ನಿಮ್ಮ ಗಮನ ಸೆಳೆಯಿತೇ 2015 ನಿಸ್ಸಾನ್ ಮ್ಯುರಾನೊ?

By Nagaraja

ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, 2002ನೇ ಇಸವಿಯಲ್ಲಿ ತನ್ನ ಮೊದಲ ಮ್ಯುರಾನೊ ಕ್ರಾಸೋವರ್ ಆವೃತ್ತಿಯನ್ನು ಲಾಂಚ್ ಮಾಡಿತ್ತು. ಇದೀಗ ಸರಿ ಸುಮಾರು ಒಂದು ದಶಕದ ಬಳಿಕ ಆಲ್ ನ್ಯೂ 2015 ಮ್ಯುರಾನೊ ಕ್ರಾಸೋವರ್ ಪರಿಚಯಿಸಲು ತಯಾರಿ ನಡೆಸುತ್ತಿದೆ.

ದೇಶಕ್ಕೂ ಬರುತ್ತಾ ಗೊ ಸೆಡಾನ್ ಕಾರು?

ಇದರಂತೆ ನ್ಯೂಯಾರ್ಕ್ ಆಟೋ ಶೋದಲ್ಲಿ 2015 ನಿಸ್ಸಾನ್ ಮ್ಯುರಾನೊ ಭರ್ಜರಿ ಪ್ರದರ್ಶನ ಕಾಣಲಿದೆ. ನೂತನ ಮಾದರಿಯು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಕ್ರೀಡಾತ್ಮಕ ಲುಕ್ ಪಡೆದುಕೊಳ್ಳಲಿದೆ.|

2015 ನಿಸ್ಸಾನ್ ಮ್ಯುರಾನೊ

ನೂತನ ಮ್ಯುರಾನೊ ನಿಸ್ಸಾನ್‌ನ 3.5 ಲೀಟರ್ ವಿ6 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 260 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಫ್ರಂಟ್ ವೀಲ್ ಡ್ರೈವ್ ಜತೆಗೆ ಸಿವಿಟಿ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.

2015 ನಿಸ್ಸಾನ್ ಮ್ಯುರಾನೊ

ಅಷ್ಟಕ್ಕೂ ನೂತನ ಮ್ಯುರಾನೊ ಜಪಾನ್‌ನಲ್ಲಿ ಉತ್ಪಾದನೆಯಾಗಲ್ಲ. ಬದಲಾಗಿ ಮಿಸ್ಸಿಸ್ಸಿಪಿಯಲ್ಲಿ ನಿರ್ಮಾಣವಾಗಲಿರುವ ಈ ಬಹುನಿರೀಕ್ಷಿತ ಕಾರು 2014 ವರ್ಷಾಂತ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

2015 ನಿಸ್ಸಾನ್ ಮ್ಯುರಾನೊ

ಮುಂಭಾಗದಲ್ಲಿ 'ವಿ-ಮೋಷನ್' ಎಂದು ಅರಿಯಲ್ಪಡುವ ಹೊಸ ದೇಹ ರಚನೆಯನ್ನು ಮ್ಯುರಾನೊದಲ್ಲಿ ನೋಡಬಹುದಾಗಿದೆ. ಇದು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಏರೋಡೈನಾಮಿಕ್ ಎನಿಸಿಕೊಳ್ಳಲಿದೆ.

2015 ನಿಸ್ಸಾನ್ ಮ್ಯುರಾನೊ

ನಿಸ್ಸಾನ್ ಪ್ರಕಾರ, ವಾಹನ ಪ್ರದರ್ಶನ ಮೇಳಗಳಲ್ಲಿ ಕಾನ್ಸೆಪ್ಟ್ ಮಾದರಿ ಪ್ರದರ್ಶಿಸಿ ಕೇವಲ ಮನರಂಜನೆಗಷ್ಟೇ ಸೀಮಿತಪಡಿಸುವುದು ನಮ್ಮ ಗುರಿಯಾಲ್ಲ. ಬದಲಾಗಿ ನಿರ್ಮಾಣ ವರ್ಷನ್ ಗುರಿಯಾಗಿರಿಸಿಕೊಂಡು ಕಾನ್ಸೆಪ್ಟ್ ವಾಹನಗಳನ್ನು ತಯಾರಿಸಲಾಗುತ್ತದೆ ಎಂದಿದೆ.

2015 ನಿಸ್ಸಾನ್ ಮ್ಯುರಾನೊ

ನೂತನ ಮ್ಯುರಾನೊ, ಇತ್ತೀಚೆಗಷ್ಟೇ ಪ್ರದರ್ಶಿಸಲಾಗಿದ್ದ ರೆಸೊನನ್ಸ್ (Resonance) ಕಾನ್ಸೆಪ್ಟ್ ಕಾರಿಗೆ ಸಾಮ್ಯತೆ ಪಡೆದುಕೊಂಡಿದೆ. ಅಂದರೆ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಂಡಿರುವ ನಿಸ್ಸಾನ್, ಕಾನ್ಸೆಪ್ಟ್ ವರ್ಷನ್‌ನಲ್ಲಿ ತೋರಿಸಿಕೊಟ್ಟಿರುವುದನ್ನು ನಿರ್ಮಾಣ ಹಂತಕ್ಕೂ ಪರಿವರ್ತಿಸುವ ಪ್ರಯತ್ನ ನಡೆಸಿದೆ.

2015 ನಿಸ್ಸಾನ್ ಮ್ಯುರಾನೊ

ನಿಸ್ಸಾನ್‌ ನಾಸಾದಿಂದ ಪ್ರೇರಣೆ ಪಡೆದಿರುವ ಜಿರೋ ಗ್ರಾವಿಟಿ ಸೀಟು ತಂತ್ರಗಾರಿಕೆಯನ್ನು ಅಲ್ಟಿಮಾ ಸೆಡಾನ್‌ನಿಂದ ಆಮದು ಮಾಡಲಾಗಿದೆ. ಇದು ಹೆಚ್ಚಿನ ಆರಾಮದಾಯಕತೆ ಪ್ರದಾನ ಮಾಡಲಿದೆ.

2015 ನಿಸ್ಸಾನ್ ಮ್ಯುರಾನೊ

ಅಂತಿಮವಾಗಿ ದರದ ಬಗ್ಗೆ ಮಾತನಾಡುವುದಾದ್ದಲ್ಲಿ 29,300 ಅಮೆರಿಕನ್ ಡಾಲರುಗಳಷ್ಟು ದುಬಾರಿಯಾಗಲಿದೆ. ಹಾಗೆಯೇ ಜಾಗತಿಕ ಪ್ರವೇಶ ಪಡೆಯಿರುವ ಮ್ಯುರಾನೊ ಮುಂದಿನ ದಿನಗಳಲ್ಲಿ ಭಾರತ ಪ್ರವೇಶ ಪಡೆಯಲಿದೆಯೇ ಎಂಬುದನ್ನು ಹೇಳುವುದು ಕಷ್ಟ.

Most Read Articles

Kannada
English summary
Nissan first launched their Murano crossover in 2002. The Japanese manufacturer now will be introducing a new 2015 model of the crossover. The Murano will debut at the New York Auto Show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X