕ್ತಿಶಾಲಿ ಎಂಜಿನ್ ಆಳವಡಿಸಲಾಗಿದ್ದು, 220 ಎನ್‌ಎಂ ಟಾರ್ಕ್ ನೀಡಲಿದೆ. ಇದರ ಫ್ರಂಟ್ ಆಕ್ಸೆಲ್ 10 ಟನ್ ಹಾಗೆಯ ಪರಿಷ್ಕೃತ ರಿಯರ್ ಸಸ್ಪಷನ್ ಮುಖಾಂತರ 125 ಟನ್ ಭಾರವನ್ನು ಹೊರಬಹುದಾಗಿದೆ.

ವೋಲ್ವೋದಿಂದ ಹೊಸ ಶ್ರೇಣಿಯ ಟ್ರಕ್‌ಗಳು ಬಿಡುಗಡೆ

ಪ್ರಮುಖವಾಗಿಯೂ ಗಣಿಗಾರಿಕೆಯನ್ನು ಗುರಿಯಾಗಿರಿಸಿಕೊಂಡು ವೋಲ್ವೋ ಎಫ್‌ಎಂಎಕ್ಸ್ ಟ್ರಕ್ ನಿರ್ಮಿಸಲಾಗಿದೆ. ಇದು 12 ಲೀಟರ್ ಎಂಜಿನ್ ಹೊಂದಿದ್ದು, 51 ಟನ್ ಭಾರ ಹೊರಬಹುದಾಗಿದೆ. ಇದು ಐ ಶಿಫ್ಟ್ ಎಂಬ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದ್ದು, ಕಠಿಣ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿದೆ.

ವೋಲ್ವೋದಿಂದ ಹೊಸ ಶ್ರೇಣಿಯ ಟ್ರಕ್‌ಗಳು ಬಿಡುಗಡೆ

520 ಅಶ್ವಶಕ್ತಿಯ ವೋಲ್ವೋ ಎಫ್‌ಎಚ್ ಮಾದರಿಯು 200 ಟನ್ ಭಾರವನ್ನು ಹೊತ್ತೊಯ್ಯಲಿದೆ. ಇದರಲ್ಲಿ 14 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ. ದೂರ ಪ್ರಯಾಣದಲ್ಲಿ ಇದು ವೋಲ್ವೋ ಪಾಲಿಗೆ ಅತಿ ಹೆಚ್ಚಿನ ಯಶಸ್ಸನ್ನು ತಂದುಕೊಟ್ಟಿದೆ.

ವೋಲ್ವೋದಿಂದ ಹೊಸ ಶ್ರೇಣಿಯ ಟ್ರಕ್‌ಗಳು ಬಿಡುಗಡೆ

ಈ ಎಲ್ಲ ಮಾದರಿಗಳಲ್ಲೂ ಡೈನಾ‌ಫ್ಲೀಟ್ ಟ್ರಾನ್ಸ್‌ಪೋರ್ಟ್ ಮಾಹಿತಿ ಮನರಂಜನಾ ವ್ಯವಸ್ಥೆಯು ಲಭ್ಯವಾಗಲಿದೆ. ಇದು ಎರಡು ಹಾದಿಯ ಸಂಪರ್ಕವನ್ನು ಹೊಂದಿದ್ದು, ಇಂಟರ್‌ನೆಟ್ ಮೂಲಕ ಯಾವುದೇ ಕಂಪ್ಯೂಟರ್‌ನಿಂದ ಸಂಪರ್ಕ ಸಾಧಿಸಬಹುದಾಗಿದೆ.

Most Read Articles

Kannada
English summary
VE commercial vehicles, a 50-50 joint venture between Eicher Motors Limited and Volvo Group, has launched three new trucks to their lineup in India.
Story first published: Tuesday, October 28, 2014, 16:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X