ಹೋಂಡಾ ಸಿಟಿ ಒಂದು ಲಕ್ಷ ಸಾಧನೆ; ಈ 10 ಅಂಶಗಳನ್ನು ತಿಳಿಯಿರಿ!

By Nagaraja

15 ತಿಂಗಳ ಹಿಂದೆ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಮಧ್ಯಮ ಗಾತ್ರದ ಸೆಡಾನ್ ಕಾರೊಂದು ಕೆಲವೇ ಸಮಯದಲ್ಲಿ ದೇಶದ ಹೀರೊ ಆಗಿ ಬಿಟ್ಟಿದೆ. ಹೌದು, ಕಳೆದ ವರ್ಷ ಬಿಡುಗಡೆಯಾಗಿದ್ದ 4ನೇ ತಲೆಮಾರಿನ ಹೋಂಡಾ ಸಿಟಿ ಒಂದು ಲಕ್ಷ ಯುನಿಟ್ ಗಳ ಮಾರಾಟ ದಾಖಲೆಯನ್ನು ತಲುಪಿದ್ದು, ಭಾರಿ ಯಶಸ್ಸಿನತ್ತ ದಾಪುಗಾಲನ್ನಿಟ್ಟಿದೆ.

ಸೆಡಾನ್ ವಿಭಾಗದಲ್ಲಿ ತನ್ನ ಮೊದಲ ಡೀಸೆಲ್ ಕಾರನ್ನು ಪರಿಚಯಿಸಿದ್ದ ಜಪಾನ್ ಮೂಲದ ಹೋಂಡಾ ಸಂಸ್ಥೆಯು ಇಂಧನ ಕ್ಷಮತೆಯ ಸೇರಿದಂತೆ ಇನ್ನು ಹಲವಾರು ವಿಚಾರಗಳಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ಅತ್ಯಂತ ವೇಗದಲ್ಲಿ ಒಂದು ಲಕ್ಷ ಮಾರಾಟವನ್ನು ತಲುಪಿರುವ ಮಧ್ಯಮ ಗಾತ್ರದ ಸೆಡಾನ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗೆ ಹೋಂಡಾ ಕಾರು ಗ್ರಾಹಕರಿಗೆ ಪ್ರಿಯವೆನಿಸಲಿರುವ 10 ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಿ ಕೊಡಲಾಗಿದೆ.

10. ಬೆಲೆ

10. ಬೆಲೆ

ಸ್ಪರ್ಧಾತ್ಮಕ ಬೆಲೆ ಕೂಡಾ ಹೋಂಡಾ ಸಿಟಿ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸಿದೆ. ಇದರ ಪ್ರಾರಂಭಿಕ ಬೆಲೆ 7.53 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ ವೆರಿಯಂಟ್ 11.53 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ (ಎಕ್ಸ್ ಶೋ ರೂಂ ಬೆಲೆ). ಹೋಂಡಾ ಸಿಟಿ ಆನ್ ರೋಡ್ ಬೆಲೆಗಾಗಿ ಇಲ್ಲಿ ಕ್ಲಿಕ್ಕಿಸಿರಿ

09. ಗರಿಷ್ಠ ಇಂಧನ ಕ್ಷಮತೆಯ ಕಾರು

09. ಗರಿಷ್ಠ ಇಂಧನ ಕ್ಷಮತೆಯ ಕಾರು

ಹೋಂಡಾದ ಡೀಸೆಲ್ ಎಂಜಿನ್ ಪ್ರತಿ ಲೀಟರ್ ಗೆ 26.0 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಇದು ಬಿಡುಗಡೆ ಸಂದರ್ಭದಲ್ಲಿ ದೇಶದ ಅತ್ಯಂತ ಇಂಧನ ಕ್ಷಮತೆಯ ಕಾರೆನಿಸಿಕೊಂಡಿತ್ತು.

08. ಡೀಸೆಲ್ ಎಂಜಿನ್

08. ಡೀಸೆಲ್ ಎಂಜಿನ್

ಅಮೇಜ್ ಯಶಸ್ಸಿನ ಬಳಿಕ ನಾಲ್ಕನೇ ತಲೆಮಾರಿನ ಸಿಟಿ ಕಾರಲ್ಲೂ ಡೀಸೆಲ್ ಎಂಜಿನ್ ಆಳವಡಿಸಲಾಗಿತ್ತು. ಇದರ 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ 200 ತಿರುಗುಬಲದಲ್ಲಿ 100 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಿದೆ.

07. ಪೆಟ್ರೋಲ್ ಎಂಜಿನ್

07. ಪೆಟ್ರೋಲ್ ಎಂಜಿನ್

ಅಂತೆಯೇ ಇದು 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಸಹ ಪಡೆದುಕೊಂಡಿದ್ದು, 119 ಅಶ್ವಶಕ್ತಿ ಉತ್ಪಾದಿಸುತ್ತದೆ. ಪ್ರಸ್ತುತ ಮಾದರಿ ಪ್ರತಿ ಲೀಟರ್ ಗೆ 17.8 ಕೀ.ಮೀ. ಮೈಲೇಜ್ ನೀಡುತ್ತದೆ. ಇನ್ನು ಫೈವ್ ಸ್ಪೀಡ್ ಮ್ಯಾನುವಲ್ ಹೊರತಾಗಿ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲೂ ಹೋಂಡಾ ಸಿಟಿ ಲಭ್ಯವಿದ್ದು, ಈ ವೆರಿಯಂಟ್ ಪ್ರತಿ ಲೀಟರ್ ಗೆ 18 ಕೀ.ಮೀ. ಮೈಲೇಜ್ ನೀಡುತ್ತದೆ.

06. ಹೊರಮೈ

06. ಹೊರಮೈ

ಬಲಿಷ್ಠ ರೆಕ್ಕೆಯ ಮುಖವಾಡದ ಕ್ರೋಮ್ ಗ್ರಿಲ್,

ಎಲೆಕ್ಟ್ರಿಕ್ ಸನ್ ರೂಫ್,

ಷಾರ್ಕ್ ಮೀನು ತರಹದ ಹರಿತವಾದ ಆಂಟೆನಾ,

ಟೈಲ್ ಲ್ಯಾಂಪ್ ಗೆ ಪ್ರೀಮಿಯಂ ಹೋದಿಗೆ,

ಪ್ರೀಮಿಯಂ ಹೆಡ್ ಲ್ಯಾಂಪ್,

5 ಸ್ಪೋಕ್ ಅಲಾಯ್ ವೀಲ್,

ರಿಯರ್ ಲೈಸನ್ಸ್ ಕ್ರೋಮ್ ಸ್ಪರ್ಶ,

ಫಾಗ್ ಲ್ಯಾಂಪ್,

ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್ ಜೊತೆಗೆ ಟರ್ನ್ ಇಂಡಿಕೇಟರ್

05. ಒಳಮೈ

05. ಒಳಮೈ

ಚಾಲಕ ಸೀಟು ಎತ್ತರ ಹೊಂದಾಣಿಕೆ,

ಹಿಂದುಗಡೆ ಎಸಿ ವೆಂಟ್ಸ್ ಜೊತೆ ಚಾರ್ಜಿಂಗ್ ಪೋರ್ಟ್,

ಆಟೋ ಎಸಿ ಜೊತೆ ಟಚ್ ಸ್ಕ್ರೀನ್ ಕಂಟ್ರೋಲ್ ಪ್ಯಾನೆಲ್,

ಪ್ರೀಮಿಯಂ ಡ್ಯಾಶ್ ಬೋರ್ಡ್ ಜೊತೆ ಮುಂದುವರಿದ ಗ್ರಾಹಕ ಸಂಪರ್ಕ,

ಪ್ರೀಮಿಯಂ ಹಾಗೂ ಹೆಚ್ಚು ಸ್ಥಳಾವಕಾಶಯುಕ್ತ ಲೆಥರ್ ಇಂಟಿರಿಯರ್

04. ವಿಶಿಷ್ಟತೆ

04. ವಿಶಿಷ್ಟತೆ

ಮುಂದುವರಿದ ಬಹು ಕ್ರಿಯಾತ್ಮಕ ಕಾಂಬಿನೇಷನ್ ಮೀಟರ್, ಇಕೊ ಅಸಿಸ್ಟ್ ಸಿಸ್ಟಂ ಜೊತೆ ಇನ್ ಬಿಲ್ಟ್ ಆಂಬಿಯಂಟ್ ಮೀಟರ್ ರಿಂಗ್ಸ್,

ಮುಂದವರಿದ ಜೋಡಣೆ ಮಾಡಲಾದ ಆಡಿಯೋ ಜೊತೆ 12.7 ಸೆಂಟಿಮೀಟರ್ ಸ್ಕ್ರೀನ್,

ಹ್ಯಾಂಡ್ಸ್ ಫ್ರಿ ಟೆಲಿಫೋನ್, ಐ ಫೋನ್ ಸಂಪರ್ಕ,

ಒನ್ ಫುಶ್ ಎಂಜಿನ್ ಸ್ಟ್ಯಾರ್ಟ್/ಸ್ಟಾಪ್ ಬಟನ್,

ಸ್ಮಾರ್ಟ್ ಕೀ ಎಂಟ್ರಿ ಸಿಸ್ಟಂ,

ರಿಯರ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಬಹು ವೀಕ್ಷಣೆ,

ಗರಿಷ್ಠ ಬೂಟ್ ಜಾಗ,

ಪೆಡಲ್ ಶಿಫ್ಟ್ ಮತ್ತು ಕ್ರೂಸ್ ಕಂಟ್ರೋಲ್

03. ಸುರಕ್ಷತೆ

03. ಸುರಕ್ಷತೆ

ಎಬಿಎಸ್ ಜೊತೆ ಇಬಿಡಿ,

ಏಸ್ ಬಾಡಿ ರಚನೆ,

ಹೆಡ್ ರೆಸ್ಟ್,

ಚಾಲಕ ಮತ್ತು ಮುಂಭಾಗದ ಚಾಲಕ ಎಸ್ ಆರ್ ಎಸ್ ಏರ್ ಬ್ಯಾಗ್,

ಆ್ಯಂಟಿ ಥೆಫ್ಟ್ ಸಿಸ್ಟಂ,

ಪವರ್ ವಿಂಡೋ (ಮುಂಭಾಗ ಮತ್ತು ಹಿಂಭಾಗ)

02. ಪ್ರತಿಸ್ಪರ್ಧಿಗಳು

02. ಪ್ರತಿಸ್ಪರ್ಧಿಗಳು

ದೇಶದ ಅಗ್ರ ಕಾರು ಸಂಸ್ಥೆಗಳಾದ ಮಾರುತಿ ಸುಜುಕಿ ಸಿಯಾಝ್, ಹ್ಯುಂಡೈ ವರ್ನಾ, ಫೋರ್ಡ್ ಫಿಯೆಸ್ಟಾ, ಫೋಕ್ಸ್ ವ್ಯಾಗನ್ ವೆಂಟೊ, ಸ್ಕೋಡಾ ರಾಪಿಡ್ ಮುಂತಾದ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಹೋಂಡಾ ಸಿಟಿ ಯಶ ಕಂಡಿದೆ.

01. ನಡೆದು ಬಂದ ಹಾದಿ

01. ನಡೆದು ಬಂದ ಹಾದಿ

ಹೋಂಡಾ ಸಿಟಿ ಮೊದಲ ಬಾರಿಗೆ 1998 ಜನವರಿ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಈ ಮೂಲಕ ಮೂರು ತಲೆಮಾರಿನ ಮಾದರಿಗಳಲ್ಲಾಗಿ ಒಟ್ಟು 4.3 ಲಕ್ಷ ಯುನಿಟ್ ಗಳ ಮಾರಾಟವನ್ನು ಸಾಧಿಸಿದೆ.

Most Read Articles

Kannada
English summary
10 things to know about Honda City the fastest Selling Mid-Size sedan Car
Story first published: Tuesday, April 7, 2015, 12:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X