2017ರಲ್ಲಿ ವೈರ್‌ಲೆಸ್ ಚಾರ್ಜಿಂಗ್ ನನಸಾಗುವ ಸಾಧ್ಯತೆ

By Nagaraja

ನಾವು ಅಂದುಕೊಂಡಿರುವುದಕ್ಕಿಂತಲೂ ಬೇಗನೇ ವಿದ್ಯುತ್ ಚಾಲಿತ ವಾಹನಗಳಿಗೆ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಲಭ್ಯವಾಗಲಿದೆ. ಈ ಬಗ್ಗೆ ನಿರೀಕ್ಷೆ ಮುಟ್ಟಿಸಿರುವ ಆಟೋಮೊಬೈಲ್ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಯಾಗಿರುವ ಕ್ವಾಲ್‌ಕಾಮ್ ಹ್ಯಾಲೋ (Qualcomm Halo) 2017 ವರ್ಷಾರಂಭದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ವೈರ್‌ಲೆಸ್ ಚಾರ್ಜಿಂಗ್ ಅಭಿವೃದ್ಧಿಪಡಿಸಲಿದೆ ಎಂದಿದೆ.

ಈ ಸಂಬಂಧ ಬಿಎಂಡಬ್ಲ್ಯು ಐ8, ಐ3 ಸೇಫ್ಟಿ ಮತ್ತು ಮೊದಲ ಫಾರ್ಮುಲಾ ಇ ಚಾಂಪಿಯನ್‌ಶಿಪ್‌ನ ವೈದ್ಯಕೀಯ ಸೇವಾ ವಾಹನಗಳಲ್ಲಿ ಮೊದಲ ಮಾದರಿಗಳನ್ನು ಬಳಕೆ ಮಾಡಲಾಗುವುದು. ಇದರೊಂದಿಗೆ ಸಾಂಪ್ರದಾಯಿಕ ಪ್ಲಗ್ ಇನ್ ಚಾರ್ಜಿಂಗ್ ವ್ಯವಸ್ಥೆಗೆ ಬ್ರೇಕ್ ಬೀಳಲಿದೆ.

Wireless EV

ಹಾಗಿದ್ದರೂ ಸಾಮಾನ್ಯ ಪ್ಲನ್ ಇನ್ ಚಾರ್ಜಿಂಗ್ ವ್ಯವಸ್ಥೆಗಿಂತಲೂ ಹೊಸತಾದ ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆಗೆ ಎಷ್ಟು ವೆಚ್ಚ ತಗುಲಲಿದೆ ಎಂಬುದಕ್ಕೆ ಮಾಹಿತಿ ದೊರಕ್ಕಿಲ್ಲ. ಆದರೆ ಪ್ರಸ್ತುತ ವ್ಯವಸ್ಥೆಯು ಮೊದಲು ಹೈ ಎಂಡ್ ಐಷಾರಾಮಿ ಕಾರುಗಳಲ್ಲಿ ಬಳಕೆಯಾಗಲಿದೆ.

ಕೇಬಲ್ ರಹಿತ ವೈರ್‌ಲೆಸ್ ಚಾರ್ಜಿಂಗ್ ಸಿಸ್ಟಂನಲ್ಲಿ ಎರಡು ಚಾರ್ಜಿಂಗ್ ಪ್ಯಾಡ್‌ಗಳಿರಲಿದೆ. ಇದರಲ್ಲಿ ಒಂದನ್ನು ನೆಲದಲ್ಲೂ ಮತ್ತೊಂದನ್ನು ಕಾರಲ್ಲಿ ಆಳವಡಿಸಲಾಗುವುದು. ಈ ಮೂಲಕ ನೆಲದಲ್ಲಿರುವ ಪ್ಯಾಡ್‌ನಿಂದ ಕಾರಿನ ಪ್ಯಾಡ್‌ಗೆ ಚೈತನ್ಯ ರವಾನೆಯಾಗುವುದು.

Most Read Articles

Kannada
English summary
Wireless charging for electric vehicles is closer than we think. Qualcomm Halo, developers of the technology in conjunction with auto makers, claim that this kind of charging will be available for use by the public as early as 2017.
Story first published: Thursday, August 28, 2014, 10:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X