ದೇಶದ 10 ವಿಶ್ವಾಸಾರ್ಹ ಕಾರುಗಳು

By Nagaraja

ಇದು ನಮ್ಮ ಅಭಿಪ್ರಾಯವಲ್ಲ. ನಿಮಗೆ ಡೀಲರುಗಳ ಮೇಲೆ ನಂಬಿಕೆಯಿದ್ದರೆ ಈ ಲೇಖನದತ್ತ ಮುಂದುವರಿಯಬಹುದು. ದೇಶದಲ್ಲಿ ಅತಿ ಹೆಚ್ಚು ನೆಚ್ಚಬಹುದಾದ, ನಂಬಿಕೆಗೆ ಯೋಗ್ಯವಾದ 10 ವಿಶ್ವಾಸಾರ್ಹ ಕಾರುಗಳ ಪಟ್ಟಿಯನ್ನು ನಾವಿಲ್ಲಿ ಕೊಡಲಿದ್ದೇವೆ.

ಆಧುನಿಕ ಜೀವನ ಶೈಲಿಯಲ್ಲಿ ಕಾರು ಅತಿ ಮುಖ್ಯ ಘಟಕವಾಗಿ ಪರಿಣಮಿಸಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪಯಣಿಸಲು ಅಥವಾ ದೈನಂದಿನ ಅಗತ್ಯಗಳಿಗಾಗಿ ಜನರು ಸಾರ್ವಜನಿಕ ವಾಹನಗಳಿಗಿಂತ ಹೆಚ್ಚು ಖಾಸಗಿ ವೈಯಕ್ತಿಕ ವಾಹನಗಳನ್ನು ಬಯಸುತ್ತಾರೆ. ಈಗ ಕಾರು ವಿತರಕರ ಪ್ರಕಾರ ದೇಶದ 10 ವಿಶ್ವಾಸಾರ್ಹ ಕಾರುಗಳ ಬಗ್ಗೆ ಚರ್ಚಿಸಲಿದ್ದೇವೆ.

ದೇಶದ 10 ವಿಶ್ವಾಸಾರ್ಹ ಕಾರುಗಳು

ಇಲ್ಲಿ ಈಗ ಮಾರಾಟದಲ್ಲಿರುವ ಜೊತೆಗೆ ಅತಿ ಹೆಚ್ಚು ನಂಬಿಕೆಗೆ ಯೋಗ್ಯವಾಗಿರುವ ಹಳೆಯ ಕಾರುಗಳ ಪಟ್ಟಿಯನ್ನು ಕೊಡಲಾಗಿದೆ.

01. ವ್ಯಾಗನಾರ್

01. ವ್ಯಾಗನಾರ್

'ಟಾಲ್ ಬಾಯ್' ವಿನ್ಯಾಸ ತಂತ್ರಗಾರಿಕೆಯನ್ನು ಹೊಂದರುವ ಮಾರುತಿ ಸುಜುಕಿ ವ್ಯಾಗನಾರ್ ಅತಿ ಹೆಚ್ಚು ಒಳಮೈ ಸ್ಥಳಾವಕಾಶವನ್ನು ಪಡೆದುಕೊಂಡಿದೆ. ಇವೆಲ್ಲದರ ಜೊತೆಗೆ ವಿಸ್ತಾರವಾಗಿ ವ್ಯಾಪಿಸಿರುವ ಮಾರುತಿ ಸುಜುಕಿಯ ಸರ್ವಿಸ್ ಜಾಲವು ಇನ್ನು ಹೆಚ್ಚು ವಿಶ್ವಾಸಾರ್ಹ ಕಾರೆನೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.

02. ಸ್ಯಾಂಟ್ರೊ

02. ಸ್ಯಾಂಟ್ರೊ

ದಕ್ಷಿಣ ಕೊರಿಯೊ ಮೂಲದ ಹ್ಯುಂಡೈನಿಂದ ನಿರ್ಮಾಣವಾಗಿರುವ ಸ್ಯಾಂಟ್ರೊ ಪ್ರಮುಖವಾಗಿಯೂ ಮಾರುತಿ ಸಣ್ಣ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿತ್ತು. ಅಲ್ಲದೆ ಒಂದು ಹಂತದ ವರೆಗೆ ತನ್ನ ಬೇಟೆಯಲ್ಲಿ ಯಶಸ್ಸನ್ನು ಕಂಡಿರುವ ಈ ಸಣ್ಣ ಕಾರು ಅತ್ಯುತ್ತಮ ವಿನ್ಯಾಸ ಗುಣಮಟ್ಟತೆಯಿಂದಾಗಿ ಜನಮೆಚ್ಚುಗೆ ಪಾತ್ರವಾಗಿತ್ತು.

03. ಹೋಂಡಾ ಸಿಟಿ

03. ಹೋಂಡಾ ಸಿಟಿ

ತನ್ನ ವಿಶ್ವಾಸಾರ್ಹ ಎಂಜಿನ್ ಗಳಿಂದಲೇ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಹೋಂಡಾ ಸಂಸ್ಥೆಯು ಸಿಟಿ ಪೆಟ್ರೋಲ್ ಮಾದರಿಯ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗತೊಡಗಿತ್ತು. ಈಗಲೂ ಹೊಸ ಆವೃತ್ತಿಯೊಂದಿಗೆ ಹೋಂಡಾ ಸಿಟಿ ಅತ್ಯುತ್ತಮ ಬೇಡಿಕೆಯನ್ನು ಕಾಯ್ದುಕೊಂಡಿದೆ.

04. ಮಾರುತಿ 800

04. ಮಾರುತಿ 800

ಮಾರುತಿ 800 ನಿರ್ಮಾಣ ಸ್ಥಗಿತವಾಗಿರಬಹುದು. ಇದರ ಸ್ಥಾನವನ್ನು ನೂತನ ಆಲ್ಟೊ ತುಂಬಿರಬಹುದು. ಆದರೆ ವಿಶ್ವಾಸಾರ್ಹ ಕಾರುಗಳ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಸರಿ ಸುಮಾರು ಮೂರು ದಶಕಗಳಷ್ಟು ಹಿಂದೆ 1983ನೇ ಇಸವಿಯಲ್ಲಿ ಬಿಡುಗಡೆಗೊಂಡಿದ್ದ ಮಾರುತಿ 800, 2014ರ ವೇಳೆಯಾಗುವಾಗ 2.87 ದಶಲಕ್ಷ ಯುನಿಟ್ ನಿರ್ಮಾಣವಾಗಿತ್ತಲ್ಲದೆ ಭಾರತದಲ್ಲೇ 2.66 ಮಿಲಿಯನ್ ಗಳಷ್ಟು ಮಾರಾಟ ಸಾಧಿಸಿತ್ತು. 800 ಸಿಸಿ ತ್ರಿ ಸಿಲಿಂಡರ್ ಎಂಜಿನ್ ಹೊಂದಿರುವ ಚೊಕ್ಕದಾದ ಈ ಕಾರು ಆಕರ್ಷಕ ಒಳಮೈ ಜೊತೆಗೆ ಅತ್ಯುತ್ತಮ ಎಂಜಿನ್ ಕ್ಷಮತೆಯನ್ನು ಪಡೆದುಕೊಂಡಿತ್ತು. ಇನ್ನು ನಿರ್ವಹಣೆ ವೆಚ್ಚವೂ ಕಡಿಮೆಯಾಗಿರುವುದು ಮಾರುತಿ 800 ಯಶಸ್ಸಿಗೆ ಕಾರಣವಾಗಿದೆ.

05. ಟೊಯೊಟಾ ಕ್ವಾಲಿಸ್

05. ಟೊಯೊಟಾ ಕ್ವಾಲಿಸ್

ಈಗಲೂ ಹಳೆಯ ಕಾರು ಮಾರುಕಟ್ಟೆಯಲ್ಲಿ ಟೊಯೊಟಾ ಕ್ವಾಲಿಸ್ ಅತ್ಯುತ್ತಮ ಗುಣಮಟ್ಟತೆಯನ್ನು ಕಾಯ್ದುಕೊಂಡಿದೆ. ಚಾಲನಾ ಅನುಭವ, ಒಳಮೈ ಜಾಗ ಹಾಗೂ ಡೀಸೆಲ್ ಎಂಜಿನ್ ಇವೆಲ್ಲವೂ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಕಾಯ್ದುಕೊಳ್ಳಲು ಕ್ವಾಲಿಸ್ ಗೆ ನೆರವಾಗಿದೆ.

06. ಮಾರುತಿ ಎಸ್ಟೀಮ್

06. ಮಾರುತಿ ಎಸ್ಟೀಮ್

ಹಳೆಯ ಕಾರು ಮಾರುಕಟ್ಟೆಯ ಜೊತೆಗೆ ಆಧುನಿಕ ಕಾಲದಲ್ಲಿ ಈಗಲೂ ಇಂತಹದೊಂದು ಕಾರು ಮಾರುಕಟ್ಟೆಯಲ್ಲಿರುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಭಾವನೆ ಮೂಡಿಸುವ ಏಕ ಮಾತ್ರ ಕಾರು ಎಸ್ಟೀಮ್ ಆಗಿದೆ. ಮಾರುತಿಯ ಕ್ರಾಂತಿಕಾರಿ ಬದಲಾವಣೆಯೊಂದಿಗೆ ಆಗಮನವಾಗಿದ್ದ ಎಸ್ಟೀಮ್, ರೇಸ್ ಟ್ರ್ಯಾಕ್ ನಂತಹ ಅನುಭವದೊಂದಿಗೆ ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ.

07. ಟೊಯೊಟಾ ಇನ್ನೋವಾ

07. ಟೊಯೊಟಾ ಇನ್ನೋವಾ

ಜಪಾನ್ ಮೂಲದ ದೈತ್ಯ ಸಂಸ್ಥೆಯಾಗಿರುವ ಟೊಯೊಟಾದ ಇನ್ನೋವಾ ಉಪಯುಕ್ತ ಕಾರು ಸ್ವಲ್ಪ ದುಬಾರಿಯೆನಿಸಿದರೂ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆ. ಎಂಟು ಮಂದಿ ಪ್ರಯಾಣಿಕರಿಗೆ ಆರಾಮವಾಗಿ ಸಂಚರಿಸಬಲ್ಲ ಇನ್ನೋವಾ ಕಾರು ಪ್ರೀಮಿಯಂ ಕಾರು ವಿಭಾಗದಲ್ಲಿ ಹೆಚ್ಚು ಬೇಡಿಕೆಗೆ ಗ್ರಾಸವಾಗಿದೆ.

08. ಆಲ್ಟೊ

08. ಆಲ್ಟೊ

ಕೇವಲ ಹೊಸ ಕಾರು ಮಾತ್ರವಲ್ಲದೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲೂ ಆಲ್ಟೊ ಅತಿ ಹೆಚ್ಚಿನ ಬೇಡಿಕೆ ಕಂಡುಕೊಂಡಿದೆ. ಅಲ್ಲದೆ ಕಾರು ಕಲಿಕಾ ಕಾಲಘಟ್ಟದಲ್ಲಿ ಗ್ರಾಹಕರು ಆಲ್ಟೊ ಕಾರಿನ ಮೇಲೆ ಅತಿ ಹೆಚ್ಚಿನ ನಂಬಿಕೆ ವ್ಯಕ್ತಪಡಿಸುತ್ತಾರೆ.

09. ಮಹೀಂದ್ರ ಸ್ಕಾರ್ಪಿಯೊ

09. ಮಹೀಂದ್ರ ಸ್ಕಾರ್ಪಿಯೊ

ಆಫ್ ರೋಡ್ ಸಾಮರ್ಥ್ಯವನ್ನು ಹೊಂದಿರುವ ಮಹೀಂದ್ರ ಸ್ಕಾರ್ಪಿಯೊ ಪವರ್ ಫುಲ್ ಡೀಸೆಲ್ ಎಂಜಿನ್ ಪಡೆದುಕೊಂಡಿದೆ. ಫೋರ್ ವೀಲ್ ಚಾಲನಾ ಆಯ್ಕೆ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸ್ಕಾರ್ಪಿಯೊ ಕಾರಿನ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.

10. ಮಾರುತಿ ಸ್ವಿಫ್ಟ್

10. ಮಾರುತಿ ಸ್ವಿಫ್ಟ್

ದೇಶದ ಈ ಜನಪ್ರಿಯ ಕಾರನ್ನು ಉಲ್ಲೇಖಿಸದೆ ಟಾಪ್ 10 ಪಟ್ಟಿ ಪೂರ್ಣಗೊಳ್ಳಲಾರದು. ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಗಳಲ್ಲಿ ಅತಿ ಹೆಚ್ಚಿನ ಮಾರಾಟ ಕಾಯ್ದುಕೊಂಡಿರುವ ಮಾರುತಿ ಸ್ವಿಫ್ಟ್ ಗ್ರಾಹಕ ಸಂತೃಪ್ತಿ ಮಾತ್ರವಲ್ಲದೆ ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದೆನಿಸಿಕೊಂಡಿದೆ. ಇವೆಲ್ಲಕ್ಕೂ ಮಾರುತಿ ಅನುಸರಿಸಿರುವ ಮಾರಾಟ ತಂತ್ರಗಾರಿಕೆಯನ್ನು ನಾವು ಮೆಚ್ಚಲೇಬೇಕು.

Most Read Articles

Kannada
Read more on ಕಾರು car dealer
English summary
So if you are out there and looking for a good, reliable used car, which one would it be? This is a list of 10 most reliable cars from a car dealer’s point of view, that will go easy on your pockets as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X