ನಂದಿ ಬೆಟ್ಟದಲ್ಲಿ ಮೋಡವನ್ನು ಬೆನ್ನತ್ತಿ ರೇಸರುಗಳ ದಂಡು

By Nagaraja

ಬೆಂಗಳೂರು ಪ್ರವಾಸಿಗರ ಸ್ವರ್ಗವಾಗಿರುವ ನಂದಿ ಬೆಟ್ಟ ಈಗ ವಾಹನ ಪ್ರೇಮಿಗಳಿಂದ ತುಂಬು ತುಳುಕುತ್ತಿದೆ. ಹೌದು, 2015ನೇ ನಂದಿ ಹಿಲ್ ಕ್ಲೈಂಬ್ ರೇಸ್‌ಗೆ ಈಗಾಗಲೇ ಚಾಲನೆ ದೊರಕಿದ್ದು, ಮುಂಬರುವ ದಿನಗಳಲ್ಲಿ ಕಾರು ಹಾಗೂ ಬೈಕ್ ರೇಸ್‌ಗಳು ಆಯೋಜನೆಯಾಗಲಿದೆ.

ಆಯೋಜಕರ ಪ್ರಕಾರ ಈಗಾಗಲೇ 200ಕ್ಕೂ ಹೆಚ್ಚು ರೇಸರುಗಳು ಹೆಸರು ನೊಂದಾಯಿಸಿಕೊಂಡಿದ್ದು, ಈ ಬಾರಿಯ ನಂದಿ ಹಿಲ್ ಕ್ಲೈಂಬ್ ರೇಸ್ ಹಿಂದೆಂದಿಗಿಂತಲೂ ಹೆಚ್ಚು ರೋಚಕವಾಗಲಿದೆ ಎಂದಿದೆ.

ಬೆಂಗಳೂರಿನಲ್ಲಿ ನಂದಿ ಹಿಲ್ ಕ್ಲೈಂಬ್ ರೇಸ್‌ಗೆ ಚಾಲನೆ

ಡ್ರೈವ್ ಸ್ಪಾರ್ಕ್ ಪ್ರತಿನಿಧಿಸುತ್ತಿರುವ ನಮ್ಮ ಹಿರಿಯ ಉಪ ಸಂಪಾದಕರಾಗಿರುವ ಸಂತೋಷ್ ರಾಜ್ ಕುಮಾರ್ ತಮ್ಮ ಆಲ್ಟೊ ಕೆ10 ಕಾರಿನಲ್ಲಿ ಸ್ಪರ್ಧಿಸಲಿದ್ದಾರೆ. ರೇಸ್ ವಿಜೇತರಿಗೆ 5,000 ರು. ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ.

ಬೆಂಗಳೂರಿನಲ್ಲಿ ನಂದಿ ಹಿಲ್ ಕ್ಲೈಂಬ್ ರೇಸ್‌ಗೆ ಚಾಲನೆ

ಎಂಜಿನ್ ಸಾಮರ್ಥ್ಯ ಅನುಗುಣವಾಗಿ ವಿವಿಧ ವಿಭಾಗಗಳಲ್ಲಿ ರೇಸ್ ನಡೆಯಲಿದೆ. ಇಂದು (ಮಂಗಳವಾರ) ಅಭ್ಯಾಸ ಶಿಬಿರ ನಡೆದಿದ್ದರೆ ನಾಳೆ (ಬುಧವಾರ) ಬೈಕ್ ಮತ್ತು ಕೊನೆಯ ದಿನವಾದ ಗುರುವಾರ ಕಾರು ರೇಸ್ ಆಯೋಜನೆಯಾಗಲಿದೆ.

ಬೆಂಗಳೂರಿನಲ್ಲಿ ನಂದಿ ಹಿಲ್ ಕ್ಲೈಂಬ್ ರೇಸ್‌ಗೆ ಚಾಲನೆ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ನಂದಿ ಬೆಟ್ಟ ಕಡಿದಾದ ತಿರುವುಗಳಿಂದ ಕೂಡಿದ್ದು, ಮೋಡವನ್ನು ಬೆನ್ನತ್ತಿ ರುಯಿಂ ರುಯಿಂ ಶಬ್ದದೊಂದಿಗೆ ರೇಸ್‌ನಲ್ಲಿ ಪಾಲ್ಗೊಳ್ಳಲಿರುವ ರೇಸರ್‌ಗಳಿಗೆ ರೋಚಕ ಅನುಭವ ನೀಡಲಿದೆ.

ಬೆಂಗಳೂರಿನಲ್ಲಿ ನಂದಿ ಹಿಲ್ ಕ್ಲೈಂಬ್ ರೇಸ್‌ಗೆ ಚಾಲನೆ

ಇನ್ನರ್ ಲೈನ್ ರೇಸಿಂಗ್ ಆಯೋಜಿಸುತ್ತಿರುವ ಈ 'ರೇಸ್ ಟು ಥಂಡರ್ ಹೆಡ್' ಎಂಬ ಹೆಸರಿನಿಂದ ಅರಿಯಲ್ಪಡುವ ಈ 1.5 ಕೀ.ಮೀ. ದೂರದ ನಂದಿ ಹಿಲ್ ಕ್ಲೈಂಬ್ ರೇಸ್‌ನಲ್ಲಿ ಭಾಗವಹಿಸಲಿರುವ ಪ್ರತಿಯೊಬ್ಬ ಸ್ಪರ್ಧಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ.

ರೇಸ್ ವಿಭಾಗ - ದ್ವಿಚಕ್ರ ವಾಹನ

ರೇಸ್ ವಿಭಾಗ - ದ್ವಿಚಕ್ರ ವಾಹನ

  • ಗೇರ್ ಲೆಸ್ ಸ್ಕೂಟರ್,
  • 80ಸಿಸಿ - 130ಸಿಸಿ (2 ಸ್ಟ್ರೋಕ್),
  • 80ಸಿಸಿ - 130ಸಿಸಿ (4 ಸ್ಟ್ರೋಕ್),
  • 131ಸಿಸಿ - 160ಸಿಸಿ (2 ಸ್ಟ್ರೋಕ್),
  • 131ಸಿಸಿ - 160ಸಿಸಿ (4 ಸ್ಟ್ರೋಕ್),
  • 161ಸಿಸಿ - 260ಸಿಸಿ,
  • 250ಸಿಸಿ - 360ಸಿಸಿ 2 ಸ್ಟ್ರೋಕ್ ಯೆಜ್ಡಿ ಕ್ಲಾಸ್,
  • ಆರ್ ಡಿ 350 ಕ್ಲಸ್
  • ಬುಲೆಟ್ ಕ್ಲಾಸ್,
  • ಇಂಡಿಯನ್ ಓಪನ್,
  • ಫಾರಿನ್ ಓಪನ್,
  • 600ಸಿಸಿ ವರೆಗೆ,
  • 611 ಸಿಸಿ - 1000 ಸಿಸಿ,
  • 1001 ಸಿಸಿ - 1300 ಸಿಸಿ,
  • ಲೇಡಿಸ್ ಕ್ಲಾಸ್,
  • ಐಎಲ್‌ಆರ್ ಓಪನ್ ಕ್ಲಾಸ್ (ಅನಿರ್ಬಂಧಿತ),
  • ಕೆಟಿಎಂ 200 ಕ್ಲಾಸ್,
  • ಕೆಟಿಎಂ 390 ಕ್ಲಾಸ್
  • ರೇಸ್ ವಿಭಾಗ - ನಾಲ್ಕು ಚಕ್ರದ ವಾಹನ

    ರೇಸ್ ವಿಭಾಗ - ನಾಲ್ಕು ಚಕ್ರದ ವಾಹನ

    • 850 ಸಿಸಿ ವರೆಗೆ,
    • 851 ಸಿಸಿ - 1150 ಸಿಸಿ,
    • 1151ಸಿಸಿ - 1400ಸಿಸಿ,
    • 1401ಸಿಸಿ - 1600ಸಿಸಿ,
    • 1601ಸಿಸಿ ಮತ್ತು ಮೇಲ್ಪಟ್ಟ,
    • ಜೆನ್ ಜೊತೆಗೆ 1600 ಸಿಸಿ ವರೆಗೆ,
    • ಎಸ್ಟೀಮ್ ಜೊತೆಗೆ 1600 ಸಿಸಿ ವರೆಗೆ,
    • ಇಂಡಿಯನ್ ಓಪನ್,
    • ಫಾರಿನ್ ಓಪನ್,
    • ಡೀಸೆಲ್ ಓಪನ್,
    • ಲೇಡಿಸ್ ಕ್ಲಾಸ್,
    • ಐಎಲ್‌ಆರ್ ಓಪನ್ ಕ್ಲಾಸ್ (ಅನಿರ್ಬಂಧಿತ),
    • ಫೋರ್ಸ್ಡ್ ಇಂಡಕ್ಷನ್ ಕ್ಲಾಸ್

Most Read Articles

Kannada
English summary
It's time for for drivers to joke, two-strokes to smoke, and modifications, bespoke. That's because the hour of the 2015 Nandi Hill Climb has dawned. The practice session currently underway on the 1.6-kilometre course that winds its way up to the top of the popular tourist attraction, Nandi Hills.
 
Story first published: Tuesday, January 20, 2015, 18:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X